ಸಂಪುಟ ಸಚಿವಾಲಯ(CS)ದಲ್ಲಿ ಕ್ಷೇತ್ರ ಅಧಿಕಾರಿಗಳ ಭರ್ತಿ: ಹೀಗೆ ಅಪ್ಲೈ ಮಾಡಿ

Published on:

ಭಾರತ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿಯೇಟ್‌(ಸಂಪುಟ ಸಚಿವಾಲಯ)ನಲ್ಲಿ ಗ್ರೂಪ್ ‘ಎ’ ಹಿರಿಯ ಕ್ಷೇತ್ರ ಅಧಿಕಾರಿ(ತಾಂತ್ರಿಕ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದ್ದು, ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು 25 ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಬಿ.ಇ/ಬಿ.ಟೆಕ್/ಎಂಎಸ್‌ಸಿ ಪದವಿ ಜೊತೆಗೆ ಸಂಬಂಧಿತ ವಿಷಯ ಗೇಟ್ ಸ್ಕೋರ್ ಅರ್ಹತೆಯನ್ನು ಹೊಂದಿರುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಜು.12ರೊಳಗೆ ಭರ್ತಿ ಮಾಡಿದ ಅರ್ಜಿ ನಮೂನೆ ಜತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ‘ಪೋಸ್ಟ್ ಬ್ಯಾಗ್ ಸಂಖ್ಯೆ 001, ಲೋಧಿ ರಸ್ತೆ ಮುಖ್ಯ ಅಂಚೆ ಕಚೇರಿ, ನವದೆಹಲಿ-110003’ ವಿಳಾಸಕ್ಕೆ ಸಾಮಾನ್ಯ ಪೋಸ್ಟ್ ಮೂಲಕ ಕಳುಹಿಸಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜೂನ್ 13, 2026
  • ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 12, 2026

ವಿಷಯವಾರು ಖಾಲಿ ಇರುವ ಹುದ್ದೆಗಳ ವಿವರ:

• ಕಂಪ್ಯೂಟರ್ ಸೈನ್ಸ್/ಇನ್ಫಾರ್ಮಶನ್ ಟೆಕ್ನಾಲಜಿ – 10 ಹುದ್ದೆಗಳು
• ಎಲೆಕ್ಟ್ರಾನಿಕ್ಸ್ /ಕಮ್ಯುನಿಕೇಶನ್/ ಟೆಲಿಕಮ್ಯುನಿಕೇಷನ್ – 10 ಹುದ್ದೆಗಳು
• ಡೇಟಾ ಸೈನ್ಸ್/ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಕಂಪ್ಯೂಟರ್ ಸೈನ್ಸ್ ವಿತ್ ಸ್ಪೆಷಲೈಜೇಷನ್ ಇನ್ ಡೇಟಾ ಸೈನ್ಸ್/ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – 03 ಹುದ್ದೆಗಳು
• ಮ್ಯಾಥಮೆಟಿಕ್ಸ್ – 01 ಹುದ್ದೆ
• ಸಿವಿಲ್ ಎಂಜಿನಿಯರಿಂಗ್ – 01 ಹುದ್ದೆ

ಶೈಕ್ಷಣಿಕ ಅರ್ಹತೆ:

ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಬಿ.ಇ/ಬಿ.ಟೆಕ್/ಎಂಎಸ್‌ಸಿ ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ಸಂಬಂಧಿತ ವಿಷಯ ಪತ್ರಿಕೆಯಲ್ಲಿ 2024/2025/2026ರಲ್ಲಿ (ಮಾನ್ಯ ಗೇಟ್ ಸ್ಕೋರ್) ಅರ್ಹತಾ ಕಟ್-ಆಫ್ ಅಂಕಗಳನ್ನು ಗಳಿಸಿರಬೇಕು.

ವಯಸ್ಸಿನ ಮಿತಿ:

ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು

ವಯೋಮಿತಿ ಸಡಿಲಿಕೆ: ಸರ್ಕಾರಿ ನಿಯಮಗಳ ಅನುಸಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ:

  • ಮಾನ್ಯ ಗೇಟ್ ಸ್ಕೋರ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್
  • ಸಂದರ್ಶನ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ವೇತನ:

ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ರೂ.1,30,000ವರೆಗೆ ಆರಂಭಿಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಉಲ್ಲೇಖಿಸಲಾಗಿರುವುದಿಲ್ಲ

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು ಕೆಳಗೆ ನೀಡಿ ಅರ್ಜಿ ನಮೂನೆಯನ್ನು (A4 ಪೇಪರ್‌ ಮಾತ್ರ ಬಳಸಿ) ಪ್ರಿಂಟ್‌ ತೆಗೆದುಕೊಂಡು ಮಾಹಿತಿ ತುಂಬಿ, ಜೊತೆಗೆ ನಿಗದಿತ ದಾಖಲೆಗಳನ್ನು ಲಗತ್ತಿಸಿ. ಈ ಕೆಳಗಿನ ವಿಳಾಸಕ್ಕೆ ಜುಲೈ 12ರೊಳಗೆ ತಲುಪುವಂತೆ ಪೋಸ್ಟ್ ಮೂಲಕ ಕಳುಹಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಪೋಸ್ಟ್ ಬ್ಯಾಗ್ ಸಂಖ್ಯೆ 001, ಲೋಧಿ ರಸ್ತೆ ಮುಖ್ಯ ಅಂಚೆ ಕಚೇರಿ, ನವದೆಹಲಿ-110003

Important Direct Links:

Official Notification PDFDownload
Application Form PDF LinkDownload
Official Websitecabsec.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment