ಸ್ನಾತಕೋತ್ತರ, ವೃತ್ತಿಪರ ಪದವಿ ಕೋರ್ಸ್‌; ವಿದ್ಯಾರ್ಥಿನಿಲಯ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬಿಸಿಎಂ (ಪೋಸ್ಟ್- ಮೆಟ್ರಿಕ್) ಹಾಸ್ಟೆಲ್ ಅರ್ಜಿ ಸಲ್ಲಿಕೆಗೆ ಅ.14ವರೆಗೆ ಕಾಲಾವಕಾಶ

Published on:

Updated On:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಮೆಟ್ರಿಕ್‌ ನಂತರದ ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಪದವಿ ಕೋರ್ಸ್‌ನಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಪೋಷಕರ ವಾರ್ಷಿಕ ಆದಾಯ ಮಿತಿಯು ಪ್ರವರ್ಗ-2, 2ಎ, 2ಬಿ, 3ಎ, 3ಬಿ ವರ್ಗದವರಿಗೆ 1 ಲಕ್ಷ ಹಾಗೂ ಪ್ರವರ್ಗ -1, ಪ.ಜಾ ಮತ್ತು ಪ.ಪಂಗಡ ವರ್ಗದವರಿಗೆ 2 ಲಕ್ಷ ಹೊಂದಿರಬೇಕು. ರಾಜ್ಯ ವಿದ್ಯಾರ್ಥಿನಿಲಯ ಪೋರ್ಟಲ್‌ https://shp.karnataka.gov.in/bcwdಗೆ ಭೇಟಿ ನೀಡಿ. ಅ.14ರೊಳಗೆ ಅರ್ಜಿ ಸಲ್ಲಿಸಿ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಸೆಪ್ಟೆಂಬರ್‌ 6, 2025
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ಅಕ್ಟೋಬರ್‌ 14, 2025(ವಿಸ್ತರಿಸಲಾಗಿದೆ)

ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಈ ಹಿಂದೆ ಅಕ್ಟೋಬರ್‌ 4 ಅಂತಿಮ ದಿನವಾಗಿತ್ತು. ಸದರಿ ದಿನಾಂಕವನ್ನು ಅಕ್ಟೋಬರ್‌ 14, 2025ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಆಯುಕ್ತರು ಅ.3 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳ ಮಾಹಿತಿ;

  • SSP ವಿದ್ಯಾರ್ಥಿ ID
  • ವಿದ್ಯಾರ್ಥಿ ನೋಂದಣಿ ಸಂಖ್ಯೆ(University Registration Number)
  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ವಿದ್ಯಾರ್ಥಿಯ ಫೋಟೋ
  • ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
  • ವಿದ್ಯಾರ್ಥಿಯ ವಾಸಸ್ಥಳ ವಿವರ

ಅರ್ಜಿ ಸಲ್ಲಿಕೆ ಹೇಗೆ?

ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದ ಜಾಲತಾಣ (https://shp.karnataka.gov.in/bcwd)ಕ್ಕೆ ಭೇಟಿ ನೀಡಿ, ಈ ಕೆಳಗಿನ ಹಂತಗಳನ್ನು ಪೂರ್ಣಗೊಳಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Bcm Hostel Portal
Bcm Hostel Portal

ಹಂತ 1 – ಜಾತಿ, ಆದಾಯ ಹಾಗೂ ವೈಯಕ್ತಿಕ ವಿವರಗಳು(Caste, Income & Personal Details)
ಹಂತ 2 – ವಿದ್ಯಾರ್ಥಿಯ ಶೈಕ್ಷಣಿಕ ವಿವರಗಳು(Student Academic Details)
ಹಂತ 3 – ವಸತಿನಿಲಯಗಳ ಆಯ್ಕೆ(Selection of Hostels)
ಹಂತ 4 – ಪೂರ್ವವೀಕ್ಷಣೆ ಹಾಗೂ ಅರ್ಜಿ ಸಲ್ಲಿಕೆ(Preview and Final Submit)

ಅರ್ಜಿ ಸಲ್ಲಿಸಿದ ನಂತರ, ಅರ್ಜಿ ಸಲ್ಲಿಕೆ ಪ್ರತಿ ಜೊತೆಗೆ ನಿಗದಿತ ದಾಖಲೆಗಳನ್ನು ಸೇರಿಸಿ, ನೀವು ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಲಯದ ನಿಲಯಪಾಲಕರಿಗೆ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು/ಜಿಲ್ಲಾ ಕಚೇರಿಗೆ ಭೇಟಿ ನೀಡಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ – ಸಹಾಯವಾಣಿ ಸಂಖ್ಯೆ 8050770004 ಮತ್ತು 8050770005 ಸಂಪರ್ಕಿಸಬಹುದಾಗಿದೆ. ಇ-ಮೇಲ್‌ – bcwdhelpline@gmail.com ಗೆ ಸಂಪರ್ಕಿಸಬಹುದು.

Important Direct Links:

BCM PG Hostel Online Application 2025-26 LinkApply Now
Official Websitebcwd.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

3 thoughts on “ಸ್ನಾತಕೋತ್ತರ, ವೃತ್ತಿಪರ ಪದವಿ ಕೋರ್ಸ್‌; ವಿದ್ಯಾರ್ಥಿನಿಲಯ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ”

Leave a Comment