ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ಭಾರತ ಸರ್ಕಾರದ ಉದ್ಯಮವಾಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ ನಾನ್-ಎಕ್ಸಿಕ್ಯೂಟಿವ್(ಎಂಜಿನಿಯರಿಂಗ್ ಸಹಾಯಕ ಶಿಕ್ಷಣಾರ್ಥಿ ಮತ್ತು ತಂತ್ರಜ್ಞ-ಸಿ) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್, ಫಿಟ್ಟರ್, ಮೆಶಿನಿಸ್ಟ್, ಎಲೆಕ್ಟ್ರಿಶಿಯನ್ ಟ್ರೇಡ್/ವಿಭಾಗಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ನ.04ರೊಳಗೆ https://jobapply.in/BEL2025BNGEATTech/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಬೆಲ್ ಹೊರಡಿಸಿದ ಅಧಿಸೂಚನೆ ತಿಳಿಸಿದೆ.
ಅಧಿಸೂಚನೆ ಮತ್ತು ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಅಕ್ಟೋಬರ್ 15
ಅರ್ಜಿ ಸಲ್ಲಿಸಲು ಕೊನೆ ದಿನ – ನವೆಂಬರ್ 4, 2025
ಶೈಕ್ಷಣಿಕ ಅರ್ಹತೆ:
ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ;
ಎಂಜಿನಿಯರಿಂಗ್ ಸಹಾಯಕ ಶಿಕ್ಷಣಾರ್ಥಿ(ಇಎಟಿ) ಹುದ್ದೆಗೆ – ಮೂರು ವರ್ಷದ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ತಂತ್ರಜ್ಞ-ಸಿ ಹುದ್ದೆಗೆ – ಎಸ್ಸೆಸ್ಸೆಲ್ಸಿ + ಐಟಿಐ
**ಸಾಮಾನ್ಯ/ಇಡಬ್ಲ್ಯೂಎಸ್ / ಒಬಿಸಿ (ಎನ್ಸಿಎಲ್) ಶೇ.60ರಷ್ಟು, ಪ.ಜಾತಿ/ಪ.ಪಂ/ಪಿಡಬ್ಲ್ಯೂಬಿಡಿ ಶೇ.50 ರಷ್ಟು ಅಂಕ ಪಡೆದು ತೇರ್ಗಡೆ ಹೊಂದಿರಬೇಕು.
ವಯೋಮಿತಿ:
1.10.2025ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಅರ್ಜಿಗಳ ಶಾರ್ಟ್ ಲಿಸ್ಟ್ ಕಂಪ್ಯೂಟರ್ ಆಧಾರಿತ ಪರೀಕ್ಷೆ ದಾಖಲಾತಿ ಪರಿಶೀಲನೆ
ಸಂಬಳ:
ಇಎಟಿ ಹುದ್ದೆಗೆ – ವೇತನ ಶ್ರೇಣಿ – ರೂ.24,500 ರಿಂದ ರೂ.90,000/- ತಂತ್ರಜ್ಞ-ಸಿ ಹುದ್ದೆಗೆ – ವೇತನ ಶ್ರೇಣಿ – ರೂ.21,500/- ರಿಂದ ರೂ.82,000/-
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ(ಎನ್ಸಿಎಲ್)/ಇಡಬ್ಲ್ಯೂಎಸ್ ವರ್ಗದವರು 500+18% ಜಿಎಸ್ಟಿ ಅಂದರೆ 590/- ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪ.ಜಾತಿ/ಪ.ಪಂ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ..?
ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
ನಂತರ “Home » Careers » Job Notifications” ಮೇಲೆ ಕ್ಲಿಕ್ ಮಾಡಿ.
ಮುಂದೆ “Click here to Apply Online for the post of Non-Executives for Bangalore Complex (Application Form)” ಲಿಂಕ್ ಒತ್ತಿ, ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ, ಹೊಸ ಅಭ್ಯರ್ಥಿಗಳಾಗಿದ್ದಲ್ಲಿ ನೋಂದಣಿ ಮಾಡಿ.
Bel Non Executive Online Form 2025-26
ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಯನ್ನು ಸರಿಯಾಗಿ ತುಂಬಿರಿ.
ಕೊನೆಗೆ “Link for online payment of Application fee” ಲಿಂಕ್ ಒತ್ತಿ ಅರ್ಜಿ ಶುಲ್ಕ ಪಾವತಿಸಿ.
ITI
Iti automobile welder
B com
Hii
Diploma in mechanical engineering
Sslc BA
hi
Hi
B.com
ITI 1YEAR APPRENTICES experience
Bcom complete ✅
15 years experience in marketing.
Apprenticeship for b.com
Super
Interesting
Dear sir I am akshata from Bagalkot district
Yes sir