ಆರ್‌ಆರ್‌ಬಿ NPTC ಯುಜಿ ಸಿಬಿಟಿ-2ರ ಕೀ ಉತ್ತರ ಪ್ರಕಟ

Published on:

ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ (ಪದವಿಪೂರ್ವ) ಹಂತದ ಹುದ್ದೆಗಳ ನೇಮಕಾತಿಗಾಗಿ ಡಿ.20ರಂದು ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆ-2ರ ಪರೀಕ್ಷೆಯ ಕೀ ಉತ್ತರವನ್ನು ಬುಧವಾರ ಬಿಡುಗಡೆಗೊಳಿಸಿದೆ.

ಆರ್‌ಆರ್‌ಬಿ ಸಿಇಎನ್‌ ಸಂಖ್ಯೆ 06/2024ರಡಿ ಒಟ್ಟು 3445 ಹುದ್ದೆಗಳ ಭರ್ತಿಗಾಗಿ ಅಧಿಸೂಚಿಸಲಾಗಿತ್ತು. ಸದರಿ ಪರೀಕ್ಷೆಯ ಕೀ ಉತ್ತರವನ್ನು ಆರ್‌ಆರ್‌ಬಿ ಅಧಿಕೃತ ಜಾಲತಾಣ https://www.rrbapply.gov.in/#/auth/homeದಲ್ಲಿ ಪ್ರಕಟಿಸಲಾಗಿದೆ. ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ 50 ರೂ. ಶುಲ್ಕ ಜೊತೆಗೆ ಪ್ರತಿ ಪ್ರಶ್ನೆಗೆ ಅನ್ವಯವಾಗುವ ಬ್ಯಾಂಕ್ ಸೇವಾ ಶುಲ್ಕಗಳನ್ನು ಪಾವತಿಸುವ ಮೂಲಕ ಡಿ.30ರೊಳಗೆ ಆಕ್ಷೇಪಣೆ ಸಲ್ಲಿಸಬಹುದು.

ಆಕ್ಷೇಪಣೆ ಸಲ್ಲಿಸುವ ವಿಧಾನ:

• RRB ಅಧಿಕೃತ ಜಾಲತಾಣ https://www.rrbapply.gov.in/#/auth/homeಕ್ಕೆ ಭೇಟಿ ನೀಡಿ.

• ನಂತರ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ.

• RRB CEN NO 06/2024 – ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಲಿಂಕ್ ಮೇಲೆ ಟ್ಯಾಪ್ ಮಾಡಿ.

• ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ನಿಗದಿ ಪಡಿಸಿರುವ ಶುಲ್ಕವನ್ನು ಪಾವತಿಸಿ ಆಕ್ಷೇಪಣೆ ಸಲ್ಲಿಸಬಹುದು.

Important Direct Links:

RRB NTPC UG CBT 2 Answer Key 2025 LinkCheck Now
Official WebsiteRRBs
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

4 thoughts on “ಆರ್‌ಆರ್‌ಬಿ NPTC ಯುಜಿ ಸಿಬಿಟಿ-2ರ ಕೀ ಉತ್ತರ ಪ್ರಕಟ”

Leave a Comment