IIM CAT 2024 Notification: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಸಾಮಾನ್ಯ ಪ್ರವೇಶ ಪರೀಕ್ಷೆ (CAT)ಯ ಕುರಿತು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
2024- 25 ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಆಗಸ್ಟ್ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಈ ಪರೀಕ್ಷೆಯ ಮೂಲಕ IIMಗಳಾದ ಅಹಮದಾಬಾದ್, ಬೆಂಗಳೂರು, ಕಲ್ಕತ್ತಾ, ಲಕ್ನೋ ಹಾಗೂ ಇತರ ಹಲವು IIMಗಳಿಗೆ ಪ್ರವೇಶ ಪಡೆಯಬಹುದು.
ದೇಶದಾದ್ಯಂತ ಇರುವ ಇಂಡಿಯನ್ ಇನ್‌ಸ್ಟಿಟ್ಯೂಟ್ಸ್ ಆಫ್ ಮ್ಯಾನೇಜ್ಮೆಂಟ್ ಗಳಲ್ಲಿ ಸ್ನಾತಕೋತ್ತರ ಮ್ಯಾನೇಜ್ಮೆಂಟ್ ಕೋರ್ಸ್‌ಗಳಿಗೆ/ ಫೆಲೋ/ ಡಾಕ್ಟರೇಟ್ ಪ್ರೋಗ್ರಾಮ್‌ಗಳಿಗೆ ಪ್ರವೇಶ ಪಡೆಯಲು ಈ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ತೆಗೆದುಕೊಳ್ಳಲು ಬ್ಯಾಚುಲರ್ ಡಿಗ್ರಿ ಅನ್ನು ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಎಸ್‌ಸಿ / ಎಸ್‌ಟಿ / ವಿಶೇಷ ಚೇತನ ಅಭ್ಯರ್ಥಿಗಳು ಶೇಕಡ.45 ಕನಿಷ್ಠ ಅಂಕಗಳನ್ನು ಗಳಿಸಿದ್ದರು ಪರೀಕ್ಷೆ ತೆಗೆದುಕೊಳ್ಳಬಹುದು.
ಈ ಪರೀಕ್ಷೆಯನ್ನು ದೇಶದ 170 ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಪ್ರತಿ ವರ್ಷ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೊಂದಾಯಿಸಿಕೊಳ್ಳುತ್ತಾರೆ. ಈ ಪರೀಕ್ಷೆಯು ಮೂರು ಸೆಕ್ಷನ್‌ಗಳನ್ನು ಹೊಂದಿದ್ದು ವರ್ಬಲ್ ಎಬಿಲಿಟಿ/ ರೀಡಿಂಗ್ ಕಂಪ್ರೆಹೆನ್ಷನ್, ಡಾಟಾ ಇಂಟರ್‌ಪ್ರೆಟೇಶನ್ ಮತ್ತು ಲಾಜಿಕಲ್ ರೀಸನಿಂಗ್, ಕ್ವಾಂಟಿಟೇಟಿವ್ ಎಬಿಲಿಟಿ ಕುರಿತು ಪ್ರಶ್ನೆಗಳಿರುತ್ತವೆ. ಈ ಪರೀಕ್ಷೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗಿನ ನೀಡಲಾಗಿದ್ದು ಗಮನವಿಟ್ಟು ಓದಿರಿ.
IIM CAT 2024 Important Dates:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಆಗಸ್ಟ್ 1, 2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 20, 2024
- ಪರೀಕ್ಷೆಯ ದಿನಾಂಕ: ನವೆಂಬರ್ 24, 2024 (ಭಾನುವಾರ)
- ಪ್ರವೇಶ ಪತ್ರ ಬಿಡುಗಡೆಯ ದಿನಾಂಕ – ನವೆಂಬರ್ 5, 2024
- ಫಲಿತಾಂಶಗಳ ಪ್ರಕಟ ದಿನಾಂಕ – ಜನವರಿ 2ನೇ ವಾರ 2025 (ತಾತ್ಕಾಲಿಕ)
IIM CAT 2024: ಅರ್ಹತೆಯ ಮಾನದಂಡ:
ಅರ್ಜಿದಾರರು ಕನಿಷ್ಠ 50% ಒಟ್ಟಾರೆ ಅಥವಾ ಸಮಾನವಾದ CGPA ಯೊಂದಿಗೆ ಪದವಿಯನ್ನು ಹೊಂದಿರಬೇಕು. ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ), ಮತ್ತು ವಿಕಲಚೇತನರು (ಡಿಎ)/ ಅಂಗವಿಕಲರು (ಪಿಡಬ್ಲ್ಯುಡಿ) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಶೇಕಡಾ 45 ರಷ್ಟು ಹೊಂದಿರಬೇಕು.
ಅರ್ಜಿ ಶುಲ್ಕ:
- ಸಾಮಾನ್ಯ ಅಭ್ಯರ್ಥಿಗಳಿಗೆ- ₹2400.
- ಎಸ್‌ಸಿ / ಎಸ್‌ಟಿ / PwD ಅಭ್ಯರ್ಥಿಗಳಿಗೆ -₹1200.
Also Read: CLAT Admission 2024-25: ಕಾನೂನು ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ, ಅರ್ಜಿ ಆಹ್ವಾನ
Step By Step Process of IIM CAT 2024 Registration
CAT 2024 ಕ್ಕೆ ನೋಂದಣಿ ಮಾಡುವುದು ಹೇಗೆ?
- IIM CAT ಅಧಿಕೃತ ವೆಬ್‌ಸೈಟ್ https://iimcat.ac.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ ‘New Candidate Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ನಂತರ ಓಪನ್ ಆಗುವ ಪೇಜ್‌ನಲ್ಲಿ ಕೇಳಲಾದ ಮಾಹಿತಿ ನೀಡಿ ಅರ್ಜಿ ಸಲ್ಲಿಸಿ.
- ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ನೋಂದಣಿ ಶುಲ್ಕವನ್ನು ಪಾವತಿಸಿ.
- ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ
Important Direct Links:
IIM CAT 2024 Short Notification PDF | Download |
CAT 2024 Registration Guide PDF | Download |
CAT 2024 Registration Link | Register _______ Login |
Official Website | iimcat.ac.in |
More Updates | KarnatakaHelp.in |