ವಾಯುಪಡೆ(IAF)ಯಲ್ಲಿ ಅಗ್ನಿವೀರ್‌ ವಾಯುಗಳ ಭರ್ತಿ: ಅರ್ಜಿ ಸಲ್ಲಿಕೆಗೆ ಅವಕಾಶ

Published on:

ದೇಶದ ಯುವಕ-ಯುವತಿಯರಿಗೆ ನಾಲ್ಕು ವರ್ಷಗಳ ಅವಧಿವರೆಗೆ ಮಿಲಿಟರಿ ಜೀವನ ಅನುಭವಿಸುವ ಅವಕಾಶ. ಭಾರತೀಯ ವಾಯುಪಡೆ (IAF)ಯು ಅಗ್ನಿಪಥ ಯೋಜನೆಯಡಿ ಅಗ್ನಿವೀರ್‌ ವಾಯು (ಇಂಟೆಕ್ 01/2027) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಕೆ ಕೊನೆಯ ದಿನವನ್ನು ಫೆ.08ರವರೆಗೆ ವಿಸ್ತರಣೆಯಾಗಿದೆ. ಆಸಕ್ತ ಮತ್ತು ಅರ್ಹ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು IAF ಅಧಿಕೃತ ವೆಬ್ ಸೈಟ್ https://cdn.digialm.com/EForms/configuredHtml/1258/97277/login.html ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜನವರಿ 12, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 08, 2026(ವಿಸ್ತರಣೆ)

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ/ಮಂಡಳಿಯಿಂದ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್‌ನೊಂದಿಗೆ ಇಂಟರ್ಮೀಡಿಯೇಟ್/10+2/ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50% ಒಟ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅಥವಾ

• ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಆಟೋಮೊಬೈಲ್/ ಕಂಪ್ಯೂಟರ್ ಸೈನ್ಸ್/ ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ/ ಮಾಹಿತಿ ತಂತ್ರಜ್ಞಾನ – ಸಂಬಂಧಿತ ಎಂಜಿನಿಯರಿಂಗ್‌ ವಿಭಾಗದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಅಥವಾ

• ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ವೃತ್ತಿಪರವಲ್ಲದ ವಿಷಯದೊಂದಿಗೆ ವೃತ್ತಿಪರ ಕೋರ್ಸ್‌ನಲ್ಲಿ ಒಟ್ಟು 50% ಅಂಕಗಳೊಂದಿಗೆ ಮತ್ತು ವೃತ್ತಿಪರ ಕೋರ್ಸ್‌ನಲ್ಲಿ ಇಂಗ್ಲಿಷ್‌ನಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

• ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ ಅಭ್ಯರ್ಥಿಗಳು ವೈದ್ಯಕೀಯ ಮಾನದಂಡಗಳನ್ನು ಹೊಂದಿರಬೇಕು. ಅಭ್ಯರ್ಥಿಗಳು ತಪ್ಪದೆ ಸಂಪೂರ್ಣ ಅಧಿಕೃತ ಅಧಿಸೂಚನೆಯನ್ನು ಓದಬೇಕು.

ವಯೋಮಿತಿ:

ಕನಿಷ್ಠ ವಯಸ್ಸಿನ ಮಿತಿ – ಜನವರಿ 01, 2006 ಮತ್ತು ಜುಲೈ 01, 2009ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

• ಗರಿಷ್ಠ ವಯಸ್ಸಿನ ಮಿತಿ – 21 ವರ್ಷಗಳು

ಸೇವಾ ಅವಧಿ:

ಅಗ್ನಿವೀರ್ ಯೋಜನೆಯಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ವಾಯುಪಡೆಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ ಹಾಗೂ 4 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಕೌಶಲ್ಯ ಸೆಟ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ವೇತನ ಹಾಗೂ ಅಗ್ನಿವೀರ್ ಕಾರ್ಪಸ್ ನಿಧಿ ವಿವರ:

• ಮೊದಲ ವರ್ಷ – ಮಾಸಿಕ ವೇತನ 30 ಸಾವಿರರೂ. ಅದರಲ್ಲಿ ಅಭ್ಯರ್ಥಿಗಳಿಗೆ 21 ಸಾವಿರರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 9 ಸಾವಿರರೂ. ಹೋಗುತ್ತದೆ.

• ಎರಡನೇ ವರ್ಷ -ಮಾಸಿಕ ವೇತನ 33 ಸಾವಿರರೂ. ಅದರಲ್ಲಿ ಅಭ್ಯರ್ಥಿಗಳಿಗೆ 23,100ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 9,900ರೂ. ಹೋಗುತ್ತದೆ.

• ಮೂರನೇ ವರ್ಷ -ಮಾಸಿಕ ವೇತನ 36,500ರೂ. ಅದರಲ್ಲಿ ಅಭ್ಯರ್ಥಿಗಳಿಗೆ 25,550ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 10,950ರೂ. ಹೋಗುತ್ತದೆ.

• ನಾಲ್ಕನೇ ವರ್ಷ -ಮಾಸಿಕ ವೇತನ 40 ಸಾವಿರರೂ. ಅದರಲ್ಲಿ ಅಭ್ಯರ್ಥಿಗಳಿಗೆ 28ಸಾವಿರ ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 12ಸಾವಿರ ರೂ. ಹೋಗುತ್ತದೆ.

• 4 ವರ್ಷಗಳ ನಂತರ, ಅಗ್ನಿವೀರ್ ಅಭ್ಯರ್ಥಿಗಳು 10.04 ಲಕ್ಷರೂ. (ಬಡ್ಡಿ ಸೇರಿದಂತೆ) ಸೇವಾ ನಿಧಿ ಪ್ಯಾಕೇಜ್ ಪಡೆಯುತ್ತಾರೆ.

ಆಯ್ಕೆ ವಿಧಾನ:

  • ಆನ್‌ಲೈನ್‌ ಲಿಖಿತ ಪರೀಕ್ಷೆ
  • ದೈಹಿಕ ಸಾಮರ್ಥ್ಯ ಪರೀಕ್ಷೆ
  • ಹೊಂದಾಣಿಕೆ ಪರೀಕ್ಷೆ(AT) 1
  • ಹೊಂದಾಣಿಕೆ ಪರೀಕ್ಷೆ(AT)2
  • ವೈದ್ಯಕೀಯ ಪರೀಕ್ಷೆ
  • ಅಂತಿಮ ಮೆರಿಟ್ ಪಟ್ಟಿ

ಅರ್ಜಿ ಶುಲ್ಕ:

ಸಾಮಾನ್ಯ ಓಬಿಸಿ ಇಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ – 550ರೂ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 550ರೂ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

• ಮೊದಲಿಗೆ ಅಭ್ಯರ್ಥಿಗಳು IAF ಅಧಿಕೃತ ವೆಬ್ ಸೈಟ್ https://cdn.digialm.com/EForms/configuredHtml/1258/97277/login.html ಗೆ ಭೇಟಿ ನೀಡಿ.

• ಬಳಿಕ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.

• ನಂತರ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitehttps://indianairforce.nic.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

4 thoughts on “ವಾಯುಪಡೆ(IAF)ಯಲ್ಲಿ ಅಗ್ನಿವೀರ್‌ ವಾಯುಗಳ ಭರ್ತಿ: ಅರ್ಜಿ ಸಲ್ಲಿಕೆಗೆ ಅವಕಾಶ”

Leave a Comment