ಬೆಂಗಳೂರು: ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಅಡಿಯಲ್ಲಿ ಬರುವ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಲ್ಲಿ ಒಂದಾದ ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ಸ್ಥಾಪನೆ (LRDE)ಯಲ್ಲಿ ಅಪ್ರೆಂಟಿಸ್ ಕಾಯ್ದೆಯಡಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ನೇರ ಸಂದರ್ಶನಕ್ಕಾಗಿ ನೋಂದಣಿ ಆರಂಭವಾಗಿದೆ.
ಒಟ್ಟು 105 ಅಪ್ರೆಂಟಿಸ್ಗಳನ್ನು ಆಯ್ಕೆ ಮಾಡಿಕೊಂಡು, ಒಂದು ವರ್ಷದ ಅವಧಿಗೆ ತರಬೇತಿ ನೀಡಲಿದೆ. ತರಬೇತಿಗಳಿಗೆ ಸೇರ ಬಯಸುವ ಅರ್ಹ ಮತ್ತು ಆಸಕ್ತ ಐಟಿಐ ಅಭ್ಯರ್ಥಿಗಳು https://www.apprenticeshipindia.gov.inಗೆ ಹಾಗೂ ಇತರೆ ಅಭ್ಯರ್ಥಿಗಳು https://nats.education.gov.inನ ಮೂಲಕ ನ.4ಕ್ಕೆ ನಡೆಯುವ ನೇರ ಸಂದರ್ಶನಕ್ಕೆ ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ಅಧಿಸೂಚನೆ ತಿಳಿಸಿದೆ.
ಆನ್ಲೈನ್ ನಲ್ಲಿ ನೇರ ಸಂದರ್ಶನಗೆ ನೋಂದಾಯಿಸಲು ಆರಂಭ ದಿನ – ಅಕ್ಟೋಬರ್ 16
ನೇರ ಸಂದರ್ಶನ ನಡೆಯುವ ದಿನಾಂಕ – ನವೆಂಬರ್ 04, 2025
ಹುದ್ದೆಗಳ ವಿವರ:
ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ – 23 ಹುದ್ದೆಗಳು ಸಾಮಾನ್ಯ ಪದವೀಧರ ಅಪ್ರೆಂಟಿಸ್ – 25 ಹುದ್ದೆಗಳು ಎಂಜಿನಿಯರಿಂಗ್ ಡಿಪ್ಲೊಮಾ ಅಪ್ರೆಂಟಿಸ್ – 27 ಹುದ್ದೆಗಳು ಐಟಿಐ ಅಪ್ರೆಂಟಿಸ್ – 30 ಹುದ್ದೆಗಳು
ಒಟ್ಟು 105 ಅಪ್ರೆಂಟಿಸ್ ಹುದ್ದೆಗಳು
ಶೈಕ್ಷಣಿಕ ಅರ್ಹತೆ:
✓ ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್; ಅಭ್ಯರ್ಥಿಗಳು ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
✓ ಸಾಮಾನ್ಯ ಪದವೀಧರ ಅಪ್ರೆಂಟಿಸ್ ತರಬೇತಿಗೆ; ಅಭ್ಯರ್ಥಿಗಳು ಪದವಿ ಹೊಂದಿರಬೇಕು.
✓ಎಂಜಿನಿಯರಿಂಗ್ ಡಿಪ್ಲೊಮಾ ಅಪ್ರೆಂಟಿಸ್ ತರಬೇತಿಗೆ; ಅಭ್ಯರ್ಥಿಗಳು ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.
✓ ಐಟಿಐ ಅಪ್ರೆಂಟಿಸ್ ತರಬೇತಿಗೆ; ಅಭ್ಯರ್ಥಿಗಳು ಆಯಾ ಟ್ರೇಡ್ನಲ್ಲಿ ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (NCVT) ನೀಡಿದ ಮಾನ್ಯ ಪ್ರಮಾಣಪತ್ರದೊಂದಿಗೆ ಐಟಿಐ ಉತ್ತೀರ್ಣರಾಗಿರಬೇಕು.
