ಜೆಇಇ(ಅಡ್ವಾನ್ಸ್ಡ್)2026ರ ತಾತ್ಕಾಲಿಕ ಕೀ ಉತ್ತರ ಪ್ರಕಟ

Published on:

ಭಾರತೀಯ ತಂತ್ರಜ್ಞಾನ ಸಂಸ್ಥೆ ರೂರ್ಕಿಯು 2026ನೇ ಸಾಲಿನ ಜೆಇಇ(ಅಡ್ವಾನ್ಸ್ಡ್) ತಾತ್ಕಾಲಿಕ ಕೀ ಉತ್ತರವನ್ನು ಅಧಿಕೃತವಾಗಿ ಸೋಮವಾರ(ಮೇ 25) ಪ್ರಕಟಿಸಿದೆ.

ಪೇಪರ್-I ಹಾಗೂ ಪೇಪರ್-II ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಮೇ 17ರಂದು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಸದರಿ ಪರೀಕ್ಷೆಯ ಕೀ ಉತ್ತರವನ್ನು ಜೆಇಇ ಅಡ್ವಾನ್ಸ್ಡ್‌ ಅಧಿಕೃತ ವೆಬ್‌ಸೈಟ್ https://jeeadv.ac.in/index.html ನಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರಕಟಿತ ಕೀ ಉತ್ತರಗಳ ವಿರುದ್ಧ ಅಸಮಾಧಾನ ಇದ್ದಲ್ಲಿ ಮೇ 26ರೊಳಗೆ ಅಭ್ಯರ್ಥಿಗಳು ತಮ್ಮ ಪ್ರತಿಕ್ರಿಯೆ ಹಾಗೂ ಕಮೆಂಟ್‌ಗಳನ್ನು ಸಲ್ಲಿಸಬಹುದು.

ಕೀ ಉತ್ತರ ನೋಡುವ ವಿಧಾನ:

• ಮೊದಲಿಗೆ ಅಭ್ಯರ್ಥಿಗಳು JEEADV ಅಧಿಕೃತ ವೆಬ್ ಸೈಟ್ https://jeeadv.ac.in/index.html ಗೆ ಭೇಟಿ ನೀಡಿ.

• ಬಳಿಕ ಪ್ರಮುಖ ಪ್ರಕಟಣೆಗಳು ಶೀರ್ಷಿಕೆಯ ಕೆಳಗಿನ ನೀಡಲಾಗಿರುವ *ಜೆಇಇ (ಅಡ್ವಾನ್ಸ್ಡ್) 2026 ತಾತ್ಕಾಲಿಕ ಉತ್ತರ ಕೀಗಳು* ಪತ್ರಿಕೆ-1 ಅಥವಾ ಪತ್ರಿಕೆ-2 ಆಯ್ಕೆಯನ್ನು ಆರಿಸಿ.

• ನಂತರ ನಿಮ್ಮ ಉತ್ತರಗಳನ್ನು ಪ್ರಕಟಿತ ಕೀ ಉತ್ತರದ ಪಿಡಿಎಫ್ ನೊಂದಿಗೆ ಪರಿಶೀಲಿಸಿಕೊಳ್ಳಿ.

ಪ್ರತಿಕ್ರಿಯೆ ವೀಕ್ಷಣೆ ಹಾಗೂ ಕಮೆಂಟ್ ಗಳನ್ನು ಸಲ್ಲಿಸುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು JEEADV ಅಧಿಕೃತ ವೆಬ್ ಸೈಟ್ https://jeeadv.ac.in/index.html ಗೆ ಭೇಟಿ ನೀಡಿ.

• ಪ್ರತಿಕ್ರಿಯೆಗಳನ್ನು ವೀಕ್ಷಿಸಲು – ಪ್ರಮುಖ ಪ್ರಕಟಣೆಗಳು ಶೀರ್ಷಿಕೆಯ ಕೆಳಗಿನ ನೀಡಲಾಗಿರುವ *ಅಭ್ಯರ್ಥಿಗಳ ಪ್ರತಿಕ್ರಿಯೆಗಳು ಈಗ ಈ ಕೆಳಗಿನ ಲಿಂಕ್‌ಗಳಲ್ಲಿ ಲಭ್ಯವಿದೆ* ಲಿಂಕ್‌-1 ಅಥವಾ ಲಿಂಕ್‌-2 ಆಯ್ಕೆಯನ್ನು ಆರಿಸಿ.

• ಬಳಿಕ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ.

• ಅಭ್ಯರ್ಥಿಗಳು ಪ್ರತಿಕ್ರಿಯೆಗಳನ್ನು ವೀಕ್ಷಿಸಬಹುದು.

• ಪ್ರಕಟಿತ ಕೀ ಉತ್ತರಗಳ ವಿರುದ್ಧ ಅಸಮಾಧಾನ ಇದ್ದಲ್ಲಿ *ನಿಮ್ಮ ಪ್ರತಿಕ್ರಿಯೆ ಮತ್ತು ಕಾಮೆಂಟ್‌ಗಳನ್ನು ಸಲ್ಲಿಸಲು ದಯವಿಟ್ಟು ಅಭ್ಯರ್ಥಿ ಪೋರ್ಟಲ್‌ಗೆ ಭೇಟಿ ನೀಡಿ* ಆಯ್ಕೆಯನ್ನು ಆರಿಸಿ.

• ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ. ಅಸಮಾಧಾನವಿರುವ ಪ್ರಶ್ನೆಯ ವಿರುದ್ಧ ಪ್ರತಿಕ್ರಿಯೆ ಹಾಗೂ ಕಮೆಂಟ್ ಗಳನ್ನು ಸಲ್ಲಿಸಬಹುದು.

Important Direct Links:

JEE Advanced Paper-1 Provisional Answer Key 2026 PDFDownload
JEE Advanced Paper-2 Provisional Answer Key 2026 PDFDownload
Feedback Portal Linkcportal.jeeadv.ac.in
Official Websitejeeadv.ac.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment