ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಪ್ರೆಂಟಿಸ್‌ ತರಬೇತಿ

ಕರ್ನಾಟಕಕ್ಕೆ 25 ಸ್ಥಾನ ಮೀಸಲು | ಅರ್ಜಿ ಸಲ್ಲಿಕೆಗೆ ಜ.10ರ ಗಡುವು

Published on:

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕಾಗಿರುವ ಬ್ಯಾಂಕ್ ಆಫ್ ಇಂಡಿಯಾ(Bank of India)ದಲ್ಲಿ 2025-26ನೇ ಸಾಲಿಗೆ 1961ರ ಅಪ್ರೆಂಟಿಶಿಪ್‌ ಕಾಯ್ದೆಯಡಿ ಅಪ್ರೆಂಟಿಸ್‌ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ರಾಜ್ಯಗಳಲ್ಲಿರುವ ತನ್ನ ಬ್ಯಾಂಕ್‌ ಶಾಖೆಗಳಲ್ಲಿ 400 ಅಪ್ರೆಂಟಿಸ್‌ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಂಡು ತರಬೇತಿ ನೀಡಲಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜ.10 ಕೊನೆಯ ದಿನವಾಗಿದೆ. ಯಾವುದೇ ಪದವೀಧರರು ಅರ್ಜಿ ಸಲ್ಲಿಕೆಗೆ ಅರ್ಹರು. ಆಸಕ್ತ ಅಭ್ಯರ್ಥಿಗಳು NATS ಅಧಿಕೃತ ವೆಬ್ ಸೈಟ್ https://nats.education.gov.in/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಡಿಸೆಂಬರ್ 25, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 10, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜನವರಿ 10, 2026

ವಲಯವಾರು ಖಾಲಿ ಇರುವ ಅಪ್ರೆಂಟಿಸ್ ತರಬೇತಿ ವಿವರಗಳು:

ಅಸ್ಸಾಂ – 10
ಬಿಹಾರ – 25
ಗೋವಾ – 05
ಗುಜರಾತ್ – 50
ಜಾರ್ಖಂಡ್ – 45
ಕರ್ನಾಟಕ – 25
ಕೇರಳ – 05
ಮಧ್ಯಪ್ರದೇಶ – 55
ಮಹಾರಾಷ್ಟ್ರ – 60
ನವದೆಹಲಿ – 10
ಒಡಿಶಾ – 15
ಪಂಜಾಬ್ – 05
ರಾಜಸ್ಥಾನ್ – 10
ತಮಿಳುನಾಡು – 10
ತ್ರಿಪುರ – 05
ಉತ್ತರಪ್ರದೇಶ – 20
ಉತ್ತರಖಂಡ – 05
ಪಶ್ಚಿಮ ಬಂಗಾಳ – 40

ಒಟ್ಟು – 400 ಸ್ಥಾನಗಳು

ಶೈಕ್ಷಣಿಕ ಅರ್ಹತೆ:

ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು. (ಅಭ್ಯರ್ಥಿಯು 01-04-2021 ಮತ್ತು 01-12-2025ರ ನಡುವೆ ತಮ್ಮ ಪದವಿಯಲ್ಲಿ ಉತ್ತೀರ್ಣರಾಗಿರಬೇಕು)

ವಯಸ್ಸಿನ ಮಿತಿ:

01-12-2025 ರಂತೆ;

ಕನಿಷ್ಠ ವಯಸ್ಸಿನ ಮಿತಿ – 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು

ವಯೋಮಿತಿ ಸಡಿಲಿಕೆ; ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ -10 ವರ್ಷಗಳು

ಆಯ್ಕೆ ಪ್ರಕ್ರಿಯೆ:

ಆನ್‌ಲೈನ್ ಪರೀಕ್ಷೆ
ಸ್ಥಳೀಯ ಭಾಷಾ ಪರೀಕ್ಷೆ
ದಾಖಲೆ ಪರಿಶೀಲನೆ
ಅಂತಿಮ ಆಯ್ಕೆ

ಸ್ಟೈಫಂಡ್:

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹13,000ವರೆಗೆ ಮಾಹೆಯಾನ ಶಿಷ್ಯವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ – 800ರೂ.
ಪ.ಜಾತಿ, ಪ.ಪಂಗಡ ಹಾಗೂ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ – 600ರೂ.
ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 400ರೂ.

ಅರ್ಜಿ ಸಲ್ಲಿಸುವ ವಿಧಾನ:

• ಮೊದಲಿಗೆ ಅಭ್ಯರ್ಥಿಗಳು NATS ಅಧಿಕೃತ ವೆಬ್ ಸೈಟ್ https://nats.education.gov.in/ಗೆ ಭೇಟಿ ನೀಡಿ.

• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಈಗಾಗಲೇ ನೋಂದಾಯಿಸಿದಲ್ಲಿ ನೋಂದಣಿ ಸಂಖ್ಯೆ, ಪಾಸ್ವರ್ಡ್ ಹಾಗೂ ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ.

• ನಂತರ ಅಭ್ಯರ್ಥಿಯು “ಬ್ಯಾಂಕ್ ಆಫ್ ಇಂಡಿಯಾ” ಪ್ರಕಟಿಸಿದ ಜಾಹೀರಾತಿನ ಪ್ರಕಾರ “ಜಾಹೀರಾತು ಮಾಡಿದ ಖಾಲಿ ಹುದ್ದೆಗಳ ವಿರುದ್ಧ ಅರ್ಜಿ ಸಲ್ಲಿಸಿ” ವಿಭಾಗಕ್ಕೆ ಹೋಗಿ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಸಲ್ಲಿಸಬೇಕು.

• ಅಭ್ಯರ್ಥಿಗಳು NATS ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ 48 ಗಂಟೆಗಳ ಒಳಗೆ info@bfsissc.com ನಿಂದ ಇಮೇಲ್ ಅನ್ನು ಸ್ವೀಕರಿಸುತ್ತಾರೆ, ಅಂತಿಮ “ಅರ್ಜಿಯನ್ನು ಭರ್ತಿ ಮಾಡಲು ಆಹ್ವಾನಿಸುತ್ತಾರೆ.

• ನಂತರ ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ- ವಿವರ ಹಾಗೂ ವಲಯದ ಆಯ್ಕೆಗಳನ್ನು ನಮೂದಿಸಬೇಕು.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.

• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.

• ಅಂತಿಮವಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು NATS ಪೋರ್ಟಲ್ ನಿಂದ ನೀಡಲಾದ ತಮ್ಮ ದಾಖಲಾತಿ ಐಡಿಯನ್ನು ಬರೆದಿಟ್ಟುಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitebankofindia.bank.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಪ್ರೆಂಟಿಸ್‌ ತರಬೇತಿ”

Leave a Comment