ದೇಶದ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕಾಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಅಪ್ರೆಂಟಿಸ್ ಕಾಯ್ದೆಯಡಿ ಒಟ್ಟು 4500 ಸೀಟುಗಳ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸೇರಿದಂತೆ ದೇಶ ವಿವಿಧ ರಾಜ್ಯಗಳ ಬ್ಯಾಂಕಿನ ಶಾಖೆಗಳಿಗೆ ಪದವೀಧರ ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಯವರೆಗೆ ತರಬೇತಿ ನೀಡಲು ಆಯ್ಕೆ ಮಾಡಿಕೊಳ್ಳಲಿದ್ದು, ಅರ್ಜಿ ಸಲ್ಲಿಸಲು ಜೂನ್ 12ರಿಂದ 22ರವರೆಗೆ ಅವಕಾಶವಿದೆ. ಸದರಿ ಹುದ್ದೆಗಳ ಅರ್ಹತೆಗಳನ್ನು ಪೂರೈಸುವ ಆಸಕ್ತ ಅರ್ಜಿದಾರರು ಅರ್ಜಿ ಸಲ್ಲಿಕೆಗಾಗಿ ಎನ್‌ಎಟಿಎಸ್ ಅಧಿಕೃತ ವೆಬ್ ಸೈಟ್ https://nats.education.gov.in/ ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ – ಜೂನ್ 12, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 22, 2026
ಖಾಲಿ ಇರುವ ಅಪ್ರೆಂಟಿಸ್ ಸೀಟುಗಳ ವಿವರ:
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು(UT) 01
ಆಂಧ್ರಪ್ರದೇಶ 128
ಅರುಣಾಚಲಪ್ರದೇಶ 08
ಅಸ್ಸಾಂ 118
ಬಿಹಾರ 433
ಚಂಡೀಗಢ (UT) 09
ಛತ್ತೀಸ್‌ಗಢ 114
ದಾದ್ರಾ ನಗರ್ ಹವೇಲಿ 01
ದಮನ್ ಮತ್ತು ದಿಯು (UT) 01
ದೆಹಲಿ 97
ಗೋವಾ 28
ಗುಜರಾತ್ 305
ಹರಿಯಾಣ 137
ಹಿಮಾಚಲ ಪ್ರದೇಶ 55
ಜಮ್ಮು ಮತ್ತು ಕಾಶ್ಮೀರ (UT) 13
ಜಾರ್ಖಂಡ್ 87
ಕರ್ನಾಟಕ 105
ಕೇರಳ 116
ಲಡಾಕ್ (UT) 01
ಮಧ್ಯ ಪ್ರದೇಶ 459
ಮಹಾರಾಷ್ಟ್ರ 586
ಮಣಿಪುರ 07
ಮೇಘಾಲಯ 08
ಮಿಜೋರಾಮ್ 01
ನಾಗಾಲ್ಯಾಂಡ್ 07
ಒರಿಸ್ಸಾ 103
ಪಾಂಡಿಚೇರಿ (UT) 02
ಪಂಜಾಬ್ 142
ರಾಜಸ್ಥಾನ 170
ಸಿಕ್ಕಿಂ 15
ತಮಿಳುನಾಡು 202
ತೆಲಂಗಾಣ 100
ತ್ರಿಪುರ 05
ಉತ್ತರ ಪ್ರದೇಶ 580
ಉತ್ತರಾಖಂಡ 41
ಪಶ್ಚಿಮ ಬಂಗಾಳ 315
ವಿದ್ಯಾರ್ಹತೆ:
ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಪದವಿ ಸಮಾನ ಅರ್ಹತೆಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
31-05-2026 ರಂತೆ;
ಕನಿಷ್ಠ ವಯಸ್ಸಿನ ಮಿತಿ 20 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 28 ವರ್ಷಗಳು
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷಗಳು, ಪಿಡಬ್ಲ್ಯೂಬಿಡಿ ಒಬಿಸಿ ಅಭ್ಯರ್ಥಿಗಳಿಗೆ – 13 ವರ್ಷಗಳು, ಪಿಡಬ್ಲ್ಯೂಬಿಡಿ ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 15 ವರ್ಷಗಳು.
ಸ್ಟೈಫಂಡ್:
ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಒಂದು ವರ್ಷದ ಅವಧಿಗೆ ಮಾಸಿಕ ರೂ.15,000ವರೆಗೆ ಸ್ಟೈಫಂಡ್ ಅನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
- ಆನ್ಲೈನ್ ಪರೀಕ್ಷೆ
- ಸ್ಥಳೀಯ ಭಾಷಾ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
• ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ (ಪುರುಷ) ಅಭ್ಯರ್ಥಿಗಳಿಗೆ – 944ರೂ.
• ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ (ಮಹಿಳಾ) ಅಭ್ಯರ್ಥಿಗಳಿಗೆ – 708ರೂ.
• ಪ.ಜಾತಿ, ಪ. ಪಂಗಡ, ಪಿಡಬ್ಲ್ಯೂಬಿಡಿ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ – 236ರೂ.
ಅರ್ಜಿ ಸಲ್ಲಿಸುವ ವಿಧಾನ
• ಮೊದಲಿಗೆ ಅಭ್ಯರ್ಥಿಗಳು NATS ಅಧಿಕೃತ ವೆಬ್ ಸೈಟ್ https://nats.education.gov.in/ಗೆ ಭೇಟಿ ನೀಡಿ.
• ವಿದ್ಯಾರ್ಥಿ ನೋಂದಣಿ ಅಥವಾ ವಿದ್ಯಾರ್ಥಿ ಲಾಗಿನ್ ಆಗಿ.
• ಜಾಹೀರಾತು ಮಾಡಲಾದ ಖಾಲಿ ಹುದ್ದೆಗಳ ವಿರುದ್ಧ ಅರ್ಜಿ ಸಲ್ಲಿಸಿ ಅಡಿಯಲ್ಲಿ *2026-27ನೇ ಹಣಕಾಸು ವರ್ಷಕ್ಕಾಗಿ ಅಪ್ರೆಂಟಿಸ್ ಕಾಯ್ದೆ, 1961ರ ಅಡಿಯಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿ* ಜಾಹಿರಾತನ್ನು ಹುಡುಕಿ.
• ಅನ್ವಯಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ದಾಖಲಾತಿ ID ಯನ್ನು ಬರೆದಿಟ್ಟುಕೊಳ್ಳಿ.
• ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಹೆಚ್ಚಿನ ವಿವರ ಹಾಗೂ ಅರ್ಜಿ ಶುಲ್ಕ ಪಾವತಿ ಮಾಡಲು ಲಿಂಕ್ ಅನ್ನು BFSI SSC (info@bfsissc.com) ನಿಂದ ಇಮೇಲ್ ಅನ್ನು ಸ್ವೀಕರಿಸುತ್ತಾರೆ.
• ಬಳಿಕ https://beep.bfsissc.com ನಲ್ಲಿ ನೋಂದಾಯಿಸಿಕೊಳ್ಳಲು ಆಹ್ವಾನಿಸಲಾಗುತ್ತದೆ.
• ಮುಂದುವರೆದಂತೆ ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ವಿವರಗಳನ್ನು ಸ್ಕ್ಯಾನ್ ಮಾಡಿ, ಅರ್ಜಿ ಶುಲ್ಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.̳
Important Direct Links:
| Official Notification PDF | Download |
| NATS Online Registration Form Link Step-1 | Register Now |
| Online Registration Form Link Step-2 | Apply Now |
| Official Website | www.centralbank.bank.in |
| More Updates | KarnatakaHelp.in |
It is good