ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿನ (EMRS-2025) ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹುದ್ದೆಗಳ ನೇಮಕಾತಿ ಪರೀಕ್ಷೆ ಶ್ರೇಣಿ-Iರ ವೇಳಾಪಟ್ಟಿಯನ್ನು ಮಂಗಳವಾರ ಅಧಿಕೃತವಾಗಿ ಬಿಡುಗಡೆಯಾಗಿದೆ.
ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣ ಸಮಿತಿಯು ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಪ್ರಸ್ತುತ 2025ನೇ ಸಾಲಿನಲ್ಲಿ ವಿವಿಧ ವೃಂದಗಳಲ್ಲಿ ಒಟ್ಟು 7267 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹುದ್ದೆಗಳ ಶ್ರೇಣಿ-I ಪರೀಕ್ಷೆಯನ್ನು ಡಿಸೆಂಬರ್ 13 ರಿಂದ 21 ರವರೆಗೆ ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿನಿತ್ಯ ಎರಡು ಪಾಳಿಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಪರೀಕ್ಷೆಯ ವೇಳಾಪಟ್ಟಿಯನ್ನು EMRS ಅಧಿಕೃತ ಜಾಲತಾಣ https://nests.tribal.gov.in/ದಲ್ಲಿ ಬಿಡುಗಡೆ ಮಾಡಲಾಗಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಪರಿಶೀಲಿಸಬಹುದು.
• ಡಿಸೆಂಬರ್ 13 ರಂದು ಮಧ್ಯಾಹ್ನ 2.30 ರಿಂದ 4.30 ರವರೆಗೆ ಪ್ರಾಂಶುಪಾಲರು ಹಾಗೂ ಲೆಕ್ಕಪರಿಶೋಧಕ ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ.
• ಡಿಸೆಂಬರ್ 14 ರಂದು ಬೆಳಿಗ್ಗೆ 9 ರಿಂದ 11.30 ರವರೆಗೆ ಪಿಜಿಟಿ ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ.
• ಡಿಸೆಂಬರ್ 14 ರಂದು ಮಧ್ಯಾಹ್ನ 2.30 ರಿಂದ 5ರವರೆಗೆ ಟಿಜಿಟಿ ಮತ್ತು ಇತರೆ ಶಿಕ್ಷಕರ ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ.
• ಡಿಸೆಂಬರ್ 21 ರಂದು ಬೆಳಿಗ್ಗೆ 9 ರಿಂದ 11 ರವರೆಗೆ ಹಾಸ್ಟೆಲ್ ವಾರ್ಡನ್ ಹಾಗೂ ಮಹಿಳಾ ಸ್ಟಾಫ್ ನರ್ಸ್ ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ.
• ಡಿಸೆಂಬರ್ 21 ರಂದು ಮಧ್ಯಾಹ್ನ 2.30 ರಿಂದ 4.30 ರವರೆಗೆ ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್ ಹಾಗೂ ಲ್ಯಾಬ್ ಅಟೆಂಡೆಂಟ್ ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ.
EMRS ಪರೀಕ್ಷಾ ನಗರ ಮಾಹಿತಿ
ಸದರಿ ಪರೀಕ್ಷೆಯ ನೋಂದಾಯಿತ ಅಭ್ಯರ್ಥಿಗಳಿಗೆ ನಿಗದಿಪಡಿಸಲಾದ ಪರೀಕ್ಷಾ ನಗರದ ವಿವರಗಳನ್ನು ಪರೀಕ್ಷೆ ನಡೆಯುವ 15 ದಿನಗಳ ಮೊದಲು ಅವರ ಅರ್ಜಿ ಲಾಗಿನ್ನಲ್ಲಿ ಪ್ರದರ್ಶಿಸಲಾಗುತ್ತದೆ. ಆ ಸಮಯದಲ್ಲಿ, ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ನಗರಗಳನ್ನು ವೀಕ್ಷಿಸಬಹುದು.
EMRS-2025 ಪರೀಕ್ಷಾ ಪ್ರವೇಶ ಪತ್ರ:
ಪರೀಕ್ಷಾ ಕೇಂದ್ರದ ವಿವರಗಳೊಂದಿಗೆ ಪ್ರವೇಶ ಪತ್ರವನ್ನು ಪರೀಕ್ಷೆಗೆ 2 ದಿನಗಳ ಮೊದಲು ಅಂದರೆ (ಡಿಸೆಂಬರ್ 10ರಂದು) ಅಭ್ಯರ್ಥಿಗಳ ಅರ್ಜಿ ಲಾಗಿನ್ನಲ್ಲಿ ಪ್ರದರ್ಶಿಸಲಾಗುತ್ತದೆ. ಆ ಸಮಯದಲ್ಲಿ, ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿದ ಹುದ್ದೆಗಳ ಪ್ರಕಾರ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
EMRS-2025 ಸಿಬ್ಬಂದಿ ಆಯ್ಕೆ ಪರೀಕ್ಷೆ ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ
• NESTS ಅಧಿಕೃತ ಜಾಲತಾಣ https://nests.tribal.gov.in/ ಕ್ಕೆ ಭೇಟಿ ನೀಡಿ.
• ನಂತರ ಅಧಿಸೂಚನೆಗಳು ವಿಭಾಗದಲ್ಲಿ ನೀಡಲಾಗಿರುವ “ಸೂಚನೆ – ESSE-2025 ರ ಶ್ರೇಣಿ 1 ಪರೀಕ್ಷೆಯ ವೇಳಾಪಟ್ಟಿ (392.38 KB)” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ ವೇಳಾಪಟ್ಟಿಯ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಪರೀಕ್ಷೆಯ ದಿನಾಂಕಗಳು ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲಿಸಿಕೊಳ್ಳಿ
Important Direct Links:
EMRS Teaching and Non-Teaching (7267 Posts) Exam Schedule PDF