ತಿರುವನಂತಪುರಂ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಡಿ ಬರುವ ಲಿಕ್ವಿಡ್ ಪ್ರೊಪುಲ್ಷನ್ ಸಿಸ್ಟಮ್ಸ್ ಸೆಂಟರ್(LPSC)ನ ವಲಿಯಮಲ ಮತ್ತು ಬೆಂಗಳೂರಿನ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.
ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ, ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://apps.lpsc.gov.in/commonC/advt.jspಕ್ಕೆ ಭೇಟಿ ನೀಡಿ ಸೆ.04ರೊಳಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ- ಆಗಸ್ಟ್ 18
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 04 ಮಧ್ಯಾಹ್ನ 14:00 ಗಂಟೆಯವರೆಗೆ.
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಆಗಸ್ಟ್ 07 ಮಧ್ಯಾಹ್ನ 14:00 ಗಂಟೆಯವರೆಗೆ.
ಹುದ್ದೆಗಳ ವಿವರ ಈ ಕೆಳಗಿನಂತಿದೆ:
ತಾಂತ್ರಿಕ ಸಹಾಯಕ: ಮೆಕ್ಯಾನಿಕಲ್ 06 ಹುದ್ದೆಗಳು, ಕೆಮಿಕಲ್ (Chemical) – 01 ಹುದ್ದೆ.
ಟೆಕ್ನಿಷಿಯನ್ ‘ಬಿ’: ಎಲೆಕ್ಟ್ರಾನಿಕ್ ಮೆಕ್ಯಾನಿಕ್ 01 ಹುದ್ದೆ, ಫಿಟ್ಟರ್ 09 ಹುದ್ದೆಗಳು
ಡ್ರಾಫ್ಟ್ಸ್‌ಮನ್ ‘ಬಿ’: ಮೆಕ್ಯಾನಿಕಲ್ 01 ಹುದ್ದೆ,
ಫೈರ್‌ಮನ್ ‘ಎ’: 01 ಹುದ್ದೆ
ಶೈಕ್ಷಣಿಕ ಅರ್ಹತೆ:
ತಾಂತ್ರಿಕ ಸಹಾಯಕ(Technical Assistant-Mechanical/Chemical) ಹುದ್ದೆಗೆ; ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಥಮ ದರ್ಜೆಯೊಂದಿಗೆ ಮೆಕ್ಯಾನಿಕಲ್ ಅಥವಾ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ 3 ವರ್ಷಗಳ ಡಿಪ್ಲೊಮಾ ಹೊಂದಿರಬೇಕು.
ತಂತ್ರಜ್ಞ ‘ಬಿ'(Technician ‘B’-Electronic Mechanic/Fitter) ಹುದ್ದೆಗೆ; ಎಸ್ಸೆಸ್ಸೆಲ್ಸಿ/ಎಸ್‌ಎಸ್‌ಸಿ ತೇರ್ಗಡೆಯಾಗಿರಬೇಕು ಮತ್ತು ಎನ್‌ಸಿವಿಟಿಯಿಂದ ಸಂಬಂಧಪಟ್ಟ ಟ್ರೇಡ್‌ನಲ್ಲಿ ಐಟಿಐ/ಎನ್‌ಟಿಸಿ/ಎನ್‌ಎಸಿ(ITI/NTC/NAC) ಹೊಂದಿರಬೇಕು.
ಡ್ರಾಫ್ಟ್ಸ್‌ಮನ್ ‘ಬಿ'(Draughtsman ‘B’-Mechanical) ಹುದ್ದೆಗೆ; ಎಸ್ಸೆಸ್ಸೆಲ್ಸಿ/ಎಸ್‌ಎಸ್‌ಸಿ ತೇರ್ಗಡೆಯಾಗಿರಬೇಕು ಮತ್ತು ಎನ್‌ಸಿವಿಟಿಯಿಂದ ಡ್ರಾಫ್ಟ್ಸ್‌ಮನ್(ಮೆಕ್ಯಾನಿಕಲ್) ಟ್ರೇಡ್‌ನಲ್ಲಿ ಐಟಿಐ/ಎನ್‌ಟಿಸಿ/ಎನ್‌ಎಸಿ ಹೊಂದಿರಬೇಕು.
ಫೈರ್‌ಮನ್ ‘ಎ'(Fireman ‘A’) ಹುದ್ದೆಗೆ; ಎಸ್ಸೆಸ್ಸೆಲ್ಸಿ/ಎಸ್‌ಎಸ್‌ಸಿ ತೇರ್ಗಡೆಯಾಗಿರಬೇಕು ಮತ್ತು ನಿಗದಿತ ದೈಹಿಕ ಸಾಮರ್ಥ್ಯ ಹಾಗೂ ದೈಹಿಕ ದಕ್ಷತೆ ಪರೀಕ್ಷೆಯ(PET) ಮಾನದಂಡಗಳನ್ನು ಪೂರೈಸಬೇಕು.
ವಯೋಮಿತಿ:
04.09.2026 ಕ್ಕೆ ಅನ್ವಯಿಸುವಂತೆ;
ಎಲ್ಲಾ ಹುದ್ದೆಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು.
ತಾಂತ್ರಿಕ ಸಹಾಯಕ, ತಂತ್ರಜ್ಞ ‘ಬಿ’, ಡ್ರಾಫ್ಟ್ಸ್‌ಮನ್ ‘ಬಿ’ ಹುದ್ದೆಗೆ; ಗರಿಷ್ಠ ವಯೋಮಿತಿ 35 ವರ್ಷಗಳು.
