CUET UG 2024: ಅರ್ಜಿ ಸಲ್ಲಿಕೆ ಮರು ಪ್ರಾರಂಭ, ಹೊಸ ದಿನಾಂಕ ಪ್ರಕಟ

Published on:

ಫಾಲೋ ಮಾಡಿ
CUET UG 2024 application Last Date extended

CUET UG 2024 application Last Date extended: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NIA) ನಡೆಸುವ ಸ್ನಾತಕ ಕೋರ್ಸ್‌ಗಳಿಗೆ ಕೇಂದ್ರೀಯ ವಿವಿಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನೀಡಲು ನಡೆಸುವ ಸಿಯುಇಟಿ ಯುಜಿ ರಿಜಿಸ್ಟ್ರೇಷನ್‌ಗೆ ಅವಧಿ ವಿಸ್ತರಣೆ ಮಾಡಲಾಗಿದ್ದು, ಸಾಮಾನ್ಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ -ಸಿಯುಇಟಿ ಯುಜಿ 2024 ಗೆ ಅರ್ಜಿ ಸಲ್ಲಿಸಲು ಏಪ್ರಿಲ್ 5 (ರಾತ್ರಿ 9:50) ರವರೆಗೆ ವಿಸ್ತರಣೆ ಮಾಡಲಾಗಿದೆ. ಇದರ ಕುರಿತಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆ ದಿನಾಂಕದ ಜತೆಗೆ ಶುಲ್ಕ ಪಾವತಿಗೆ ಕೊನೆ ದಿನ, ಅರ್ಜಿ ತಿದ್ದುಪಡಿಗೆ ಕಾಲಾವಕಾಶಗಳ ಕುರಿತು ಹೊಸ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದೆ ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ಆದ exams.nta.ac.in ಲಿಂಕ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಇದು ಎರಡನೇ ಬಾರಿಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿದ್ದು ಮೊದಲ ಬಾರಿಗೆ ಮಾರ್ಚ್ 26ರಂದು ಕೊನೆಯ ದಿನಾಂಕ ಎಂದು ನಿಗದಿಪಡಿಸಿತ್ತು. ಆದರೆ ಮಾರ್ಚ್ 26ರಿಂದ ಮಾರ್ಚ್ 31ರವರೆಗೆ ವಿಸ್ತರಿಸಿತ್ತು, ಈಗ ಎರಡನೇ ಬಾರಿ ಏಪ್ರಿಲ್ 1ರಿಂದ ಏಪ್ರಿಲ್ 5 ವರೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment