‘ಸೆಸ್ಕಾಂ’ನಲ್ಲಿ ಶಿಷ್ಯವೃತ್ತಿ ತರಬೇತಿ; ಅರ್ಜಿ ಆಹ್ವಾನ

Published on:

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕಾಂ)ದಲ್ಲಿ 2026-27ನೇ ಸಾಲಿಗೆ ಅಪ್ರೆಂಟಿಸ್‌ಶಿಪ್‌ ಕಾಯ್ದೆಯಡಿ ಶಿಷ್ಯವೃತ್ತಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

80-ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್‌, 55-ಡಿಪ್ಲೊಮಾ ಅಪ್ರೆಂಟಿಸ್‌, ಹಾಗೂ 65-ಪದವೀಧರ ಅಪ್ರೆಂಟಿಸ್‌ ಸೇರಿದಂತೆ ಒಟ್ಟು 200 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಶಿಷ್ಯವೃತ್ತಿ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಮೇ 29ರವರೆಗೆ ಕಾಲಾವಕಾಶವನ್ನು ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಎನ್‌ಎಟಿಎಸ್‌ ಅಧಿಕೃತ ಜಾಲತಾಣ https://nats.education.gov.in/index.php ಕ್ಕೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ತರಬೇತಿ ಅವಧಿಯು ಒಂದು ವರ್ಷದ್ದಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮೇ 08, 2026
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಮೇ 29, 2026
  • ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ದಿನಾಂಕ – ಜೂನ್ 05, 2026
  • ದಾಖಲಾತಿ ಪರಿಶೀಲನೆಯ ದಿನಾಂಕ – ಜೂನ್ 15-19, 2026

ಶೈಕ್ಷಣಿಕ ಅರ್ಹತೆ:

✓ ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್‌ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ಶಾಖೆಗಳಲ್ಲಿ ಬಿ.ಇ ಅಥವಾ ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.

✓ ಡಿಪ್ಲೊಮಾ ಅಪ್ರೆಂಟಿಸ್‌ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಕಾಲೇಜು ಅಥವಾ ಸಂಸ್ಥೆಯಿಂದ ಸಂಬಂಧಿತ ಶಾಖೆಗಳಲ್ಲಿ 03 ವರ್ಷಗಳ ಡಿಪ್ಲೊಮಾ ಹೊಂದಿರಬೇಕು.

✓ ಪದವೀಧರ ಅಪ್ರೆಂಟಿಸ್‌ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದಬಿಎ/ಬಿ.ಎಸ್ಸಿ/ಬಿ.ಕಾಂ/ಬಿಬಿಎ/ಬಿಸಿಎ ಪದವಿ ಪೂರ್ಣಗೊಳಿಸಬೇಕು.

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2022, 2023, 2024, 2025 ಮತ್ತು 2026 ರಲ್ಲಿ ಪದವಿ/ಡಿಪ್ಲೊಮಾ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.

ವಯೋಮಿತಿ:

ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು

ವಯೋಮಿತಿ ಸಡಿಲಿಕೆ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮಾನದಂಡಗಳ ಅನುಸಾರ.

ಆಯ್ಕೆ ಪ್ರಕ್ರಿಯೆ:

  • ಅರ್ಹತಾ ಪರೀಕ್ಷೆ
  • ಅರ್ಹ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್
  • ದಾಖಲಾತಿ ಪರಿಶೀಲನೆ
  • ಅಂತಿಮ ಆಯ್ಕೆ

ಸ್ಟೈಫೆಂಡ್‌/ಶಿಷ್ಯವೇತನ:

ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್‌ ಹುದ್ದೆಗಳಿಗೆ ₹12,300
ಡಿಪ್ಲೊಮಾ ಅಪ್ರೆಂಟಿಸ್‌ ಹುದ್ದೆಗಳಿಗೆ ₹10,900
ಪದವೀಧರ ಅಪ್ರೆಂಟಿಸ್‌ ಹುದ್ದೆಗಳಿಗೆ ₹12,300

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಅರ್ಜಿ‌ ಸಲ್ಲಿಸುವ ವಿಧಾನ

→ ಮೊದಲಿಗೆ ಅಭ್ಯರ್ಥಿಗಳು NATS ಅಧಿಕೃತ ಜಾಲತಾಣ https://nats.education.gov.in/index.php ಕ್ಕೆ ಭೇಟಿ ನೀಡಿ.

→ ವಿದ್ಯಾರ್ಥಿ ಲಾಗಿನ್ ಆಯ್ಕೆ ಮಾಡಿ. ನೋಂದಾಯಿತ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.

→ ನಂತರ ಜಾಹೀರಾತು ಮಾಡಿದ ಖಾಲಿ ಹುದ್ದೆಗಳ ವಿರುದ್ಧ ಅರ್ಜಿ ಸಲ್ಲಿಸಿ ಅಡಿಯಲ್ಲಿ “ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ” ಹುಡುಕಿ.

→ ಬಳಿಕ *ಅರ್ಜಿ ಸಲ್ಲಿಸು* ಆಯ್ಕೆಯನ್ನು ಆರಿಸಿ.

→ ಈಗ ಅಭ್ಯರ್ಥಿಗಳು ಖಾಲಿ ಹುದ್ದೆಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿರುತ್ತೀರಿ.

→ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಅವರ ನೋಂದಾಯಿತ ಇ-ಮೇಲ್ ಐಡಿ ಮೂಲಕ ತಿಳಿಸಲಾಗುತ್ತದೆ.

→ ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳು ಈ ಕೆಳಗಿನ ವೇಳಾಸದಲ್ಲಿ ಜೂನ್ 15ರಿಂದ 19ರವರೆಗೆ ನಡೆಸಲಾಗುವ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದು.

ದಾಖಲಾತಿ ಪರಿಶೀಲನೆ ನಡೆಯುವ ವಿಳಾಸ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ” ಕಾರ್ಪೊರೇಟ್ ಕಚೇರಿ, #29, ವಿಜಯನಗರ 2ನೇ ಹಂತ, ಹಿನಕಲ್, ಮೈಸೂರು-570017

Important Direct Links:

Official Notification PDFDownload
Online Application Form LinkApply Now
Official Websitecescmysore.karnataka.gov.in
More UpdatesKarnatakahelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment