CTET Feb 2026: ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

Published on:

ಫಾಲೋ ಮಾಡಿ
CTET February 2026 Admit Card
CTET Feb 2026 Admit Card

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಫೆ.07 ಮತ್ತು 08ರಂದು ನಡೆಸಲಿರುವ 2026ನೇ ಸಾಲಿನ 21ನೇ ಆವೃತ್ತಿಯ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರವನ್ನು ಗುರುವಾರ ಬಿಡುಗಡೆಗೊಳಿಸಿದೆ.

ಅಂದಿನ ದಿನ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಪತ್ರಿಕೆ-II ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5ರವರೆಗೆ ಪತ್ರಿಕೆ-Iರ ಪರೀಕ್ಷೆ ದೇಶದ 140 ನಗರಗಳಲ್ಲಿ ಜರುಗಲಿದೆ. ಪರೀಕ್ಷೆಗೆ ನೋಂದಾಯಿತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://ctet.nic.in/ನಲ್ಲಿ ಲಭ್ಯವಿರುವ ಲಿಂಕ್‌ಗಳ ಮೂಲಕ, ತಮ್ಮ ಅರ್ಜಿ ನಮೂನೆ ಸಂಖ್ಯೆ ಹಾಗೂ ಪಾಸ್‌ವರ್ಡ್‌ ನಮೂದಿಸಿ ಪ್ರವೇಶ ಪತ್ರವನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಪರೀಕ್ಷೆಯನ್ನು ಎರಡು ದಿನ ನಡೆಸಲಾಗುತ್ತಿದೆ ಎಂದು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

About the Author

ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕೆಲವು ವರುಷಗಳ ಅನುಭವ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

1 thought on “CTET Feb 2026: ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ”

Leave a Comment