ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿ; ಎನಿ ಡಿಗ್ರಿ ಅರ್ಹತೆ

Published on:

Updated On:

ಮುಂಬೈ: ಭಾರತದ ಅಂತರರಾಷ್ಟ್ರೀಯ ಬ್ಯಾಂಕಾಗಿರುವ ಬ್ಯಾಂಕ್ ಆಫ್ ಬರೋಡಾವು ವಿವಿಧ ರಾಜ್ಯದ ತನ್ನ ಶಾಖೆಗಳಲ್ಲಿ ಖಾಲಿ ಇರುವ 2482 ಲೋಕಲ್ ಬ್ಯಾಂಕ್ ಆಫೀಸರ್(ಎಲ್‌ಬಿಒ) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಅವಧಿಯನ್ನು ಸೆ.17ರವರೆಗೆ ವಿಸ್ತರಿಸಿದೆ.

ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ಒಟ್ಟು 418(ಹೊಸ 130 ಸ್ಥಾನಗಳು ಮತ್ತು ಬ್ಯಾಕ್‌ಲಾಗ್‌ 288 ಸ್ಥಾನ) ಮೀಸಲಿಡಲಾಗಿದೆ. ಯಾವುದೇ ಪದವಿ ಹೊಂದಿರುವ 21ರಿಂದ 30 ವರ್ಷ ವಯೋಮಾನದ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ಜಾಲತಾಣ https://bankofbaroda.bank.in/career/current-opportunities ಅಥವಾ https://ibpsreg.ibps.in/bobjul26/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಆಗಸ್ಟ್‌ 18
  • ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ- ಸೆಪ್ಟೆಂಬರ್‌ 17(ವಿಸ್ತರಣೆ)

ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ(Graduation) ಹೊಂದಿರಬೇಕು.

ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ (ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು) ಹೊಂದಿರಬೇಕು. (ಕರ್ನಾಟಕಕ್ಕೆ ಕನ್ನಡ ಭಾಷೆ ಕಡ್ಡಾಯ).

ಅನುಭವ: ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಎರಡನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ ಯಾವುದೇ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ (Officer) ಕನಿಷ್ಠ 1 ವರ್ಷದ ಸೇವೆಯ ನಂತರದ ಅನುಭವ ಹೊಂದಿರಬೇಕು.

ವಯೋಮಿತಿ:

01.08.2026ರಂತೆ;

  • ಕನಿಷ್ಠ ವಯಸ್ಸು 21 ವರ್ಷಗಳು
  • ಗರಿಷ್ಠ ವಯಸ್ಸು 30 ವರ್ಷಗಳು (ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ)

ವಯೋಮಿತಿ ಸಡಿಲಿಕೆ: ಪ.ಜಾತಿ/ಪ.ಪಂಗಡ ಅಭ್ಯರ್ಥಿಗಳಿಗೆ 5 ವರ್ಷಗಳು; ಇತರ ಹಿಂದುಳಿದ ವರ್ಗಗಳ(ಒಬಿಸಿ) ಅಭ್ಯರ್ಥಿಗಳಿಗೆ 3 ವರ್ಷಗಳು; ವಿಕಲಚೇತನ(ಪಿಡಬ್ಲ್ಯೂಬಿಡಿ) ಅಭ್ಯರ್ಥಿಗಳಿಗೆ- ಸಾಮಾನ್ಯ/ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ 10 ವರ್ಷಗಳು, ಒಬಿಸಿಗೆ 13 ವರ್ಷಗಳು ಮತ್ತು ಎಸ್ಸಿ/ಎಸ್ಟಿ 15 ವರ್ಷಗಳು.

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

  1. ಆನ್‌ಲೈನ್ ಪರೀಕ್ಷೆ (ಒಟಿ)
  2. ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (ಎಲ್‌ಪಿಟಿ)
  3. ಗುಂಪು ಚರ್ಚೆ(ಜಿಟಿ)/ವೈಯಕ್ತಿಕ ಸಂದರ್ಶನ(ಪಿಐ)

ಸಂಬಳ:

ವೇತನ ಶ್ರೇಣಿ(JMG/S-I): ರೂ.48480-2000/7-62480-2340/2-67160-2680/7-85920/-

ಇದರೊಂದಿಗೆ ಬ್ಯಾಂಕಿನ ನಿಯಮಾವಳಿಗಳ ಪ್ರಕಾರ ಭತ್ಯೆಗಳು ಮತ್ತು ಇತರ ಸೌಲಭ್ಯಗಳು ದೊರೆಯಲಿವೆ.

ಅರ್ಜಿ ಶುಲ್ಕ:

ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.850/- (ಜಿಎಸ್‌ಟಿ ಒಳಗೊಂಡಂತೆ) + ಪೇಮೆಂಟ್ ಗೇಟ್‌ವೇ ಶುಲ್ಕಗಳು.
ಎಸ್ಸಿ, ಎಸ್ಟಿ, ಪಿಡಬ್ಲ್ಯೂಬಿಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ.175/- (ಜಿಎಸ್‌ಟಿ ಒಳಗೊಂಡಂತೆ) + ಪೇಮೆಂಟ್ ಗೇಟ್‌ವೇ ಶುಲ್ಕಗಳು.

ಅರ್ಜಿ ಸಲ್ಲಿಸುವುದು ಹೇಗೆ.?

ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ https://bankofbaroda.bank.in/career/current-opportunities/recruitment-of-local-bank-officers-on-regular-basis-07-09ನಲ್ಲಿ ಲಭ್ಯವಿರುವ ಲಿಂಕ್‌ ಮೂಲಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

Bank Of Baroda Local Bank Officer Notification 2026
ಆನ್‌ಲೈನ್‌ ಅರ್ಜಿ ನಮೂನೆ

ಪ್ರಮುಖ ಲಿಂಕ್‌ಗಳು:

ಆನ್‌ಲೈನ್‌ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಯ ಪ್ರಕಟಣೆ ಪಿಡಿಎಫ್(07/09/2026)ಡೌನ್ಲೋಡ್‌ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಕೆ ಲಿಂಕ್ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣbankofbaroda.bank.in
ಹೆಚ್ಚಿನ ಮಾಹಿತಿಗಾಗಿ —>>KarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment