ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆ ಸಂಖ್ಯೆ 01/2025ರಡಿ ಅಧಿಸೂಚಿತ 10970 ಸಹಾಯಕ ಲೋಕೋ ಪೈಲೆಟ್(ಎಎಲ್‌ಪಿ) ಹುದ್ದೆಗಳ ನೇಮಕಾತಿಗಾಗಿ ನಡೆಸಲಾದ ಸಿಬಿಟಿ-I ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ.
ಫೆಬ್ರವರಿ 13, 16, 18 ಮತ್ತು ಮಾರ್ಚ್ 11ರಂದು ನಡೆದ ಕಂಪ್ಯೂಟರ್ ಆಧಾರಿತ ಪರೀಕ್ಷೆ-I ರಲ್ಲಿ ಅರ್ಹತೆ ಪಡೆದು ಎರಡನೇ ಹಂತದ ಸಿಬಿಟಿ-II ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್, ಕಟ್ ಆಫ್ ಮಾರ್ಕ್ಸ್ ಹಾಗೂ ಸ್ಕೋರ್ ಕಾರ್ಡ್ ಅನ್ನು ಆರ್‌ಆರ್‌ಬಿಯ ಆಯಾ ಪ್ರಾದೇಶಿಕ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ದಲ್ಲಿ ಬಿಡುಗಡೆ ಮಾಡಲಾಗಿದ್ದು, ಸದರಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಫಲಿತಾಂಶವನ್ನು ಪರಿಶೀಲಿಸಬಹುದು.
ಆರ್‌ಆರ್‌ಬಿ ಎಎಲ್‌ಪಿ ಸಿಬಿಟಿ-Iರ ಫಲಿತಾಂಶ ಪರಿಶೀಲಿಸುವ ವಿಧಾನ
• ಮೊದಲಿಗೆ ಅಭ್ಯರ್ಥಿಗಳು RRB ಅಧಿಕೃತ ವೆಬ್ಸೈಟ್ https://indianrailways.gov.in/railwayboard/view_section.jsp?lang=0&id=0,7,1281 ಗೆ ಭೇಟಿ ನೀಡಿ.
• ನಂತರ ನೀವು ಅರ್ಜಿ ಸಲ್ಲಿಸಿದ ರಾಜ್ಯ (ನಿಮ್ಮ ಸಂಬಂಧಿತ) RRB ಅಧಿಕೃತ ವೆಬ್ಸೈಟ್ ಅನ್ನು ಆಯ್ಕೆ ಮಾಡಿ.
• ನಂತರ ಇತ್ತೀಚಿನ ಸೂಚನೆಗಳಲ್ಲಿ ನೀಡಲಾಗಿರುವ “CEN 01/2025 (ಸಹಾಯಕ ಲೋಕೋ ಪೈಲಟ್ ಹುದ್ದೆ) CBT-IIಕ್ಕೆ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ CBT-I ಫಲಿತಾಂಶದ ಪಿಡಿಎಫ್ ತೆರೆಯುತ್ತದೆ.
• ಪಿಡಿಎಫ್ ನಲ್ಲಿ CBT-I ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಅನ್ನು ನಮೂದಿಸಿರಲಾಗುತ್ತದೆ.
• ನಿಮ್ಮ ನೋಂದಣಿ ಸಂಖ್ಯೆ ಪಿಡಿಎಫ್ ನಲ್ಲಿ ಲಭ್ಯವಿದ್ದರೆ, ನೀವು ನೇಮಕಾತಿಯ ಮುಂದಿನ ಹಂತವಾದ CBT-II ಪರೀಕ್ಷೆಗೆ ಅರ್ಹತೆ ಪಡೆದಿರುತ್ತೀರಿ.
• ಅದೇ ರೀತಿ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯ ಮೂಲಕ ಸ್ಕೋರ್ ಕಾರ್ಡ್ ಅನ್ನು ಸಹ ಪರಿಶೀಲಿಸಿಕೊಳ್ಳಬಹುದು.
• ಭವಿಷ್ಯದ ಬಳಕೆಗಾಗಿ ಅಭ್ಯರ್ಥಿಗಳು ಫಲಿತಾಂಶದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| Official Website | RRBs |
| More Updates | KarnatakaHelp.in |
Ravi Kumbar gokaka road kanbargi belagavi