ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯ ಅಂಗಸಂಸ್ಥೆಯಾಗಿರುವ ಟೆಲಿಮೆಟ್ರಿಕ್ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್‌ವರ್ಕ್(ಇಸ್ಟ್ಯಾಕ್)ನಲ್ಲಿ 2026-27ನೇ ಸಾಲಿಗೆ ಅಪ್ರೆಂಟಿಸ್ ತರಬೇತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
62-ಪದವೀಧರ ಅಪ್ರೆಂಟಿಸ್, 25-ಡಿಪ್ಲೋಮಾ ಅಪ್ರೆಂಟಿಸ್ ಹಾಗೂ 08-ಟ್ರೇಡ್ ಅಪ್ರೆಂಟಿಸ್ ಸೇರಿದಂತೆ ಒಟ್ಟು 95 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಯವರೆಗೆ ತರಬೇತಿಗೆ ನೇಮಕ ಮಾಡಿಕೊಳ್ಳಲಿದೆ. ಸದರಿ ತರಬೇತಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಅರ್ಜಿದಾರರು ಜು.31 ರೊಳಗೆ ಎನ್‌ಎಟಿಎಸ್ ಅಧಿಕೃತ ವೆಬ್ಸೈಟ್ nats.education.gov.in ಮೂಲಕ ಆನ್ಲೈನ್‌ನಲ್ಲಿ ನೋಂದಾಯಿಸಿಕೊಂಡು, ನಂತರ ಅರ್ಜಿ ಸಲ್ಲಿಸಲಿಚ್ಛಿಸುವ ಕೇಂದ್ರದ ಇ-ಮೇಲ್‌ಗೆ ಶೈಕ್ಷಣಿಕ ವಿವರಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜೂನ್ 22, 2026
- ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 31, 2026
ಶೈಕ್ಷಣಿಕ ಅರ್ಹತೆ:
✓ ಪದವೀಧರ ಅಪ್ರೆಂಟಿಸ್; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್/ಎಂ.ಎಲ್.ಐ.ಎಸ್ಸಿ ಪದವಿ ಪೂರ್ಣಗೊಳಿಸಬೇಕು.
✓ ಡಿಪ್ಲೋಮಾ ಅಪ್ರೆಂಟಿಸ್; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಿರಬೇಕು.
✓ ಐಟಿಐ ಟ್ರೇಡ್ ಅಪ್ರೆಂಟಿಸ್; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಸಂಬಂಧಿತ ವಿಭಾಗದಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಿಯಮಗಳ ಅನುಸಾರ
ಆಯ್ಕೆ ಪ್ರಕ್ರಿಯೆ:
- ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
- ದಾಖಲೆ ಪರಿಶೀಲನೆ
- ಸಂದರ್ಶನ
ಸಂದರ್ಶನದ ದಿನಾಂಕ ಮತ್ತು ಸ್ಥಳದ ವಿವರ:
ಸ್ಟೈಫಂಡ್:
ಪದವೀಧರ ಅಪ್ರೆಂಟಿಸ್‌ಗೆ – ರೂ.12,300/-
ಡಿಪ್ಲೋಮಾ ಅಪ್ರೆಂಟಿಸ್‌ಗೆ – ರೂ.10,900/-
ಐಟಿಐ ಟ್ರೇಡ್ ಅಪ್ರೆಂಟಿಸ್‌ಗೆ – ರೂ.9,600/-
ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ
ಆನ್ ಲೈನ್ ಮೂಲಕ ನೊಂದಾಯಿಸಿ, ಇ-ಮೇಲ್ ಅರ್ಜಿ ಸಲ್ಲಿಸುವ ವಿಧಾನ
• ಮೊದಲಿಗೆ ಅಭ್ಯರ್ಥಿಗಳು NATS ಅಧಿಕೃತ ವೆಬ್ಸೈಟ್ nats.education.gov.in ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು.
• ಬಳಿಕ ಇ-ಮೇಲ್ ನ ವಿಷಯದ ಸಾಲಿನಲ್ಲಿ ಅಭ್ಯರ್ಥಿಯು ಸಲ್ಲಿಸುತ್ತಿರುವ ಹುದ್ದೆಯ ‘ಪೋಸ್ಟ್ ಕೋಡ್’ ಅನ್ನು ನಮೂದಿಸಿ.
• ಇ-ಮೇಲ್‌ನ ಮುಖ್ಯ ಭಾಗದಲ್ಲಿ, ಅಭ್ಯರ್ಥಿಗಳ ಹೆಸರು, ಸಂಪರ್ಕ ಸಂಖ್ಯೆ, ಪದವಿ/ಡಿಪ್ಲೊಮಾ/ಐಟಿಐ ವಿವರಗಳು, ಉತ್ತೀರ್ಣ ವರ್ಷ ಮತ್ತು (NATS) ದಾಖಲಾತಿ ಐಡಿಯನ್ನು ಸ್ಪಷ್ಟವಾಗಿ ನಮೂದಿಸಿ.
• ಇ-ಮೇಲ್ ಅನ್ನು ಅಭ್ಯರ್ಥಿಗಳು ತರಬೇತಿ ಪಡೆಯಲು ಇಚ್ಛಿಸುವ ಕೇಂದ್ರದ ಇಮೇಲ್ ವಿಳಾಸಕ್ಕೆ ಜುಲೈ 31ರೊಳಗೆ ಅಥವಾ ಅದಕ್ಕೂ ಮೊದಲು ತಲುಪುವಂತೆ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ಇಮೇಲ್ ವಿಳಾಸ:
• ISTRAC, ಬೆಂಗಳೂರು – apprmt_blr@istrac.gov.in
• ISTRAC, ಲಕ್ನೋ – apprmt_lko@istrac.gov.in
• ISTRAC, ಲಕ್ನೋ ಶ್ರೀ ವಿಜಯ ಪುರಂ – apprmt_ixz@istrac.gov.in
Important Direct Links:
| Official Notification PDF | Download |
| Official Website | www.istrac.gov.in |
| More Updates | KarnatakaHelp.in |
Hello