ರೈಲ್ವೆ ನೇಮಕಾತಿ ಮಂಡಳಿಯು CEN NO: 08/2024ರ ಅಡಿಯಲ್ಲಿ ಅಧಿಸೂಚಿಸಲಾದ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಸಂಬಂಧ ಮೊದಲನೇ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ಅಂತಿಮ ವೇಳಾಪಟ್ಟಿ ಹಾಗೂ ಸಿಟಿ ಇಂಟಿಮೇಶನ್ ಸ್ಲಿಪ್ ಅನ್ನು ಬುಧವಾರ (ನ.18)ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಜನವರಿ 22ರಂದು ಒಟ್ಟು 32,438 ಗ್ರೂಪ್ ಡಿ (7ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್ನ ಹಂತ 1ರ) ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚಿಸಲಾಗಿತ್ತು. ಮೊದಲ ಹಂತ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಯನ್ನು 2025ರ ನವೆಂಬರ್ 27ರಿಂದ 2026ರ ಜನವರಿ 16ರವರೆಗೆ ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷಾ ನಗರ, ದಿನಾಂಕ ಹಾಗೂ ಶಿಫ್ಟ್ಗಳ ಮಾಹಿತಿಯನ್ನು ಪರಿಶೀಲಿಸಲು ನ.19ರಿಂದ ಅವಕಾಶ ನೀಡಲಾಗಿದೆ.
RRB ಗ್ರೂಪ್ ಡಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಪ್ರವೇಶ ಪತ್ರ:
ಪರೀಕ್ಷಾ ದಿನದ ನಾಲ್ಕು ದಿನಗಳ ಮುಂಚೆ ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಹಾಗೂ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಇ-ಕರೆ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. (ಅಂದರೆ ನವೆಂಬರ್ 23 ಅಥವಾ 24ರಂದು ಪ್ರವೇಶ ಪತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ).
ಸಿಟಿ ಇಂಟಿಮೇಶನ್ ಸ್ಲಿಪ್ ಡೌನ್ಲೋಡ್ ಮಾಡುವ ವಿಧಾನ
• ಮೊದಲಿಗೆ ಆರ್ ಆರ್ ಬಿ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281 ಕ್ಕೆ ಭೇಟಿ ನೀಡಿ.
• ನಿಮ್ಮ ಸಂಬಂಧಿತ RRB ಪ್ರದೇಶದ ಅಧಿಕೃತ ವೆಬ್ಸೈಟ್ ಆಯ್ಕೆ ಮಾಡಿ.
• ಬಳಿಕ ಇತ್ತೀಚಿನ ನವೀಕರಣಗಳು ವಿಭಾಗಿದ ಕೆಳಗೆ ನೀಡಲಾಗಿರುವ – “08/2024 The City Intimation Link for CBT of CEN 08/2024 (Recruitment for Various Posts in Level 1 of 7th CPC Pay Matrix)” ಆಯ್ಕೆಯ ಮೇಲೆ ಟ್ಯಾಪ್ ಮಾಡಿ. (ಅಥವಾ ನೇರವಾಗಿ https://rrb.digialm.com/EForms/configuredHtml/33015/96410/login.html ಲಿಂಕ್ ಭೇಟಿ ನೀಡಿ)
• ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕ ನಮೂದಿಸಿ ಲಾಗಿನ್ ಆಗಿ.
• ನಂತರ ಸಿಟಿ ಇಂಟಿಮೇಶನ್ ಸ್ಲಿಪ್ ಡೌನ್ಲೋಡ್ ಮಾಡಿ ಪರೀಕ್ಷಾ ನಗರ, ದಿನಾಂಕ ಹಾಗೂ ಶಿಫ್ಟ್ ಗಳನ್ನು ಪರಿಶೀಲಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ: RRB ಅಧಿಕೃತ ಜಾಲತಾಣ www.rrbapply.gov.in ಕ್ಕೆ ಭೇಟಿ ನೀಡಿ ಅಥವಾ ಯಾವುದೇ ಪ್ರಶ್ನೆಗಳು ಅಥವಾ ಸ್ಪಷ್ಟೀಕರಣದ ಅಗತ್ಯವಿದ್ದರೆ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ – 9513631887 ಅನ್ನು ಸಂಪರ್ಕಿಸಬಹುದು.
Important Direct Links:
| RRB Group D Admit Card and City intimation Slip 2025 Notice PDF | Download |
| RRB Group D City intimation Slip 2025 Check Link | Check Now |
| Official Website | RRBs |
| More Updates | KarnatakaHelp.in |
Railway job
RRB group D exam Date
My exam date
The city intimation is not shown to my number
A/p.k k koppa t/d,belgum
Government job
I am handicapped
My Exam Date
RRB