ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮ ಮೇಲ್ವಿಚಾರಣೆ ಮಾಡಲು ವಲಯವಾರು ಕೀಟಶಾಸ್ತ್ರಜ್ಞ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮವನ್ನು ಮೇಲ್ವಿಚಾರಣೆ ಮಾಡಲು ವಲಯವಾರು ಒಬ್ಬರಂತೆ ಒಟ್ಟು 8 ಕೀಟಶಾಸ್ತ್ರಜ್ಞ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ನಿಯೋಜಿಸಿಕೊಳ್ಳಲು ವಾಕ್ ಇನ್ ಪ್ರಕ್ರಿಯೆ ಮೂಲಕ ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Highlights of Employment News
Organization Name – Bruhat Bengaluru Mahanagara Palike
Post Name – Consultant Entomology
Application Process – Offline
Job Location – Bengaluru
ವಾಕ್ ಇನ್ ಸಂದರ್ಶನದ ಪ್ರಮುಖ ದಿನಾಂಕಗಳು:
- ನೇಮಕಾತಿ ಪ್ರಕಟಣೆಯ ದಿನಾಂಕ – 19-05-2025
- ನೇರ ಸಂದರ್ಶನದ ದಿನಾಂಕ: 23-05-2025 ರಂದು ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ.
ಶೈಕ್ಷಣಿಕ ಅರ್ಹತೆ:
ಪ್ರಾಣಿಶಾಸ್ತ್ರ (ಕೀಟಶಾಸ್ತ್ರ ಒಂದು ವಿಷಯವಾಗಿ), ಸಾರ್ವಜನಿಕ ಆರೋಗ್ಯ ಕೀಟಶಾಸ್ತ್ರ/ವೈದ್ಯಕೀಯ ಕೀಟಶಾಸ್ತ್ರ/ಜೀವವಿಜ್ಞಾನ, ಜೀವ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ(PG). ಅಥವಾ ಪ್ರಾಣಿಶಾಸ್ತ್ರ/ಕೀಟಶಾಸ್ತ್ರ ವಿಷಯದಲ್ಲಿ ಪದವಿ (Degree)ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೃತ್ತಿ ಅನುಭವ:
ವೆಕ್ಟರ್ ಆಸಿಡ್ ಡಿಸೀಸಸ್ ಕಾಂಟ್ರಾ ಸ್ಟ್ರಾಟಜಿಗಳನ್ನು ಅನುಷ್ಠಾನಗೊಳಿಸುವಲ್ಲಿ ಕನಿಷ್ಠ 3 ವರ್ಷಗಳ ಅನುಭವ.
ಆರೋಗ್ಯ ಕಾರ್ಯಕ್ರಮ ಮೇಲ್ವಿಚಾರಣೆಯಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ
ವಯೋಮಿತಿ:
- ಕನಿಷ್ಠ ವಯಸ್ಸಿನ ಮಿತಿ – 25 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ – 45 ವರ್ಷಗಳು
ವೇತನ:
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ 30,000 ರೂ. ವೇತನ ನೀಡಲಾಗುವುದು
ಅರ್ಜಿ ಹಾಗೂ ವಾಕ್ ಇನ್ ಸಂದರ್ಶನ ನಡೆಯುವ ಸ್ಥಳ
ಆಸಕ್ತರು ಬಿಬಿಎಂಪಿ ವೆಬ್‌ಸೈಟ್ https://bbmp.gov.in/home. ನಲ್ಲಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿ. ಭರ್ತಿ ಮಾಡಿದ ಅರ್ಜಿಯೊಂದಿಗೆ
02 ಪ್ರತಿ Checklist ಹಾಗೂ ಸಂಬಂಧಿಸಿದ ವಿದ್ಯಾರ್ಹತೆಯ ಮೂಲ ದಾಖಲೆಗಳನ್ನು, ಒಂದು ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿ ಹಾಗೂ ಎರಡು ಭಾವಚಿತ್ರ ಕೊಂಡೊಯ್ಯಬೇಕು.
ವಾಕ್ ಇನ್ ಸಂದರ್ಶನ ನಡೆಯುವ ಸ್ಥಳ:
CPMO Room No. 304 3rd Floor, Annex-3, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್ ಆರ್ ಸ್ಕ್ವೇರ್, ಬೆಂಗಳೂರು -560 002
ಸಂದರ್ಶನ ನಡೆಸುವ ಸಮಯ:
23-05-2025 ರಂದು ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಸಂದರ್ಶನ ನಡೆಸಲಾಗುತ್ತದೆ*. ಮೇಲೆ ಸೂಚಿಸಿರುವ ಸ್ಥಳ ಮತ್ತು ದಿನಾಂಕದಂದು ವಾಕ್ ಇನ್ ಪ್ರಕ್ರಿಯೆಗೆ ಹಾಜರಾಗಬಹುದು.
ವಿಶೇಷ ಸೂಚನೆ: ಸದರಿ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವ ಅಥವಾ ಕಡಿಮೆಗೊಳಿಸುವ ಅಧಿಕಾರವನ್ನು ಪಾಲಿಕೆಯು ಹೊಂದಿರುತ್ತದೆ.
Important Direct Links:
Official Notification PDF | Download |
Official Website | bbmp.gov.in |
More Updates | Karnataka Help.in |