ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯ ಅಂಗಸಂಸ್ಥೆ ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ(CRRI)ಯಲ್ಲಿ ವಿವಿಧ ತಂತ್ರಜ್ಞರಲ್ಲದ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕಿರಿಯ ಹಿಂದಿ ಅನುವಾದಕ(01), ಭದ್ರತಾ ಸಹಾಯಕ ಮತ್ತು ಕಾವಲು & ವಾರ್ಡ್ ಸಹಾಯಕ(01), ಬಹುಕಾರ್ಯಕ ಸಿಬ್ಬಂದಿ(10) ಸೇರಿ ಒಟ್ಟು 12 ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು CRRI ಅಧಿಕೃತ ಜಾಲತಾಣ https://crridom.gov.in/en/recruitmentದಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯಲ್ಲಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ಫೆ.23ರೊಳಗೆ ಆನ್ಲೈನ್ ಮುಖೇನ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಫೆಬ್ರವರಿ 23, 2026
ಶೈಕ್ಷಣಿಕ ಅರ್ಹತೆ:
✓ ಕಿರಿಯ ಹಿಂದಿ ಅನುವಾದಕ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು ಅಥವಾ ಹಿಂದಿ/ಇಂಗ್ಲಿಷ್ನಲ್ಲಿ ತತ್ಸಮಾನ ಪದವಿ, ಇಂಗ್ಲಿಷ್/ಹಿಂದಿಯನ್ನು ಕಡ್ಡಾಯ ಅಥವಾ ಐಚ್ಛಿಕ ವಿಷಯವಾಗಿ ಅಥವಾ ಪದವಿ ಮಟ್ಟದಲ್ಲಿ ಪರೀಕ್ಷಾ ಮಾಧ್ಯಮವಾಗಿ ಅಧ್ಯಯನ ಮಾಡಿರಬೇಕು.
✓ ಭದ್ರತಾ ಸಹಾಯಕ ಮತ್ತು ಕಾವಲು & ವಾರ್ಡ್ ಸಹಾಯಕ ಹುದ್ದೆಗೆ; ಮಾಜಿ ಸೈನಿಕರು, ಸೇನೆಯಲ್ಲಿ ಜೆಸಿಒ ಅಥವಾ ಇತರ ಅರೆಸೈನಿಕ ಪಡೆಗಳಲ್ಲಿ ಸಮಾನ ಹುದ್ದೆ ಹಾಗೂ ಭದ್ರತಾ ಕೆಲಸದಲ್ಲಿ ಐದು ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು.
✓ ಬಹುಕಾರ್ಯಕ ಸಿಬ್ಬಂದಿ(MTS) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
23-02-2026ರಂತೆ;
✓ ಕಿರಿಯ ಹಿಂದಿ ಅನುವಾದಕ ಹುದ್ದೆಗೆ; ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
✓ ಭದ್ರತಾ ಸಹಾಯಕ ಮತ್ತು ಕಾವಲು & ವಾರ್ಡ್ ಸಹಾಯಕ ಹುದ್ದೆಗೆ; ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು
✓ ಬಹುಕಾರ್ಯಕ ಸಿಬ್ಬಂದಿ ಹುದ್ದೆಗೆ; ಗರಿಷ್ಠ ವಯಸ್ಸಿನ ಮಿತಿ – 25 ವರ್ಷಗಳು
ವಯೋಮಿತಿ ಸಡಿಲಿಕೆ: ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ಪ್ರಕ್ರಿಯೆ:
ಹುದ್ದೆಗಳಿಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ಒಳಗೊಂಡಿದೆ.
ಲಿಖಿತ ಪರೀಕ್ಷೆ
ಸ್ಕಿಲ್/ಟ್ರೇಡ್ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಸಂಬಳ:
ಕಿರಿಯ ಹಿಂದಿ ಅನುವಾದಕ ಹುದ್ದೆಗಳಿಗೆ – ₹35,400-1,12,400 ಭದ್ರತಾ ಸಹಾಯಕ ಮತ್ತು ಕಾವಲು & ವಾರ್ಡ್ ಸಹಾಯಕ ಹುದ್ದೆಗಳಿಗೆ – ₹35,400-1,12,400 ಬಹುಕಾರ್ಯಕ ಸಿಬ್ಬಂದಿ ಹುದ್ದೆಗಳಿಗೆ – ₹18,000-56,900
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹500 ಪ.ಜಾತಿ, ಪ.ಪಂಗಡ, ಮಹಿಳೆಯರು, ಪಿಡಬ್ಲ್ಯೂಬಿಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ.?
• CRRI ಅಧಿಕೃತ ಜಾಲತಾಣ https://crridom.gov.in/en/recruitmentಕ್ಕೆ ಭೇಟಿ ನೀಡಿ.
• ನಂತರ ನೇಮಕಾತಿ ವಿಭಾಗದಲ್ಲಿ ನೀಡಲಾಗಿರುವ “CSIR-CRRI ನಲ್ಲಿ JHT, SA & MTS ನೇಮಕಾತಿಗಾಗಿ ಜಾಹೀರಾತು – ಈಗಲೇ ಅರ್ಜಿ ಸಲ್ಲಿಸಿ(https://rectt.ngri.res.in/CRRI_2026/)” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ/ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
Csir Crri Non Tech 2026 Online Application Form
• ಅರ್ಜಿ ನಮೂನೆಯಲ್ಲಿ ಕೇಳಲಾಗುವ ಅರ್ಜಿ ಸಲ್ಲಿಸುವ ಹಂತಗಳನ್ನು ಪೂರ್ಣಗೊಳಿಸಿ.
• ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಎಚ್ಚರಿಕೆಯಿಂದ ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.