ಭಾರತ ಸರ್ಕಾರದ ಸಂಪುಟ ಸಚಿವಾಲಯದಲ್ಲಿ 250 ಉಪ ಕ್ಷೇತ್ರ ಅಧಿಕಾರಿ(Deputy Field Officer) ಹುದ್ದೆಗಳ ಭರ್ತಿಗಾಗಿ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮಾನ್ಯ ಗೇಟ್ ಸ್ಕೋರ್ ಜೊತೆಗೆ ಸಂಬಂಧಿತ ವಿಷಯದಲ್ಲಿ ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ/ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸುದ್ದಿಯ ಕೊನೆಯಲ್ಲಿ ನೀಡಲಾದ ವಿಳಾಸಕ್ಕೆ ಡಿ.14ರೊಳಗೆ ತಲುಪುವಂತೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ
- ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 14, 2025
ವಿಷಯವಾರು ಖಾಲಿ ಇರುವ (ತಾತ್ಕಾಲಿಕ) ಹುದ್ದೆಗಳ ವಿವರ:
ಕಂಪ್ಯೂಟರ್ ವಿಜ್ಞಾನ/ಮಾಹಿತಿ ತಂತ್ರಜ್ಞಾನ – 124 ಹುದ್ದೆಗಳು
ಡೇಟಾ ಸೈನ್ಸ್/ಆರ್ಟಿಫಿಶಿಯಲ್ ಇಂಟೆಲಿಜೆನ್ಸ್- 10 ಹುದ್ದೆಗಳು
ಎಲೆಕ್ಟ್ರಾನಿಕ್ಸ್ /ಸಂವಹನ/ದೂರಸಂಪರ್ಕ – 95 ಹುದ್ದೆಗಳು
ಸಿವಿಲ್ ಇಂಜಿನಿಯರಿಂಗ್ – 02 ಹುದ್ದೆಗಳು
ಮೆಕ್ಯಾನಿಕಲ್ ಇಂಜಿನಿಯರಿಂಗ್ – 02 ಹುದ್ದೆಗಳು
ಭೌತಶಾಸ್ತ್ರ – 06 ಹುದ್ದೆಗಳು
ರಸಾಯನಶಾಸ್ತ್ರ – 04 ಹುದ್ದೆಗಳು
ಗಣಿತಶಾಸ್ತ್ರ – 02 ಹುದ್ದೆಗಳು
ಅಂಕಿಅಂಶಗಳು – 02 ಹುದ್ದೆಗಳು
ಭೂವಿಜ್ಞಾನ – 03 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ/ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಜೊತೆಗೆ ಅಭ್ಯರ್ಥಿಗಳು ಸಂಬಂಧಿತ ವಿಷಯ ಪತ್ರಿಕೆಯಲ್ಲಿ (ಮಾನ್ಯ ಗೇಟ್ ಸ್ಕೋರ್) ಗೇಟ್ 2023 ಅಥವಾ 2024 ಅಥವಾ 2025 ರಲ್ಲಿ ಅರ್ಹತಾ ಕಟ್-ಆಫ್ ಅಂಕಗಳನ್ನು ಗಳಿಸಿರಬೇಕು.
ವಯಸ್ಸಿನ ಮಿತಿ:
ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
ವಯೋಮಿತಿ ಸಡಿಲಿಕೆ; ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ -10 ವರ್ಷಗಳು
ಆಯ್ಕೆ ಪ್ರಕ್ರಿಯೆ:
- ಮಾನ್ಯ ಗೇಟ್ ಸ್ಕೋರ್ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್
- ಸಂದರ್ಶನ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 99,000ರೂ. ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಆಫ್ ಲೈನ್ ಮೂಲಕಅರ್ಜಿ ಸಲ್ಲಿಸುವ ವಿಧಾನ:
“Important Direct Links” ಶಿರ್ಷೀಕೆಯಡಿಯಲ್ಲಿ ನೀಡಲಾದ ಅರ್ಜಿ ನಮೂನೆ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ- ವಿವರಗಳನ್ನು (A-4 ಗಾತ್ರದ ಕಾಗದದಲ್ಲಿ ಟೈಪ್ ಮಾಡಿ, ಇಂಗ್ಲಿಷ್ ದೊಡ್ಡಕ್ಷರ (ಬ್ಲಾಕ್) ಅಕ್ಷರಗಳಲ್ಲಿ ಕಪ್ಪು ಅಥವಾ ನೀಲಿ ಶಾಯಿಯನ್ನು ಮಾತ್ರ ಬಳಸಿ ಭರ್ತಿ ಮಾಡಿ.
• 10ನೇ ತರಗತಿ, 12ನೇ ತರಗತಿ, ಬಿ.ಇ./ಬಿ.ಟೆಕ್./ಎಂ.ಎಸ್ಸಿ ಅಂಕ ಪಟ್ಟಿಗಳ ಜೆರಾಕ್ಸ್ ಪ್ರತಿ, ಜನನ ಪ್ರಮಾಣಪತ್ರ/ಮಾನ್ಯ ಗೇಟ್ ಸ್ಕೋರ್ ಕಾರ್ಡ್, ಭಾವಚಿತ್ರ ಹಾಗೂ ಇತ್ಯಾದಿ ಅಗತ್ಯ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿದ ಪ್ರತಿಗಳೊಂದಿಗೆ ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ಡಿಸೆಂಬರ್ 14 ರೊಳಗೆ ತಲುಪುವಂತೆ ಸಲ್ಲಿಸಬೇಕು.
ವಿಳಾಸ: ಪೋಸ್ಟ್ ಬ್ಯಾಗ್ ಸಂಖ್ಯೆ 001, ಲೋಧಿ ರಸ್ತೆ ಮುಖ್ಯ ಅಂಚೆ ಕಚೇರಿ, ನವದೆಹಲಿ-110003
Important Direct Links:
| Official Notification and Application PDF | Download |
| Official Website | cabsec.gov.in |
| More Updates | KarnatakaHelp.in |