ಫೈರ್‌ಮನ್ ‘ಎ’: ಗರಿಷ್ಠ ವಯೋಮಿತಿ 25 ವರ್ಷಗಳು.
ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆ ಇರುತ್ತದೆ (SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇರುತ್ತದೆ).
ಆಯ್ಕೆ ಪ್ರಕ್ರಿಯೆ:
ಮೆಕ್ಯಾನಿಕಲ್, ಕೆಮಿಕಲ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್ ಮತ್ತು ಮೆಕ್ಯಾನಿಕಲ್(817) ಹುದ್ದೆಗೆ; ಲಿಖಿತ ಪರೀಕ್ಷೆ (Written Test), ಕೌಶಲ್ಯ ಪರೀಕ್ಷೆ (Skill Test).
ಫೈರ್‌ಮನ್ ‘ಎ’ ಹುದ್ದೆಗೆ; ಲಿಖಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ (PET) ಮತ್ತು ವಿವರವಾದ ವೈದ್ಯಕೀಯ ತಪಾಸಣೆ (DME).
ಸಂಬಳ:
- ತಾಂತ್ರಿಕ ಸಹಾಯಕ ಹುದ್ದೆಗೆ; ಹಂತ 7 ವೇತನ ಶ್ರೇಣಿ ₹44,900 ರಿಂದ ₹1,42,400/-
- ತಂತ್ರಜ್ಞ ‘ಬಿ’ ಮತ್ತು ಡ್ರಾಫ್ಟ್ಸ್‌ಮನ್ ‘ಬಿ’ ಹುದ್ದೆಗೆ; ಹಂತ 3 ವೇತನ ಶ್ರೇಣಿ ₹21,700 ರಿಂದ ₹69,100/-
- ಫೈರ್‌ಮನ್ ‘ಎ’ ಹುದ್ದೆಗೆ; ಹಂತ 2 ವೇತನ ಶ್ರೇಣಿ ₹19,900 ರಿಂದ ₹63,200/-
ಅರ್ಜಿ ಶುಲ್ಕ:
ತಾಂತ್ರಿಕ ಸಹಾಯಕ ಹುದ್ದೆಗೆ; ಆರಂಭದಲ್ಲಿ ಎಲ್ಲಾ ಅಭ್ಯರ್ಥಿಗಳು ₹750/- ಪಾವತಿಸಬೇಕು. ಲಿಖಿತ ಪರೀಕ್ಷೆಗೆ ಹಾಜರಾದ ನಂತರ ಮಹಿಳಾ/ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಪೂರ್ಣ ಶುಲ್ಕ ಮರುಪಾವತಿಯಾಗುತ್ತದೆ. ಇತರ ಅಭ್ಯರ್ಥಿಗಳಿಗೆ ₹250/- ಕಡಿತಗೊಳಿಸಿ ₹500/- ಮರುಪಾವತಿಸಲಾಗುತ್ತದೆ.
ಫೈರ್‌ಮನ್ ‘ಎ’, ತಂತ್ರಜ್ಞ ‘ಬಿ’, ಡ್ರಾಫ್ಟ್ಸ್‌ಮನ್ ‘ಬಿ’ ಹುದ್ದೆಗೆ; ಆರಂಭದಲ್ಲಿ ಎಲ್ಲಾ ಅಭ್ಯರ್ಥಿಗಳು ₹500/- ಪಾವತಿಸಬೇಕು. ಲಿಖಿತ ಪರೀಕ್ಷೆಗೆ ಹಾಜರಾದ ನಂತರ ಮಹಿಳಾ/ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಪೂರ್ಣ ಶುಲ್ಕ ಮರುಪಾವತಿಯಾಗುತ್ತದೆ. ಇತರ ಅಭ್ಯರ್ಥಿಗಳಿಗೆ ₹100/- ಕಡಿತಗೊಳಿಸಿ ₹400/- ಮರುಪಾವತಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ.?
ಹಂತ-1 ಅಧಿಕೃತ ಜಾಲತಾಣ https://www.lpsc.gov.in/index.htmlಕ್ಕೆ ಭೇಟಿ ನೀಡಿ.
ಹಂತ-2 ನಂತರ “ನೇಮಕಾತಿ(https://www.lpsc.gov.in/noticeresult.html)” ವಿಭಾಗದಲ್ಲಿ “Status of current Advertisements” ನ “2026”ನಲ್ಲಿ ಲಭ್ಯವಿರುವ Advertisement Details LPSC/02/2026 ಮುಂದೆ ನೀಡಲಾಗಿರುವ “Click here to Apply” ಶೀರ್ಷಿಕೆ ಲಿಂಕ್ ಮೇಲೆ ಕ್ಲಿಕ್ಕಿಸಿ.
ಹಂತ-3 ಹೊಸಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಹುದ್ದೆಗಳವಾರು ಅರ್ಜಿ ಸಲ್ಲಿಕೆ ಲಿಂಕ್ ಒದಗಿಸಲಾಗಿರುತ್ತದೆ. ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಗಳಡಿ ನೀಡಲಾದ “APPLY ONLINE” ಬಟನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ | ಅಪ್ಲೈ ಮಾಡಿ |
| ಅಧಿಕೃತ ಜಾಲತಾಣ | www.lpsc.gov.in |
| ಹೆಚ್ಚಿನ ಮಾಹಿತಿಗಾಗಿ–>> | KarnatakaHelp.in |