ಆರ್‌ಆರ್‌ಬಿ ಎನ್‌ಟಿಪಿಸಿ(ಪದವಿ) ಸಿಬಿಟಿ-1ರ ಫಲಿತಾಂಶ ಪ್ರಕಟ

Published on:

ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆ ಸಂಖ್ಯೆ.06/2025ರಡಿ ಅಧಿಸೂಚಿತ ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳ(ಎನ್‌ಟಿಪಿಸಿ) ಪದವಿ ಹಂತದ ಹುದ್ದೆಗಳ ಭರ್ತಿ ಸಂಬಂಧ ನಡೆಸಿದ್ದ ಕಂಪ್ಯೂಟರ್‌ ಆಧಾರಿತ ಪರೀಕ್ಷೆ-1ರ ಫಲಿತಾಂಶವನ್ನು ಶುಕ್ರವಾರ(ಜೂ.12) ಪ್ರಕಟಿಸಿದೆ.

ಪರೀಕ್ಷೆಯನ್ನು ಮಾ.13 ರಿಂದ 27ರವರೆಗೆ ನಡೆಸಲಾಗಿತ್ತು. ಮುಂದಿನ ಹಂತದ ಕಂಪ್ಯೂಟರ್‌ ಆಧಾರಿತ ಪರೀಕ್ಷೆ-2ಕ್ಕೆ ತಾತ್ಕಾಲಿಕವಾಗಿ ಶಾರ್ಟ್‌ಲಿಸ್ಟ್‌ ಆಗಿರುವ ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಕಟ್‌-ಆಫ್‌ ಪಟ್ಟಿಯನ್ನು ಆರ್‌ಆರ್‌ಬಿಯ ಆಯಾ ಪ್ರಾದೇಶಿಕ ಜಾಲತಾಣ(https://indianrailways.gov.in/railwayboard/view_section.jsp?lang=0&id=0,7,1281)ಗಳಲ್ಲಿ ಪ್ರಚುರಪಡಿಸಲಾಗಿದೆ. ಹಾಗೂ ಜಾಲತಾಣದಲ್ಲಿ ಒದಗಿಸಲಾದ ಲಿಂಕ್ ಮೂಲಕ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ಹಾಕಿ, ಲಾಗಿನ್ ಆಗುವ ಮೂಲಕ ತಮ್ಮ ವೈಯಕ್ತಿಕ ಅಂಕಗಳು ಮತ್ತು 2ನೇ ಹಂತದ ಸಿಬಿಟಿಗಾಗಿ ತಮ್ಮ ಅರ್ಹತಾ ಸ್ಥಿತಿಯನ್ನು ವೀಕ್ಷಿಸಬಹುದು.

ಸಿಬಿಟಿ-2 ಪರೀಕ್ಷೆಯು ಜುಲೈ ತಿಂಗಳ ಎರಡನೇ ವಾರದಲ್ಲಿ ನಡೆಸಲಾಗುವುದು ಎಂದು ಮಂಡಳಿ ತಿಳಿಸಿದ

ಆರ್‌ಆರ್‌ಬಿ ಬೆಂಗಳೂರು – ಶಾರ್ಟ್‌ಲಿಸ್ಟ್‌ ಆಗಿರುವ ಅಭ್ಯರ್ಥಿಗಳ ಪಟ್ಟಿ ಪಿಡಿಎಫ್‌ ಲಿಂಕ್‌ಡೌನ್ಲೋಡ್‌ ಮಾಡಿ
ಕಟ್‌-ಆಫ್‌ ಅಂಕಪಟ್ಟಿ ಪಿಡಿಎಫ್‌ ಲಿಂಕ್‌ಡೌನ್ಲೋಡ್‌ ಮಾಡಿ
Official WebsiteRRBs
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment