ಪ್ರಸಕ್ತ ಸಾಲಿನ ಅಗ್ನಿವೀರ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಫಲಿತಾಂಶವನ್ನು ಭಾರತೀಯ ಸೇನೆಯು joinindianarmy.nic.in ನಲ್ಲಿ ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಫಲಿತಾಂಶವನ್ನು ಪರಿಶೀಲಿಸಬಹುದು.
ಜೂನ್ 30 ರಿಂದ ಜುಲೈ 10 ರವರೆಗೆ (ಜನರಲ್ ಡ್ಯೂಟಿ (ಜಿಡಿ), ಟೆಕ್ನಿಕಲ್, ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್, ಟ್ರೇಡ್ಸ್‌ಮನ್, ಸೈನಿಕ್ ಫಾರ್ಮಾ, ಸೈನಿಕ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟೆಂಟ್ ಮತ್ತು ಮಹಿಳಾ ಪೊಲೀಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ) ಅಗ್ನಿವೀರ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಅನ್ನು ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಸಾವಿರಾರು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ಇದೀಗ ಸೇನೆಯು CEE ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹುದು.
How to Download Indian Army Agniveer CEE Result 2025
CEE 2025 ರ ಫಲಿತಾಂಶವನ್ನು ನೋಡುವ ವಿಧಾನ;
ಭಾರತೀಯ ಸೇನೆ ಅಧಿಕೃತ ವೆಬ್ಸೈಟ್ joinindianarmy.nic.in ಗೆ ಭೇಟಿ ನೀಡಿ.
Army Agniveer Cee Result 2025 Check Process
ಮುಖಪುಟದಲ್ಲಿ CEE ಫಲಿತಾಂಶ (CEE Result 2025) ಲಿಂಕ್ ಮೇಲೆ ಕ್ಲಿಕ್ ಮಾಡಿ.
CEE ಫಲಿತಾಂಶದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
ಫಲಿತಾಂಶದ ಪಿಡಿಎಫ್ ನಲ್ಲಿ ನಿಮ್ಮ ನೋಂದಣಿ ಸಂಖ್ಯೆ ಲಭ್ಯವಿದೆಯೇ ಹುಡುಕಿ.
ನಿಮ್ಮ ನೋಂದಣಿ ಸಂಖ್ಯೆ ಪಿಡಿಎಫ್ ನಲ್ಲಿ ಉಲ್ಲೇಖಿಸಲಾಗಿದ್ದರೆ ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತೀರಾ.
ಭವಿಷ್ಯದ ಉಲ್ಲೇಖಕ್ಕಾಗಿ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
ಫಲಿತಾಂಶದಲ್ಲಿ ಬಳಿಕ ನಡೆಸಲಾಗುವ ಪ್ರಕ್ರಿಯೆಗಳು
CEE 2025 ರ ಫಲಿತಾಂಶದಲ್ಲಿ ಉತ್ತೀರ್ಣರದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ (PFT), ದೈಹಿಕ ಮಾಪನ ಪರೀಕ್ಷೆ (PMT), ವೈದ್ಯಕೀಯ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆಯನ್ನು ನಡೆಸಲಾಗುತ್ತದೆ.
2
2
2
2
Sangappa Khadim
Vijay
Army
Army