ನವದೆಹಲಿ: ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಬರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್ಐಆರ್)ಯು ಟೆಕ್ನಿಷಿಯನ್(1) ಹುದ್ದೆಗಳ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಿದೆ.
ಒಟ್ಟು 43 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅಭ್ಯರ್ಥಿಗಳ ನೇಮಕ ಪ್ರಕ್ರಿಯೆಯು ಪ್ರಮುಖವಾಗಿ ಟ್ರೇಡ್ ಟೆಸ್ಟ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಳಗೊಂಡಿದೆ. ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣ ಪತ್ರ ಹಾಗೂ ನಿಗದಿತ ಅನುಭವ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಮಂಡಳಿಯ ಅಧಿಕೃತ ಜಾಲತಾಣ https://recruitment.csir.res.in/ದ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭದ ದಿನಾಂಕ ಆಗಸ್ಟ್ 18 (ಬೆಳಿಗ್ಗೆ 10:00 ಗಂಟೆಯಿಂದ)
- ಅರ್ಜಿ ಸಲ್ಲಿಕೆ ಮತ್ತು ಆನ್ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ ಸೆಪ್ಟೆಂಬರ್ 17(ಸಂಜೆ 05:00 ಗಂಟೆಯವರೆಗೆ)
ಟ್ರೇಡ್ವಾರು ಹುದ್ದೆಗಳ ವಿವರ:
| ಟ್ರೇಡ್ (Trade) | ಒಟ್ಟು ಹುದ್ದೆಗಳು |
|---|---|
| ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (COPA) | 21 |
| ಡೆಸ್ಕ್ಟಾಪ್ ಪಬ್ಲಿಷಿಂಗ್ ಆಪರೇಟರ್ (DTPO) | 07 |
| ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್ವರ್ಕ್ ಮೇಂಟೆನೆನ್ಸ್ (CH&NM) | 05 |
| ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್ (MLT) | 02 |
| ಡ್ರಾಫ್ಟ್ಸ್ಮನ್ – ಆರ್ಕಿಟೆಕ್ಚರ್ (Draughtsman – Architecture) | 02 |
| ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ (Instrument Mechanic) | 02 |
| ಡ್ರಾಫ್ಟ್ಸ್ಮನ್ – ಮೆಕ್ಯಾನಿಕಲ್ (Draughtsman – Mechanical) | 01 |
| ಡ್ರಾಫ್ಟ್ಸ್ಮನ್ – ಸಿವಿಲ್ (Draughtsman – Civil) | 01 |
| ಲ್ಯಾಬೊರೇಟರಿ ಅಸಿಸ್ಟೆಂಟ್ ಇನ್ ಕೆಮಿಕಲ್ ಪ್ಲಾಂಟ್ (LACP) | 01 |
| ಇಂಟೀರಿಯರ್ ಡಿಸೈನರ್ (Interior Designer) | 01 |
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 55% ಅಂಕಗಳೊಂದಿಗೆ ಎಸ್ಎಸ್ಎಲ್ಸಿ/10ನೇ ತರಗತಿ (ವಿಜ್ಞಾನ ವಿಷಯಗಳೊಂದಿಗೆ) ತೇರ್ಗಡೆಯಾಗಿರಬೇಕು. ಇದರೊಂದಿಗೆ ಕೆಳಗಿನ ಯಾವುದಾದರೂ ಒಂದು ಅರ್ಹತೆಯನ್ನು ಹೊಂದಿರಬೇಕು:
ಸಂಬಂಧಪಟ್ಟ ಟ್ರೇಡ್ನಲ್ಲಿ ಐಟಿಐ(ITI) ಪ್ರಮಾಣಪತ್ರ ಅಥವಾ ರಾಷ್ಟ್ರೀಯ/ರಾಜ್ಯ ಟ್ರೇಡ್ ಪ್ರಮಾಣಪತ್ರ (National/State Trade Certificate).
ಅಥವಾ ಸಂಬಂಧಿತ ಟ್ರೇಡ್ನಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 2 ವರ್ಷಗಳ ಪೂರ್ಣಾವಧಿ ಅಪ್ರೆಂಟಿಸ್ ತರಬೇತಿ (Apprentice Trainee) ಅನುಭವ.
ಅಥವಾ ಕೇಂದ್ರ/ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶಗಳ ಸಚಿವಾಲಯ/ಇಲಾಖೆ/ಸಂಸ್ಥೆ/ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಸಂಬಂಧಿತ ಟ್ರೇಡ್ನಲ್ಲಿ ಕನಿಷ್ಠ 3 ವರ್ಷಗಳ ಕೆಲಸದ ಅನುಭವ.
ವಯೋಮಿತಿ:
ಗರಿಷ್ಠ ವಯೋಮಿತಿ 28 ವರ್ಷಗಳು (ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಅನ್ವಯ).
