ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಮೆಟ್ರಿಕ್ ನಂತರದ ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಪದವಿ ಕೋರ್ಸ್ನಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಪೋಷಕರ ವಾರ್ಷಿಕ ಆದಾಯ ಮಿತಿಯು ಪ್ರವರ್ಗ-2, 2ಎ, 2ಬಿ, 3ಎ, 3ಬಿ ವರ್ಗದವರಿಗೆ 1 ಲಕ್ಷ ಹಾಗೂ ಪ್ರವರ್ಗ -1, ಪ.ಜಾ ಮತ್ತು ಪ.ಪಂಗಡ ವರ್ಗದವರಿಗೆ 2 ಲಕ್ಷ ಹೊಂದಿರಬೇಕು. ರಾಜ್ಯ ವಿದ್ಯಾರ್ಥಿನಿಲಯ ಪೋರ್ಟಲ್ https://shp.karnataka.gov.in/bcwdಗೆ ಭೇಟಿ ನೀಡಿ. ಅ.14ರೊಳಗೆ ಅರ್ಜಿ ಸಲ್ಲಿಸಿ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 6, 2025
ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ಅಕ್ಟೋಬರ್ 14, 2025(ವಿಸ್ತರಿಸಲಾಗಿದೆ)
ಆನ್ಲೈನ್ ಅರ್ಜಿ ಸಲ್ಲಿಕೆಗೆ ಈ ಹಿಂದೆ ಅಕ್ಟೋಬರ್ 4 ಅಂತಿಮ ದಿನವಾಗಿತ್ತು. ಸದರಿ ದಿನಾಂಕವನ್ನು ಅಕ್ಟೋಬರ್ 14, 2025ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಆಯುಕ್ತರು ಅ.3 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳ ಮಾಹಿತಿ;
SSP ವಿದ್ಯಾರ್ಥಿ ID
ವಿದ್ಯಾರ್ಥಿ ನೋಂದಣಿ ಸಂಖ್ಯೆ(University Registration Number)
ವಿದ್ಯಾರ್ಥಿಯ ಆಧಾರ್ ಕಾರ್ಡ್
ವಿದ್ಯಾರ್ಥಿಯ ಫೋಟೋ
ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
ವಿದ್ಯಾರ್ಥಿಯ ವಾಸಸ್ಥಳ ವಿವರ
ಅರ್ಜಿ ಸಲ್ಲಿಕೆ ಹೇಗೆ?
ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದ ಜಾಲತಾಣ (https://shp.karnataka.gov.in/bcwd)ಕ್ಕೆ ಭೇಟಿ ನೀಡಿ, ಈ ಕೆಳಗಿನ ಹಂತಗಳನ್ನು ಪೂರ್ಣಗೊಳಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
Bcm Hostel Portal
ಹಂತ 1 – ಜಾತಿ, ಆದಾಯ ಹಾಗೂ ವೈಯಕ್ತಿಕ ವಿವರಗಳು(Caste, Income & Personal Details) ಹಂತ 2 – ವಿದ್ಯಾರ್ಥಿಯ ಶೈಕ್ಷಣಿಕ ವಿವರಗಳು(Student Academic Details) ಹಂತ 3 – ವಸತಿನಿಲಯಗಳ ಆಯ್ಕೆ(Selection of Hostels) ಹಂತ 4 – ಪೂರ್ವವೀಕ್ಷಣೆ ಹಾಗೂ ಅರ್ಜಿ ಸಲ್ಲಿಕೆ(Preview and Final Submit)
ಅರ್ಜಿ ಸಲ್ಲಿಸಿದ ನಂತರ, ಅರ್ಜಿ ಸಲ್ಲಿಕೆ ಪ್ರತಿ ಜೊತೆಗೆ ನಿಗದಿತ ದಾಖಲೆಗಳನ್ನು ಸೇರಿಸಿ, ನೀವು ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಲಯದ ನಿಲಯಪಾಲಕರಿಗೆ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು/ಜಿಲ್ಲಾ ಕಚೇರಿಗೆ ಭೇಟಿ ನೀಡಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ – ಸಹಾಯವಾಣಿ ಸಂಖ್ಯೆ 8050770004 ಮತ್ತು 8050770005 ಸಂಪರ್ಕಿಸಬಹುದಾಗಿದೆ. ಇ-ಮೇಲ್ – bcwdhelpline@gmail.com ಗೆ ಸಂಪರ್ಕಿಸಬಹುದು.
3 thoughts on “ಸ್ನಾತಕೋತ್ತರ, ವೃತ್ತಿಪರ ಪದವಿ ಕೋರ್ಸ್; ವಿದ್ಯಾರ್ಥಿನಿಲಯ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ”
“I, Akash U R, have completed my degree. For my further education, I need a hostel. Since I am from a village, it is difficult for me to travel up and down every day. That is why I kindly request you to provide me with a hostel.”
“I, Akash U R, have completed my degree. For my further education, I need a hostel. Since I am from a village, it is difficult for me to travel up and down every day. That is why I kindly request you to provide me with a hostel.”
Kindly request please hostel give me
Sir I am 2023 24 I will write the exam did not come result in my name please use seat in erangal