2026ರ 21ನೇ ಆವೃತಿಯ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯ ವೇಳಾಪಟ್ಟಿಯನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ಪ್ರಕಟಿಸಿದೆ.
ಫೆಬ್ರವರಿ 07 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಪತ್ರಿಕೆ-II ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5 ರವರೆಗೆ ಪತ್ರಿಕೆ-I ಪರೀಕ್ಷೆ ಹಾಗೂ ಫೆಬ್ರವರಿ 08ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಪತ್ರಿಕೆ-II ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5ರವರೆಗೆ ಪತ್ರಿಕೆ-I ಪರೀಕ್ಷೆ ದೇಶದ 140 ನಗರಗಳಲ್ಲಿ ಜರುಗಲಿದೆ ಎಂದು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ. ಸದರಿ CTET ಪರೀಕ್ಷೆಯ ವೇಳಾಪಟ್ಟಿಯನ್ನು CTET ಅಧಿಕೃತ ಜಾಲತಾಣ https://ctet.nic.in/ ದಲ್ಲಿ ಬಿಡುಗಡೆ ಮಾಡಲಾಗಿದೆ.
ಪರೀಕ್ಷೆಯ ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡುವ ವಿಧಾನ
• CTET ಅಧಿಕೃತ ಜಾಲತಾಣ https://ctet.nic.in/ ಕ್ಕೆ ಭೇಟಿ ನೀಡಿ.
• ನಂತರ ಸಾರ್ವಜನಿಕ ಸೂಚನೆಗಳು ವಿಭಾಗದಲ್ಲಿ ನೀಡಲಾಗಿರುವ “ಸಾರ್ವಜನಿಕ ಸೂಚನೆ: CTET ಪರೀಕ್ಷೆ ಫೆಬ್ರವರಿ 07 ಮತ್ತು 08, 2026 ರಂದು” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ CTET 2026ರ ಪರೀಕ್ಷಾ ವೇಳಾಪಟ್ಟಿಯ ಪಿಡಿಎಫ್ ತೆರೆದುಕೊಳ್ಳುತ್ತದೆ.
• ಅಭ್ಯರ್ಥಿಗಳು ಪರೀಕ್ಷಾ ದಿನಾಂಕ, ಸಮಯ, ನಗರ ಮಾಹಿತಿ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಪರಿಶೀಲಿಸಿಕೊಳ್ಳಿ/ಮುದ್ರಿಸಿ.
Important Direct Links:
| CTET 2026 Exam Schedule Notice PDF | Download |
| Official Website | ctet.nic.in |
| More Updates | KarnatakaHelp.in |