ಪಿಎಂ ಕಿಸಾನ್‌ 21ನೇ ಕಂತಿನ ಹಣ ಬಿಡುಗಡೆ

ಸುಮಾರು 18,000 ಸಾವಿರ ಕೋಟಿ ರೂಪಾಯಿ ನೇರವಾಗಿ ರೈತರ ಬ್ಯಾಂಕ್‌ಗೆ ಜಮೆ

Published on:

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ನೋಂದಾಯಿತ 9 ಕೋಟಿ ರೈತರ ಬ್ಯಾಂಕ್‌ ಖಾತೆಗೆ ಪಿಎಂ ಕಿಸಾನ್‌ 21ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಡಿಜಿಟಲ್‌ ವರ್ಗಾವಣೆ ಮಾಡಿದರು.

ತಮಿಳುನಾಡಿನ ಕೊಯಮತ್ತೂರಿನಲ್ಲಿ ಬುಧವಾರ(ನ.19) ಮಧ್ಯಾಹ್ನ 1:30 ಗಂಟೆಗೆ ನಡೆದ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಹಣ ವರ್ಗಾವಣೆ ಹಾಗೂ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ ಉದ್ಘಾಟಿಸಿ, ಸುಮಾರು 18,000 ಸಾವಿರ ಕೋಟಿ ರೂಪಾಯಿಗಳನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಮೂಲಕ ಹಣ ಜಮೆ ಮಾಡಿದರು.

ವರ್ಷದಲ್ಲಿ 3 ಕಂತುಗಳು

ಪ್ರತಿ ರೈತರಿಗೆ ವರ್ಷದಲ್ಲಿ ಮೂರು ಕಂತುಗಳಾಗಿ ಒಟ್ಟು 6 ಸಾವಿರ ರೂಪಾಯಿಗಳನ್ನು ಜಮೆ ಮಾಡಲಾಗುತ್ತದೆ. ಇದು ರೈತರ ಆರ್ಥಿಕ ಸಬಲೀಕರಣ ಮತ್ತು ಕೃಷಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಯತ್ತ ಉತ್ತೇಜಿಸಲು ಮಹತ್ವದ ಹೆಜ್ಜೆಯಾಗಿದೆ.

ಅರ್ಹ ಫಲಾನುಭವಿಗಳು ಪಿಎಂ ಕಿಸಾನ್‌ ಅಧಿಕೃತ ಜಾಲತಾಣ https://pmkisan.gov.in/BeneficiaryStatus_New.aspದ ಮೂಲಕ ಹಣ ವರ್ಗಾವಣೆಯ ಸ್ಥಿತಿಯನ್ನು ಪರಿಶೀಲನೆ ಮಾಡಬಹುದು.

Important Direct Links:

PM Kisan Samman Nidhi 21th Installment Status Check LinkCheck Now
Official Websitepmkisan.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

4 thoughts on “ಪಿಎಂ ಕಿಸಾನ್‌ 21ನೇ ಕಂತಿನ ಹಣ ಬಿಡುಗಡೆ”

Leave a Comment