ಉತ್ತರ ಕನ್ನಡ: ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಾರವಾರ ಘಟಕದ ವಿವಿಧ ನ್ಯಾಯಾಲಯದಲ್ಲಿ ಖಾಲಿ ಇರುವ ಒಟ್ಟು 78 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆಗೆ ಸೆ.16ರವರೆಗೆ ಗಡುವು ನೀಡಿದೆ.
ಇದರಲ್ಲಿ ಆದೇಶ ಜಾರಿಕಾರ 13 ಹುದ್ದೆಗಳು ಹಾಗೂ ಜವಾನ 65 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ಇರಲಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಅರ್ಹ ಅಭ್ಯರ್ಥಿಗಳು ನ್ಯಾಯಾಲಯದ ಅಧಿಕೃತ ಜಾಲತಾಣವಾದ https://uttarakannada.dcourts.gov.in/notice-category/recruitments/ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಆರಂಭದ ದಿನಾಂಕ- ಆಗಸ್ಟ್ 17
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 16 (ರಾತ್ರಿ 11.59 ರವರೆಗೆ)
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 17
ಶೈಕ್ಷಣಿಕ ಅರ್ಹತೆ:
ಆದೇಶ ಜಾರಿಕಾರ ಹುದ್ದೆಗೆ; ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಭಾರಿ ಅಥವಾ ಹಗುರ ವಾಹನ ಚಾಲನಾ ಅನುಜ್ಞಾಪತ್ರ (Driving License – HMV/LMV) ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಜವಾನ ಹುದ್ದೆಗೆ; ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕನ್ನಡ ಓದಲು ಮತ್ತು ಬರೆಯಲು ಬರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿರಬೇಕು (ಇದರಲ್ಲಿ ಸರ್ಕಾರಿ ಆದೇಶದನ್ವಯ ಈ ಒಂದು ಬಾರಿಗೆ ಸೀಮಿತವಾಗಿ ನೀಡಲಾದ 5 ವರ್ಷಗಳ ಸಡಿಲಿಕೆಯೂ ಸೇರಿದೆ):
- ಸಾಮಾನ್ಯ ವರ್ಗದ ಅಭ್ಯರ್ಥಿಗಳು: 40 ವರ್ಷ ಮೀರಿರಬಾರದು.
- ಪ್ರವರ್ಗ-II(ಎ), II(ಬಿ), III(ಎ) ಮತ್ತು III(ಬಿ) ಅಭ್ಯರ್ಥಿಗಳು: 43 ವರ್ಷ ಮೀರಿರಬಾರದು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-I ರ ಅಭ್ಯರ್ಥಿಗಳು: 45 ವರ್ಷ ಮೀರಿರಬಾರದು.
(ಗಮನಿಸಿ: ಮಾಜಿ ಸೈನಿಕರು, ಅಂಗವಿಕಲರು, ವಿಧವೆಯರು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ).
ಆಯ್ಕೆ ಪ್ರಕ್ರಿಯೆ:
- ಶಾರ್ಟ್ ಲಿಸ್ಟ್
- ಸಂದರ್ಶನ
- ಅಂತಿಮ ಆಯ್ಕೆ
ವೇತನ ಶ್ರೇಣಿ:
ಆದೇಶ ಜಾರಿಕಾರ ಹುದ್ದೆಗೆ; ರೂ.31,775 ರಿಂದ 61,300/-
ಜವಾನ ಹುದ್ದೆಗೆ; ರೂ.27,000 ರಿಂದ 46,675/-
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.300/-
ಪ್ರವರ್ಗ-IIಎ, IIಬಿ, IIIಎ, IIIಬಿ ಅಭ್ಯರ್ಥಿಗಳಿಗೆ ರೂ.150/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
(ಶುಲ್ಕವನ್ನು ಎಸ್‌ಬಿಐ ಕಲೆಕ್ಟ್ ಪೇಜ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬೇಕು).
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ..?
ಹಂತ-1 ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲತಾಣ https://uttarakannada.dcourts.gov.in/ಕ್ಕೆ ಭೇಟಿ ನೀಡಿ.
ಹಂತ-2 ನಂತರ “ನೇಮಕಾತಿ(https://uttarakannada.dcourts.gov.in/notice-category/recruitments/)” ವಿಭಾಗಕ್ಕೆ ಧಾವಿಸಿ.
ಹಂತ-3 ತದನಂತರ ಅಲ್ಲಿ “Recruitment for the posts of Process Server and Peon” ಎಂಬ ಶೀರ್ಷಕೆಯಡಿ “Description“ನಡಿ ಒದಗಿಸಲಾದ ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್‌ಗಳು:
| ಆದಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆದೇಶ ಜಾರಿಕಾರ ಹುದ್ದೆಗೆ ಅರ್ಜಿ ಸಲ್ಲಿಕೆ ಲಿಂಕ್(ಆ.17ರಿಂದ) | ಅರ್ಜಿ ಸಲ್ಲಿಸಿ |
| ಪ್ಯೂನ್(ಜವಾನ) ಹುದ್ದೆಗೆ ಅರ್ಜಿ ಸಲ್ಲಿಕೆ ಲಿಂಕ್(ಆ.17ರಿಂದ) | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | uttarakannada.dcourts.gov.in |
| ಹೆಚ್ಚಿನ ಮಾಹಿತಿಗಾಗಿ —>> | KarnatakaHelp.in |