ವಯೋಮಿತಿ:
04-112025 ರಂತೆ;
• ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಭಾರತ ಸರ್ಕಾರದ ನಿಬಂಧನೆಗಳ ಪ್ರಕಾರ ಗರಿಷ್ಠ ವಯಸ್ಸಿನ ಮಿತಿಯನ್ನು ಅನ್ವಯಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಶೈಕ್ಷಣಿಕ ಅರ್ಹತೆ ಮೇಲೆ ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ಲಿಖಿತ ಪರೀಕ್ಷೆ ಸಂದರ್ಶನ ದಾಖಲೆ ಪರಿಶೀಲನೆ
ಸ್ಟೈಫಂಡ್/ತರಬೇತಿ ಭತ್ಯೆ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತ ಸರ್ಕಾರದ ಮಾನದಂಡಗಳ ಪ್ರಕಾರ ಸ್ಟೈಫಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಆನ್ಲೈನ್ ಅರ್ಜಿ ಸಲ್ಲಿಕೆಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಆನ್ ಲೈನ್ ಮೂಲಕ ವಾಕ್-ಇನ್ ಸಂದರ್ಶನಕ್ಕೆ ನೋಂದಣಿ ಮಾಡಿಕೊಳ್ಳುವ ವಿಧಾನ;
• ಇಂಜಿನಿಯರಿಂಗ್/ ಪದವಿ/ಡಿಪ್ಲೊಮಾ ಅಭ್ಯರ್ಥಿಗಳು NATS 2.0 ಪೋರ್ಟಲ್ https://nats.education.gov.in ನಲ್ಲಿ ಮತ್ತು ಐಟಿಐ ಟ್ರೇಡ್ ಅಪ್ರೆಂಟಿಸ್ಗಳು NAPS ಪೋರ್ಟಲ್ https://apprenticeshipindia.gov.in ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
• ನೋಂದಣಿಯಾದ ಬಳಿಕ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಲಗತ್ತಿಸಲಾದ ನಮೂನೆಯ ಪ್ರಕಾರ ಸರಿಯಾಗಿ ಭರ್ತಿ ಮಾಡಿದ ನೋಂದಣಿ ನಮೂನೆ, ಕೆಳಗೆ ತಿಳಿಸಲಾದ ದಾಖಲೆಗಳ ಸ್ವಯಂ-ದೃಢೀಕರಿಸಿದ ಪ್ರತಿ ಮತ್ತು ಅವುಗಳ ಮೂಲ ಪ್ರಮಾಣಪತ್ರಗಳನ್ನು ವಾಕ್-ಇನ್ ಸಂದರ್ಶನಕ್ಕೆ ತರಬೇಕು.
✓ ಅಗತ್ಯ ದಾಖಲಾತಿಗಳು
NATS/NAPS ಪ್ರೊಫೈಲ್ ಪ್ರಿಂಟ್ ಔಟ್ 10ನೇ ಅಂಕಪಟ್ಟಿ ಮತ್ತು ಪ್ರಮಾಣಪತ್ರ ಎಲ್ಲಾ ಸೆಮಿಸ್ಟರ್ಗಳಿಗೆ /ವರ್ಷವಾರು ಅರ್ಹತಾ ಪರೀಕ್ಷೆಗಳ ಅಂಕಪಟ್ಟಿಗಳು ಪದವಿ/ಡಿಪ್ಲೊಮಾ/ಐಟಿಐ ಪ್ರಮಾಣಪತ್ರ ಆಧಾರ್ ಕಾರ್ಡ್ ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ) ಇತ್ತೀಚಿನ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು
ವಾಕ್-ಇನ್ ಸಂದರ್ಶನದ ದಿನಾಂಕ, ಸಮಯ ಮತ್ತು ಸ್ಥಳ: ಅಭ್ಯರ್ಥಿಗಳಿಗೆ 2025ರ ನವೆಂಬರ್ 04 ರಂದು (ಮಂಗಳವಾರ) ಬೆಳಗ್ಗೆ 9 ಗಂಟೆಗೆ ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ಸ್ಥಾಪನೆ (LRDE), ಸಿವಿ ರಾಮನ್ ನಗರ, ಬೆಂಗಳೂರು – 560093 ನಲ್ಲಿ ನೇರ ಸಂದರ್ಶನ ನಡೆಯಲಿದೆ.