Chamarajanagar District Free Fisheries Equipment Online Application 2025
ಚಾಮರಾಜನಗರ ಮೀನುಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ 2025-26ನೇ ಸಾಲಿನಲ್ಲಿ ಒಳನಾಡು ಮೀನುಗಾರಿಕೆ ಸಹಾಯ ಹಾಗೂ ಮೀನು ಮಾರುಕಟ್ಟೆ ಸಹಾಯ ಯೋಜನೆಯಡಿ ಮೀನುಗಾರರಿಗೆ ಉಚಿತ ಸಲಕರಣೆ ಹಾಗೂ ಸಹಾಯಧನ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಪ.ಜಾತಿ ಮತ್ತು ಪ.ಪಂಗಡದ ಫಲಾನುಭವಿಗಳು ಚಾಮರಾಜನಗರ ಜಿಲ್ಲೆಯ ಅಧಿಕೃತ ಜಾಲತಾಣ https://chamrajnagar.nic.in/ಕ್ಕೆ ಭೇಟಿ ನೀಡಿ. ಸೆ.26ರ ಒಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ಧಾರೆ.
ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 06, 2025
ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 26, 2025
ಯೋಜನೆಗಳ ವಿವರ:
✓ ಒಳನಾಡು ಮೀನುಗಾರಿಕೆ ಸಹಾಯ ಯೋಜನೆಯಡಿ;
ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆ – SCP
ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆ – TSP
✓ ಮೀನು ಮಾರುಕಟ್ಟೆಗೆ ಸಹಾಯ ಯೋಜನೆಯಡಿ;
• ಐಸ್ ಬಾಕ್ಸ್ ನೊಂದಿಗೆ ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ – (ದ್ವಿಚಕ್ರ ವಾಹನ ಮತ್ತು ಶಾಖನಿರೋಧಕ ಪೆಟ್ಟಿಗೆ (ಮೊಪೆಡ್) ಖರೀದಿಗೆ ಸಹಾಯಧನ – ಮತ್ಸ್ಯವಾಹಿನಿ)
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ (JPG ಸ್ವರೂಪದಲ್ಲಿ)
ಜಾತಿ ಪ್ರಮಾಣಪತ್ರ (PDF ಫೈಲ್ನಲ್ಲಿ)
ಸಂಬಂಧಪಟ್ಟ ಮೀನುಗಾರಿಕೆ ಸಹಾಯಕ ನಿರ್ದೇಶಕರಿಂದ ಮೀನುಗಾರಿಕೆ ಚಟುವಟಿಕೆ ಪ್ರಮಾಣಪತ್ರ (PDF ಫೈಲ್ನಲ್ಲಿ)
ಮತ್ಸ್ಯ ವಾಹಿನಿ ಯೋಜನೆಗಾಗಿ ವಾಹನ ದರ (PDF ಫೈಲ್ನಲ್ಲಿ)
ವಿಧವೆ/ಅಂಗವಿಕಲ/HIV ಪೀಡಿತ ವ್ಯಕ್ತಿಯ ಪ್ರಮಾಣಪತ್ರದ ಪುರಾವೆ (PDF ಫೈಲ್ನಲ್ಲಿ) [ಅನ್ವಯಿಸಿದರೆ]
ವಯೋಮಿತಿ:
26-09-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 60 ವರ್ಷಗಳು
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಚಾಮರಾಜನಗರ ಜಿಲ್ಲಾಧಿಕಾರಿಗಳ ಅಧಿಕೃತ ವೆಬ್ ಸೈಟ್ https://chamrajnagar.nic.in/ ಗೆ ಭೇಟಿ ನೀಡಿ.
ಕಾರ್ಯಕ್ರಮಗಳು ವಿಭಾಗದ ಕೆಳಗೆ ನೀಡಲಾಗಿರುವ “2025-26 ವರ್ಷದಲ್ಲಿ ಮೀನುಗಾರಿಕೆ ಇಲಾಖೆಯಡಿಯಲ್ಲಿ ಮೀನುಗಾರಿಕೆ ಸಲಕರಣೆಗಳಿಗಾಗಿ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ – “ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ” ಲಿಂಕ್ ಮೇಲೆ ಟ್ಯಾಪ್ ಮಾಡಿ.
ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಬಳಿಕ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.