ನೀಟ್‌-ಯುಜಿ ಮರು ಪರೀಕ್ಷೆ: ಪ್ರವೇಶ ಪತ್ರ ಬಿಡುಗಡೆ

Published on:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2026ನೇ ಸಾಲಿನ ನೀಟ್‌-ಯುಜಿ ಮರು ಪರೀಕ್ಷೆಯ ಪ್ರವೇಶ ಪತ್ರವನ್ನು ಭಾನುವಾರ ಬಿಡುಗಡೆ ಮಾಡಿದೆ.

ಪರೀಕ್ಷೆಯು ಜೂ.21ರಂದು ಮಧ್ಯಾಹ್ನ 02ರಿಂದ ಸಂಜೆ 05:15 ರವರೆಗೆ ಜರಗಲಿದ್ದು, ಪ್ರವೇಶ ಪತ್ರವನ್ನು ಜೂ.14ರಿಂದ ಸಂಸ್ಥೆಯ ಅಧಿಕೃತ ಜಾಲತಾಣ(https://neet.nta.nic.in/)ದಲ್ಲಿ ಲಭ್ಯವಿರುವ ಲಿಂಕ್‌ ಮುಖೇನ ಲಾಗಿನ್‌ ರುಜುವಾತುಗಳನ್ನು ಬಳಸಿಕೊಂಡು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಪ್ರವೇಶ ಪತ್ರ ಡೌನ್ಲೋಡ್‌ ಮಾಡುವಾಗ ಸಮಸ್ಯೆಗಳು ತಲೆದೋರಿದಲ್ಲಿ ಸಂಸ್ಥೆಯ ಸಹಾಯವಾಣಿ 011-40759000/011-69227700ಗೆ ಅಥವಾ ಇ-ಮೇಲ್‌ neetug2026@nta.ac.inಮೂಲಕ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಹಾನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ನೀಟ್‌-ಯುಜಿ ಮರು ಪರೀಕ್ಷೆಯ ಪ್ರವೇಶ ಪತ್ರ ಹೇಗೆ ಡೌನ್ಲೋಡ್‌ ಮಾಡುವುದು.?

ಹಂತ-1 ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

ಹಂತ-2 ಮುಖಪಟದಲ್ಲಿ “Candidate Activity” ವಿಭಾಗದಡಿ ನೀಡಲಾದ “Admit Card for NEET (UG) – 2026 Re-Examination ಅಥವಾ Admit Card for NEET (UG) – 2026 Re-Examination(ಪರ್ಯಾಯ ಲಿಂಕ್‌)” ಮೇಲೆ ಕ್ಲಿಕ್ಕಿಸಿ.

ಹಂತ-3 ತದನಂತರ ತಮ್ಮತಮ್ಮ “ಅಪ್ಲಿಕೇಶನ್‌ ನಂಬರ್‌” ಹಾಗೂ “ಪಾಸ್‌ವರ್ಡ್‌” ಹಾಕಿ, ಕ್ಯಾಪ್ಚಾ ನಮೂದಿಸಿ, ಲಾಗಿನ್‌ ಮಾಡಿಕೊಂಡು ಪ್ರವೇಶ ಪತ್ರ ಪಡೆದುಕೊಳ್ಳಬಹುದು.

Important Direct Links:

NEET UG 2026 Re-Exam Admit Card Link-1Login Now
NEET UG 2026 Re-examination Admit Card Link-2Login Now
Official Websiteneet.nta.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment