ನಾಗ್ಪುರ್: ಆಗ್ನೇಯ ಕೇಂದ್ರ ರೈಲ್ವೆ(SECR)ನಲ್ಲಿ ಒಟ್ಟು 1079 ಅಪ್ರೆಂಟಿಸ್ ಸ್ಥಾನಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಪ್ರಾರಂಭವಾಗಿದೆ.
ನಾಗಪುರ ವಿಭಾಗಕ್ಕೆ 977 ಸ್ಥಾನ ಹಾಗೂ ವರ್ಕ್ ಶಾಪ್ ಮೋತಿಬಾಗ್‌ಗೆ 102 ಸ್ಥಾನಗಳಿಗೆ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಜೂ.18ರೊಳಗೆ ಎನ್‌ಎಪಿಎಸ್ ಪೋರ್ಟಲ್ https://www.apprenticeshipindia.gov.in ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ನೇಮಕಾತಿಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮೇ 19, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 18, 2026
ನಾಗಪುರ ವಿಭಾಗದಲ್ಲಿ ಖಾಲಿ ಇರುವ ಸ್ಥಾನಗಳ ವಿವರ:
ಫಿಟ್ಟರ್-90
ಬಡಗಿ-41
ವೆಲ್ಡರ್-22
ಕೋಪಾ-158
ಎಲೆಕ್ಟ್ರಿಷಿಯನ್-267
ಸ್ಟೆನೋಗ್ರಾಫರ್(ಇಂಗ್ಲಿಷ್)/ಕಾರ್ಯದರ್ಶಿ ಸಹಾಯಕ-25
ಪ್ಲಂಬರ್-33
ಪೈಂಟರ್-44
ವೈರ್‌ಮ್ಯಾನ್-46
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್-21
ಡೀಸೆಲ್ ಮೆಕ್ಯಾನಿಕ್-124
ಮಶಿನಿಸ್ಟ್-17
ಟರ್ನರ್-05
ದಂತ ಪ್ರಯೋಗಾಲಯ ತಂತ್ರಜ್ಞ-01
ಆಸ್ಪತ್ರೆ ತ್ಯಾಜ್ಯ ನಿರ್ವಹಣಾ ತಂತ್ರಜ್ಞ-03
ಆರೋಗ್ಯ ನೈರ್ಮಲ್ಯ ನಿರೀಕ್ಷಕರು-05
ಸ್ಟೆನೋಗ್ರಾಫರ್ (ಹಿಂದಿ)-11
ಕೇಬಲ್ ಜಾಯಿಂಟರ್-21
ಡಿಜಿಟಲ್ ಛಾಯಾಗ್ರಾಹಕ-02
ಚಾಲಕ-ಕಮ್-ಮೆಕ್ಯಾನಿಕ್(ಲಘು ಮೋಟಾರು ವಾಹನ)-02
ಮೆಕ್ಯಾನಿಕ್ ಮಷೀನ್ ಟೂಲ್ ಮೆಂಟೇನೆನ್ಸ್-23
ಮೇಸನ್-16
ಒಟ್ಟು – 977
ವರ್ಕ್ ಶಾಪ್ ಮೋತಿಬಾಗ್ ಖಾಲಿ ಇರುವ ಸ್ಥಾನಗಳ ವಿವರ:
ಫಿಟ್ಟರ್-44
ವೆಲ್ಡರ್-06
ಬಡಗಿ-10
ಪೇಂಟರ್-04
ಟರ್ನರ್-04
ಸ್ಟೆನೋ(ಇಂಗ್ಲಿಷ್)-03
ಎಲೆಕ್ಟ್ರಿಷಿಯನ್-18
ಕೋಪಾ-13
ಒಟ್ಟು – 102
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ ಮೆಟ್ರಿಕ್ಯುಲೇಷನ್(10ನೇ ತರಗತಿ) ಉತ್ತೀರ್ಣರಾಗಿರಬೇಕು ಹಾಗೂ ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ/ರಾಜ್ಯ ವೃತ್ತಿಪರ ತರಬೇತಿ ಮಂಡಳಿಯಿಂದ ನೀಡಲಾದ ಅಧಿಸೂಚಿತ ಟ್ರೇಡ್‌ನಲ್ಲಿ ರಾಷ್ಟ್ರೀಯ ಟ್ರೇಡ್ ಪ್ರಮಾಣಪತ್ರ(ಐಟಿಐ)ವನ್ನು ಹೊಂದಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 15 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ – 24 ವರ್ಷಗಳು
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಬಿಡಿ ಮತ್ತು ಮಾಜಿ ಸೈನಿಕರ ಅಭ್ಯರ್ಥಿಗಳಿಗೆ 10 ವರ್ಷಗಳು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯ ಆಧಾರದ ಮೇಲೆ ದಾಖಲೆ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸ್ಟೈಫಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಟೈಫಂಡ್ ಅನ್ನು ಕೇಂದ್ರ ಶಿಷ್ಯವೃತ್ತಿ ಮಂಡಳಿಯ ನಿಯಮಗಳ ಅನುಸಾರ ಪಾವತಿಸಲಾಗುತ್ತದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ ಹೇಗೆ.?
• ಮೊದಲಿಗೆ ಅರ್ಜಿದಾರರು ಅಭ್ಯರ್ಥಿಗಳು ಮೊದಲಿಗೆ NAPS ಪೋರ್ಟಲ್ https://www.apprenticeshipindia.gov.in ಗೆ ಭೇಟಿ ನೀಡಿ.
• ಬಳಿಕ ಅಗತ್ಯ ದಾಖಲಾತಿಗಳನ್ನು ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ಮುಂದುವರೆದಂತೆ “ಶಿಷ್ಯವೃತ್ತಿ ಅವಕಾಶಗಳು” ಶೀರ್ಷಿಕೆಯಲ್ಲಿ *2026-27ನೇ ಸಾಲಿಗೆ ಆಗ್ನೇಯ ಮಧ್ಯ ರೈಲ್ವೆಯ ನಾಗ್ಪುರ ವಿಭಾಗ ಮತ್ತು ಕಾರ್ಯಾಗಾರ ಮೋತಿಬಾಗ್‌ನಲ್ಲಿ ಅಪ್ರೆಂಟಿಸ್‌ಗಳ ಕಾಯ್ದೆ 1961 ಮತ್ತು ಅಪ್ರೆಂಟಿಸ್‌ಶಿಪ್ ನಿಯಮ 1992 ರ ಅಡಿಯಲ್ಲಿ ಆಕ್ಟ್ ಅಪ್ರೆಂಟಿಸ್‌ಗಳ ನೇಮಕಾತಿ* ಜಾಹೀರಾತನ್ನು ಹುಡುಕಿ “ಅನ್ವಯಿಸು” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಈಗ ನೀವು ತರಬೇತಿಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿರುತ್ತೀರಿ.
• ಆಯ್ಕೆಯಾದ ಅಭ್ಯರ್ಥಿಗಳಿಗೆ ಇ-ಮೇಲ್ ಅಥವಾ ಎಸ್ಎಂಎಸ್ ಮೂಲಕ ಮುಂದಿನ ಹಂತಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತದೆ.
Important Direct Links:
| Official Notification PDF | Download |
| Online Application Form Link | Apply Now |
| Official Website | secr.indianrailways.gov.in |
| More Updates | KarnatakaHelp.in |