ಬಿ.ಇಡಿ ಪ್ರವೇಶಾತಿ 2025: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

Published on:

2025-26ನೇ ಸಾಲಿನ ಬಿ.ಇಡಿ ಕೋರ್ಸ್‌ ಪ್ರವೇಶಾತಿಗೆ ಸಂಬಂಧಿಸಿದ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆಯು ಮಂಗಳವಾರ ಪ್ರಕಟಿಸಿದೆ.

ಅರ್ಜಿ ಸಲ್ಲಿಕೆಗೆ ಅ.3 ರಿಂದ ನ.3ವರೆಗೆ ಅವಕಾಶ ನೀಡಲಾಗಿತ್ತು. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಕಾಲೇಜುಗಳನ್ವಯ ರೋಸ್ಟರ್‌ ಮತ್ತು ಮೆರಿಟ್‌ ಆಧಾರದಲ್ಲಿ ಸೀಟು ಹಂಚಿಕೆ ಪಟ್ಟಿ ತಯಾರಿಸಿ ಇಲಾಖೆಯ ವೆಬ್‌ಸೈಟ್‌ https://sts.karnataka.gov.in/GPSTRHK/ನಲ್ಲಿ ಬಿಡುಗಡೆ ಮಾಡಲಾಗಿದ್ದು, ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸಿದಲ್ಲಿ ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡ್‌ ಬಳಸಿ ನ.25 ರಿಂದ ಡಿ.5ರೊಳಗೆ ನಿಗದಿತ ಶುಲ್ಕದ ಚಲನನ್ನು ಮುದ್ರಿಸಿಕೊಂಡು ಸ್ಟೇಟ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಪಾವತಿಸಿ, ಅದರ ಮೂಲ ಪ್ರತಿ ಜೊತೆಗೆ ಇತರೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಸಂಬಂಧಿಸಿದ ಜಿಲ್ಲಾ ನೋಡಲ್ ಕೇಂದ್ರಕ್ಕೆ ಹಾಜರಾಗಿ ದಾಖಲಾತಿ ಪತ್ರ ಪಡೆದುಕೊಂಡು, ಕಾಲೇಜಿಗೆ ಸೇರ್ಪಡೆಗೊಳ್ಳಬಹುದು ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಹೊರಡಿಸಿದ ಪ್ರಕಟಣೆ ತಿಳಿಸಿದೆ.

ಮೊದಲ ಸುತ್ತಿನ ಆಯ್ಕೆಯಲ್ಲಿ ಹಂಚಿಕೆಯಾದ ಕಾಲೇಜಿಗೆ ಸೇರಲು ಆಸಕ್ತಿ ಇರದಿದ್ದಲ್ಲಿ ಲಾಗಿನ್‌ ಮಾಡಿಕೊಂಡು ‘Opted for the Second Round ಎಂದು ಅಭಿಮತ ದಾಖಲಿಸುವುದು ಕಡ್ಡಾಯ. ದಾಖಲಿಸಿರುವ ಅಭ್ಯರ್ಥಿಗಳ ಹೆಸರನ್ನು ಮಾತ್ರ ಎರಡನೇ ಪಟ್ಟಿಯಲ್ಲಿ ಪ್ರಕಟಿಸಲಾಗುವುದು ಎಂದು ಇಲಾಖೆಯ ಪ್ರಕಟಣೆ ಸ್ಪಷ್ಟಣೆ ನೀಡಿದೆ.

B.Ed Admission 1st Round Selection List 2025 Karnataka

Arts Selection List PDFDownload
Arts (Special Group) Selection List PDFDownload
Science Selection List PDFDownload
Science (Special Group) Selection List PDFDownload
Arts Cut-off List PDFDownload
Arts (HK) Cut-Off List PDFDownload
Special Group Cut-off List PDFDownload

Important Direct Links:

B.Ed Admission 1st Selection List 2025 Karnataka PDFDownload
B.Ed Admission 2025 Online Portal Linkhttps://sts.karnataka.gov.in/GPSTRHK/
Official Websiteschooleducation.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

6 thoughts on “ಬಿ.ಇಡಿ ಪ್ರವೇಶಾತಿ 2025: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ”

Leave a Comment