ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಸೂಪರ್ವೈಸರ್ (ಕಾರ್ಯಾಚರಣಾ ಮೇಲ್ವಿಚಾರಕರ) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮೆಟ್ರೋ ಯೋಜನಾ ವಿಭಾಗದಲ್ಲಿ ಕಾರ್ಯಾಚರಣಾ ಮೇಲ್ವಿಚಾರಕರ (ಕಾರ್ಯಾಚರಣೆ ಸುರಕ್ಷತೆ) ಒಟ್ಟು 04 ಹುದ್ದೆಗಳಿಗೆ ಅರ್ಹ ಮತ್ತು ಅನುಭವಿ ನಿವೃತ್ತ ರೈಲ್ವೆ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ಅರ್ಹತೆಯನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು BMRCL ಅಧಿಕೃತ ವೆಬ್ಸೈಟ್ https://english.bmrc.co.in/career/ಗೆ ಭೇಟಿ ನೀಡಿ. ನ.17ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನೇಮಕಾತಿ ಅಧಿಸೂಚನೆಯಲ್ಲಿ ಬಿಎಂಆರ್‌ಸಿಎಲ್ ತಿಳಿಸಿದೆ.
ಅರ್ಜಿಯ ಸಹಿ ಮಾಡಿದ ಮುದ್ರಣವನ್ನು ಸ್ವೀಕರಿಸಲು ಕೊನೆಯ ದಿನಾಂಕ – ನವೆಂಬರ್ 20, 2025
ಅರ್ಹತಾ ಮಾನದಂಡಗಳು:
BMRCL ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳು ರೈಲ್ವೆ ಸಂಸ್ಥೆಗಳಲ್ಲಿ ಸಂಚಾರ ನಿರೀಕ್ಷಕ/ನಿಲ್ದಾಣ ವ್ಯವಸ್ಥಾಪಕರಾಗಿ ಕೆಲಸ ಮಾಡಿದ ನಿವೃತ್ತ ರೈಲ್ವೆ ಉದ್ಯೋಗಿಯಾಗಿರಬೇಕು, ನಿಲ್ದಾಣದ ಕೆಲಸದ ಆದೇಶಗಳು ಮತ್ತು ಸುರಕ್ಷತಾ ಕೈಪಿಡಿಗಳನ್ನು ಸಿದ್ಧಪಡಿಸುವಲ್ಲಿ ಅನುಭವ ಹೊಂದಿರಬೇಕು, ತಾತ್ಕಾಲಿಕ ಕೆಲಸದ ಸೂಚನೆಗಳನ್ನು ಹೊಂದಿರಬೇಕು.
• ಕನ್ನಡ ಭಾಷೆ ತಿಳಿದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
ವಯಸ್ಸಿನ ಮಿತಿ:
28-10-2025 ರಂತೆ;
ಗರಿಷ್ಠ ವಯಸ್ಸಿನ ಮಿತಿ – 62 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 50,000 ರೂ.ವರೆಗೆ ವೇತನ ಹಾಗೂ ಕಂಪನಿಯ ನಿಯಮಗಳ ಪ್ರಕಾರ ಸಾರಿಗೆ ಮತ್ತು ಅನ್ವಯವಾಗುವ ಭತ್ಯೆಯನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:
• BMRCL ವೃತ್ತಿಜೀವನದ ಅಧಿಕೃತ ವೆಬ್ಸೈಟ್ https://english.bmrc.co.in/career/ ಗೆ ಭೇಟಿ ನೀಡಿ.
1) ಅಧಿಸೂಚನೆ ಸಂಖ್ಯೆ BMRCL/HR/0020/PRJ/2025 /ಮೇಲ್ವಿಚಾರಕ (ಕಾರ್ಯಾಚರಣೆ ಸುರಕ್ಷತೆ) – ವಿಭಾಗದ ಕೆಳಗೆಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಲಿಂಕ್ ಮೇಲೆ ಟ್ಯಾಪ್ ಮಾಡಿ.
Bmrcl Supervisor (Operation Safety) Online Form 2025
• ಅಧಿಸೂಚನೆ ಸಂಖ್ಯೆ ಹಾಗೂ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
• ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ, ಅರ್ಜಿಯಲ್ಲಿ ಕೇಳಲಾಗುವ ಸ್ವ- ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
• ಬಳಿಕ ಸಲ್ಲಿಸಿದ ಅರ್ಜಿ ಪ್ರತಿಯೊಂದಿಗೆ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ, ಜನನ ಪ್ರಮಾಣಪತ್ರದ ವಯಸ್ಸಿನ ಪುರಾವೆ ಪ್ರತಿ / 10 ನೇ ತರಗತಿ ಪ್ರಮಾಣಪತ್ರ, ಶೈಕ್ಷಣಿಕ ಅರ್ಹತೆಗಳು (10ನೇ ತರಗತಿಯಿಂದ ಕೊನೆಯ ಅರ್ಹತಾ ಪದವಿಯವರೆಗೆ), ಅನುಭವ ಪ್ರಮಾಣಪತ್ರಗಳು (ಪ್ರಸ್ತುತ ಮತ್ತು ಹಿಂದಿನ ಉದ್ಯೋಗಗಳು), ವಿವರವಾದ ರೆಸ್ಯೂಮ್/ಬಯೋಡೇಟಾ/ಸಿವಿ ಪ್ರತಿ ಹಾಗೂ ಯಾವುದೇ ಇತರ ಸಂಬಂಧಿತ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ನವೆಂಬರ್ 20ರೊಳಗೆ ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು.
✓ ವಿಳಾಸ: ಜನರಲ್ ಮ್ಯಾನೇಜರ್ (HR) i/c,ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, K.H. ರಸ್ತೆ, ಶಾಂತಿನಗರ, ಬೆಂಗಳೂರು 560027
• ಲಕೋಟೆಯ ಮೇಲೆ “ಕಾರ್ಯಾಚರಣಾ ಮೇಲ್ವಿಚಾರಕರ ಹುದ್ದೆಗೆ ಅರ್ಜಿ (ಕಾರ್ಯಾಚರಣೆ ಸುರಕ್ಷತೆ)” ಎಂದು ಬರೆಯಬೇಕು.
ತಾಂತ್ರಿಕ ಸಮಸ್ಯೆಗಳು ಕಂಡುಬಂದಲ್ಲಿ; BMRCL ಇಮೇಲ್ ಐಡಿhelpdesk@bmrc.co.in ಅನ್ನು ಸಂಪರ್ಕಿಸಿ.(ಇಮೇಲ್‌ನಲ್ಲಿ ನಿಮ್ಮ ಸಂಪರ್ಕ ಸಂಖ್ಯೆಯನ್ನು ನಮೂದಿಸಿ)
I am interested
Yes I am interested and I think I am eligible for this
Iam interested
PUC I am interested
I am a retired employee of the health department aged 64 i am interested post graduate in economics.given an opportunity I am interested to serve