ವೈದ್ಯಾಧಿಕಾರಿ, ಫಿಜಿಶಿಯನ್, ಲ್ಯಾಬ್ ಟೆಕ್ನಿಷಿಯನ್ ಇತರೆ ಹುದ್ದೆಗಳ ನೇಮಕಾತಿ

Published on:

ಯಾದಗಿರಿ: ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿ ನಾನಾ ಹುದ್ದೆಗಳ ನೇರ ನೇಮಕಾತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ವಿವಿಧ ಸ್ಥಳಗಳಲ್ಲಿ ಖಾಲಿಯಿರುವ ತಜ್ಞ ವೈದ್ಯರು, ಫಿಜಿಶಿಯನ್, ವೈದ್ಯಾಧಿಕಾರಿಗಳು ಹಾಗೂ ಲ್ಯಾಬ್ ಟೆಕ್ನಿಷಿಯನ್ ಇತರೆ ಹುದ್ದೆಗಳು ಸೇರಿದಂತೆ ಒಟ್ಟು 32 ಸ್ಥಾನಗಳಿಗೆ ಮೆರಿಟ್ ಕಮ್ ರೋಸ್ಟರ್ ನಿಯಮದ ಅನುಸಾರ ಭರ್ತಿ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಸಲು ಮೇ 20ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಅಭ್ಯರ್ಥಿಗಳು ಯಾದಗಿರಿ ಜಿಲ್ಲೆಯ ಅಧಿಕೃತ ಜಾಲತಾಣ https://yadgir.nic.in/en/notice_category/recruitment/ ಕ್ಕೆ ಭೇಟಿ ನೀಡಿ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನೇಮಕಾತಿಯ ಪ್ರಮುಖ ದಿನಾಂಕಗಳು:

  • ನೇಮಕಾತಿ ಪ್ರಕಟಣೆಯ ದಿನಾಂಕ – ಮೇ 04, 2026
  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮೇ 05, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ 20, 2026

ಖಾಲಿ ಇರುವ ಹುದ್ದೆಗಳ ವಿವರ:

• ಮಕ್ಕಳ ತಜ್ಞ ವೈದ್ಯ 01 ಹುದ್ದೆ
• ಕಿವಿ ಮೂಗು ಗಂಟಲು ತಜ್ಞ 02 ಹುದ್ದೆಗಳು
• ಫಿಜಿಶಿಯನ್ 01 ಹುದ್ದೆ
• ವೈದ್ಯಾಧಿಕಾರಿ 07 ಹುದ್ದೆಗಳು
• ಡಿಸ್ಟಿಕ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ 01 ಹುದ್ದೆ
• ಎಪಿಡೆಮೋಲೊಜಿಸ್ಟ್ 01 ಹುದ್ದೆ
• ಡೆಂಟಲ್ ಹೈಜಿನಿಸ್ಟ್ 01 ಹುದ್ದೆ
• ಡೆಂಟಲ್ ಟೆಕ್ನಿಷಿಯನ್ 01 ಹುದ್ದೆ
• ಆಡಿಯೊಮೆಟ್ರಿಕ ಸಹಾಯಕ 01 ಹುದ್ದೆ
• ಶ್ರವಣದೋಷವುಳ್ಳ ಮಕ್ಕಳ ಬೋಧಕ 01
• ಶುಶ್ರೂಷಣ ಅಧಿಕಾರಿ 02 ಹುದ್ದೆಗಳು
• ಲ್ಯಾಬ್ ಟೆಕ್ನಿಷಿಯನ್ 02 ಹುದ್ದೆಗಳು
• ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ(ಎನ್.ಯು.ಹೆಚ್.ಎಂ) 02 ಹುದ್ದೆಗಳು
• ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ 09 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಹುದ್ದೆಗಳಿಗೆ ಅನುಗುಣವಾಗಿಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ, ಬಿ.ಎಸ್.ಸಿ ನರ್ಸಿಂಗ್/ ಸಂಬಂಧಿತ ವಿಷಯದಲ್ಲಿ ಡಿಪ್ಲೋಮಾ, ಎಂಎಸ್ಸಿ/ಪಿಎಚ್‌ಡಿ, ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿಗಳ ತರಬೇತಿ/ ಎಂಬಿಬಿಎಸ್ ಮತ್ತು ಸಂಬಂಧಿತ ವಿಭಾಗದಲ್ಲಿ (ತಜ್ಞತೆಯಲ್ಲಿ) ಸ್ನಾತಕೋತ್ತರ ಪದವಿಯೊಂದಿಗೆ ಕರ್ನಾಟಕ ಮೆಡಿಕಲ್ ಕೌನ್ಸಿಲಿಂಗ್‌ನಲ್ಲಿ ನೋಂದಣಿಯಾಗಿರಬೇಕು.

• ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.

ವಯೋಮಿತಿ:

ಗರಿಷ್ಠ ವಯಸ್ಸಿನ ಮಿತಿ 40 ರಿಂದ 65 ವರ್ಷಗಳು(ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ ಬದಲಾಗುತ್ತದೆ)

ಆಯ್ಕೆ ವಿಧಾನ:

ಸದರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್ ಕಮ್ ರೋಸ್ಟರ್ ನಿಯಮದ ಅನುಸಾರ ನೇರ ಸಂದರ್ಶನ ಹಾಗೂ ದಾಖಲಾತಿ ಪರಿಶೀಲನೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 14,000ರೂ. ಗಳಿಂದ 1,30,000ರೂ. ವರೆಗೆ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಉಲ್ಲೇಖಿಸಲಾಗಿರುವುದಿಲ್ಲ

ಅರ್ಜಿ ಸಲ್ಲಿಸುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು ಯಾದಗಿರಿ ಜಿಲ್ಲೆಯ ಅಧಿಕೃತ ಜಾಲತಾಣ https://yadgir.nic.in/en/notice_category/recruitment/ಕ್ಕೆ ಭೇಟಿ ನೀಡಿ.

• ಬಳಿಕ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯ ಅರ್ಜಿ ನಮೂನೆಯ ಮೇಲೆ ಕ್ಲಿಕ್ ಮಾಡಿ.

• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ, ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿ/ದೃಢೀಕರಣ ಪುಟವನ್ನು ಡೌನ್ಲೋಡ್ ಮಾಡಿ ಮುದ್ರಿಸಿ.

Important Direct Links:

Official Notification PDFDownload
Online Application Form LinkApply Now
Official Websiteyadgir.nic.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ವೈದ್ಯಾಧಿಕಾರಿ, ಫಿಜಿಶಿಯನ್, ಲ್ಯಾಬ್ ಟೆಕ್ನಿಷಿಯನ್ ಇತರೆ ಹುದ್ದೆಗಳ ನೇಮಕಾತಿ”

Leave a Comment