Karnataka Gig Workers Insurance Scheme 2024 Apply Online:ನಮಸ್ಕಾರ ಬಂಧುಗಳೇ, ಇಂದು ನಾವು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕಾರ್ಮಿಕ ಇಲಾಖೆಯಿಂದ “ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ” ಯನ್ನ ಜಾರಿಗೆ ತಂದಿದೆ. ಈ ಯೋಜನೆಯ ಬಗ್ಗೆ ಮಾಹಿತಿ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಕೆಳಗಿನಂತೆ ವಿವರಿಸಲಾಗಿದೆ.
Gig Workers Insurance Scheme Karnataka 2024
ಏನಿದು ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ ಇದು ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‌ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‌ಕಾರ್ಟ್, ಬಿಗ್‌ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರಾಗಿದ್ದಾರೆ. ಇವರು ಈ ಯೋಜನೆಗೆ ಅರ್ಹಿ ಸಲ್ಲಿಸಲು ಅರ್ಹರಾಗಿರುತ್ತಾರೆ.
Karnataka Gig Workers Insurance Scheme 2024 Eligibility, Documents Required, Online Application form PDF Details
ಈ ಯೋಜನೆಯ ಸೌಲಭ್ಯಗಳೇನು?
ಜೀವ ವಿಮಾ:
- ಫಲಾನುಭವಿಯ ಮರಣದ ನಂತರ ಕಾನೂನುಬದ್ಧ ವಾರಸುದಾರರಿಗೆ ರೂ. 2.00 ಲಕ್ಷಗಳ ಜೀವ ವಿಮಾ ಪರಿಹಾರ.
ಅಪಘಾತ ವಿಮಾ ಸೌಲಭ್ಯ:
- ಅಪಘಾದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ2.00 ಲಕ್ಷ ಹಾಗೂ ಜೀವ ವಿಮೆ ರೂ 2.00 ಲಕ್ಷ ಸೇರಿ ಒಟ್ಟು ರೂ.4.00 ಲಕ್ಷಗಳು.
- ಅಪಘಾದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ.2.00 ಲಕ್ಷಗಳವರೆಗೆ
- ಆಸ್ಪತ್ರೆ ವೆಚ್ಚ ಮರುಪಾವತಿ ರೂ.1.00 ಲಕ್ಷಗಳವರೆಗೆ (ಅಪಘಾತ ಪ್ರಕರಣಗಳಿಗೆ ಮಾತ್ರ)
ನೋಂದಣಿಗೆ ಅರ್ಹತೆಗಳು(Eligibility):-
- 18 ರಿಂದ 60 ವಯೋಮಾನದವರು ಅರ್ಹರು.
- ಆದಾಯ ತೆರಿಗೆ ಪಾವತಿದಾರರಾಗಿರಬಾರದು.
- ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು.
- ಕರ್ನಾಟಕದಲ್ಲಿ ಗಿಗ್ ವೃತ್ತಿ (ಡೆಲಿವರಿ ಕಾರ್ಯ) ನಿರ್ವಹಿಸುತ್ತಿರುವವರಿಗೆ ಮಾತ್ರ.
ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು (Documents required):-
- ಆಧಾರ್ ಸಂಖ್ಯೆ
- ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ
- ಇ-ಶ್ರಮ್ ನೋಂದಣಿ ಸಂಖ್ಯೆ
How to Apply
ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನ ಅನುಸರಿಸಿ ಅರ್ಜಿ ಸಲ್ಲಿಸಬಹುದಾಗಿದೆ.
- ಮೊದಲು ಅಭ್ಯರ್ಥಿಗಳು Seva Sindhu 1 ವೆಬ್ ಸೈಟ್ ಗೆ ಬೆಟ್ ನೀಡಿ
- ನಂತರ ಅಲ್ಲಿ ‘Apply for Service’ ನಲ್ಲಿ ಸರ್ಚ್ ಬಾಕ್ಸ್ ನಲ್ಲಿ “ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ” ಅಂತ ಸರ್ಚ್ ಮಾಡಿ.
- ಅಲ್ಲಿ ಬರುವ ಲಿಂಕ್ ಕ್ಲಿಕ್ ಮಾಡಿ. ಅಥವಾ ನಾವು ಕೆಳಗೆ ನೇರ ಲಿಂಕ್ ನೀಡಿದ್ದೇವೆ. ಅಲ್ಲಿ ಕ್ಲಿಕ್ ಮಾಡಿ ನಂತರ ಅಲ್ಲಿ ಕೇಳಲಾದ;
- ಹಂತ 1 – Authentication/ದೃಢೀಕರಣ
- ಹಂತ 2 – Aadhar authentication/ಆಧಾರ್ ದೃಢೀಕರಣ
- ಹಂತ 3 – Applicant details/ಅರ್ಜಿದಾರರ ವಿವರಗಳು
- ಹಂತ 4 – Family Details / ಕುಟುಂಬ ಸದಸ್ಯರ ವಿವರ
- ಹಂತ 5 – Declaration/ಘೋಷಣೆ
- ಹಂತ 6 – Additional Details
- ಈ ಮೇಲಿನ ಎಲ್ಲಾ ಹಂತಗಳನ್ನ ಸರಿಯಾಗಿ ಭರ್ತಿ ಮಾಡಿ ನಂತರ ಅರ್ಜಿ ಸಲ್ಲಿಸಿ.
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ | Free Sewing Machine Scheme Karnataka 2023 Apply Online
Rajiv Gandhi Housing Scheme: RGRHCLದಿಂದ ಮನೆಗಳ ಹಂಚಿಕೆಗಾಗಿ ಆನ್-ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ
Free Driving Training in Karnataka 2024: ಉಚಿತ ವಾಹನ ಡ್ರೈವಿಂಗ್ ತರಬೇತಿಗೆ ಅರ್ಜಿ ಸಲ್ಲಿಕೆ ಪ್ರಾರಂಭ
ಅನ್ನಭಾಗ್ಯ: Anna Bhagya Amount DBT Status| Payment Status Check 2024 Online @ahara.kar.nic.in
Important links:
Gig Workers Insurance Scheme Karnataka Online Application Form Link | Apply Online |
Official Website | ksuwssb.karnataka.gov.in |
More Updates | KarnatakaHelp.in |
FAQs
How to Apply for Karnataka Gig Workers Insurance Scheme 2024?
Visit Seva Sindhu plus Website to apply online
What is the Last Date of Karnataka Gig Workers Insurance Scheme 2024?
Updating Soon