ಹೊಸಕೋಟೆ: ಸೊಣ್ಣಹಳ್ಳಿಪುರ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ನಿರುದ್ಯೋಗಿ ಪುರುಷ ಮತ್ತು ಮಹಿಳೆಯರಿಗೆ ಜ.19 ರಿಂದ 13 ದಿನಗಳ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಅಂಬರೀಶ ಬಿ ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಓದಲು, ಬರೆಯಲು ತಿಳಿದಿರುವ ರಾಜ್ಯದ ಯಾವುದೇ ಜಿಲ್ಲೆಯ 18 ರಿಂದ 50 ವರ್ಷ ವಯೋಮಾನದವರು ಭಾಗವಹಿಸಬಹುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿ ಸಮಯದಲ್ಲಿ ಊಟ-ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಪೂರ್ಣಗೊಳಿಸುವವರಿಗೆ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯ ಪ್ರಮಾಣೀಕೃತ ಪ್ರಮಾಣ ಪತ್ರ ವಿತರಿಸಲಾಗುವುದು.




ಈ ಹಿಂದೆ ಮಶ್ರೂಮ್ ಬಗ್ಗೆ ಜಾಹೀರಾತು ನೀಡಿರುವಿರಿ ನಿಮಗೆ ತುಂಬಾ ಧನ್ಯವಾದಗಳು ನಾವು ಬಳ್ಳಾರಿ ಜಿಲ್ಲೆಯಿಂದ. ನಮಗೆ ಮಶ್ರೂಮ್ ಯಾವ ರೀತಿ ಬೆಳೆಸುವುದು ಎಂಬುದರ ಬಗ್ಗೆ ನಮಗೆ ತುಂಬಾ ಆಸಕ್ತಿ ಇದೆ ನಮಗೆ ಬೇರೆ ಕಾರಣಗಳಿಂದ ಪಾಲ್ಗೊಳ್ಳಲು ಆಗಲಿಲ್ಲ ದಯವಿಟ್ಟು ನಿಮ್ಮದಾಗಲಿ ಅಥವಾ ಬೇರೆ ಎಲ್ಲಾದರೂ ಇದ್ದರು ನಮಗೆ ತಿಳಿಸಿ
ಧನ್ಯವಾದಗಳು