ವಯೋಮಿತಿ ಸಡಿಲಿಕೆ: ಎಸ್ಸಿ/ಎಸ್ಟಿ (SC/ST) ಅಭ್ಯರ್ಥಿಗಳಿಗೆ: 5 ವರ್ಷಗಳು; ಒಬಿಸಿ (OBC – Non-Creamy Layer) ಅಭ್ಯರ್ಥಿಗಳಿಗೆ: 3 ವರ್ಷಗಳು; ವಿಕಲಚೇತನ (PwBD) ಅಭ್ಯರ್ಥಿಗಳಿಗೆ: 10 ವರ್ಷಗಳು; ಮಾಜಿ ಸೈನಿಕರು (ESM): ಮಿಲಿಟರಿ ಸೇವೆಯನ್ನು ಕಳೆದ ನಂತರ 3 ವರ್ಷಗಳು; ವಿಧವೆಯರು/ವಿಚ್ಛೇದಿತ ಮಹಿಳೆಯರು/ನ್ಯಾಯಾಂಗವಾಗಿ ಬೇರ್ಪಟ್ಟ ಮತ್ತು ಮರುಮದುವೆಯಾಗದ ಮಹಿಳೆಯರಿಗೆ: 35 ವರ್ಷಗಳವರೆಗೆ (ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 40 ವರ್ಷಗಳವರೆಗೆ).
ಆಯ್ಕೆ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳಲ್ಲಿ ನಡೆಯುತ್ತದೆ:
- ಸ್ಕ್ರೀನಿಂಗ್ (Screening)
- ಟ್ರೇಡ್ ಟೆಸ್ಟ್ (Trade Test)
- ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (Written Examination): ಟ್ರೇಡ್ ಟೆಸ್ಟ್ನಲ್ಲಿ ಅರ್ಹತೆ ಪಡೆದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ 3 ಪತ್ರಿಕೆಗಳಿರುತ್ತವೆ (Paper-I, Paper-II, ಮತ್ತು Paper-III).
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಮ್ಯಾಟ್ರಿಕ್ಸ್ ಲೆವೆಲ್-2 ರ ಅಡಿಯಲ್ಲಿ ರೂ. 19,900 ರಿಂದ ರೂ. 63,200/- ರವರೆಗೆ ವೇತನ ಶ್ರೇಣಿ ಇರಲಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಮನೆ ಬಾಡಿಗೆ ಭತ್ಯೆ (HRA), ಪ್ರಯಾಣ ಭತ್ಯೆ (TA) ಮತ್ತು ಇತರ ಸೌಲಭ್ಯಗಳು ಲಭ್ಯವಿರುತ್ತವೆ.
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.500/- (ಐದು ನೂರು ರೂಪಾಯಿಗಳು ಮಾತ್ರ).
ಮಹಿಳೆಯರು, ಎಸ್ಸಿ, ಎಸ್ಟಿ, ವಿಕಲಚೇತನರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಶುಲ್ಕವನ್ನು ಎಸ್ಬಿಐ ಕಲೆಕ್ಟ್ (SBI Collect) ಮೂಲಕ ಆನ್ಲೈನ್ನಲ್ಲಿ ಪಾವತಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಹಂತ-1 ಅಧಿಕೃತ ಜಾಲತಾಣ https://recruitment.csir.res.in/groupii_2026/index.phpದ ಲಿಂಕ್ಗೆ ಭೇಟಿ ನೀಡಿ.
ಹಂತ-2 ನಂತರ ಮುಖಪುಟದಲ್ಲಿ ನೀಡಲಾಗಿರುವ “Apply Online [ RECRUITMENT TO THE POST OF TECHNICIAN (1) ]” ಎಂಬ ಶೀರ್ಷಿಕೆ ಲಿಂಕ್ ಮೇಲೆ ಕ್ಲಿಕ್ಕಿಸುವ ಮೂಲಕ ಹೊಸ ಬಳಕೆದಾರರಾಗಿ ನೋಂದಣಿಯಾಗಿ.
ಹಂತ-3 ತದನಂತರ ಲಾಗಿನ್(https://recruitment.csir.res.in/groupii_2026/applicant_login_form.php) ಆಗುವ ಮೂಲಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಲಾದ ಮಾಹಿತಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಹಂತ-4 ಕೊನೆಗೆ ಎಲ್ಲಾ ಮಾಹಿತಿಯನ್ನೊಮ್ಮೆ ಪರಿಶೀಲಿಸಿ. ತಮಗೆ ಅನ್ವಯಿಸಲಿರುವ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್(ಡೈರೆಕ್ಟ್ ಲಿಂಕ್) | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | www.csir.res.in |
| ಹೆಚ್ಚಿನ ಮಾಹಿತಿಗಾಗಿ –>> | KarnatakaHelp.in |