ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಯು ಮೇ 03ರಂದು ನಡೆಸಿದ್ದ 2026ನೇ ಸಾಲಿನ ನೀಟ್ ಯುಜಿ ಪರೀಕ್ಷೆಯನ್ನು ರದ್ದು ಪಡಿಸಿದ್ದ ಬೆನ್ನಲ್ಲೇ ಸದರಿ ಪರೀಕ್ಷೆಯ ಪರೀಕ್ಷಾ ಶುಲ್ಕವನ್ನು ಅಭ್ಯರ್ಥಿಗಳಿಗೆ ಮರು ಪಾವತಿಸಲು ಮುಂದಾಗಿದೆ.
ಅಭ್ಯರ್ಥಿಗಳು ಯಾವ ಬ್ಯಾಂಕ್ ಖಾತೆಗೆ ಮರುಪಾವತಿ ಹಣ ಜಮೆಯಾಗಲು ಬಯಸುವರೋ ಆ ಬ್ಯಾಂಕ್ ಖಾತೆಯ ವಿವರಗಳನ್ನು(ಖಾತೆದಾರರ ಹೆಸರು, ಖಾತೆಯ ಸಂಖ್ಯೆ, ಬ್ಯಾಂಕಿನ ಹೆಸರು) ನಮೂದಿಸಲು ನೀಟ್ ಅಧಿಕೃತ ಜಾಲತಾಣದಲ್ಲಿ ಪ್ರತ್ಯೇಕ ಲಿಂಕ್ ಬಿಡುಗಡೆಗೊಳಿಸಿದ್ದು, ಸಲ್ಲಿಸಲು ಮೇ 22 ರಿಂದ 27ರವರೆಗೆ ಗಡುವು ನೀಡಿದೆ.
ನೀಟ್ ಯುಜಿ 2026 ಶುಲ್ಕ ಮರುಪಾವತಿ ನೋಂದಣಿಯ ಕ್ರಮಗಳು
ಹಂತ-1 ಅಧಿಕೃತ ಜಾಲತಾಣhttps://neet.nta.nic.in/ಕ್ಕೆ ಭೇಟಿ ನೀಡಿ. ಮುಖಪಟದ “Candidate Activity” ವಿಭಾಗದಲ್ಲಿ “ Fee Refund Window for NEET(UG) – 2026” ಶಿರ್ಷೀಕೆಯ ಮೇಲೆ ಒತ್ತಿ.
ಹಂತ-2 ನಂತರ ಅಭ್ಯರ್ಥಿಗಳು ತಮ್ಮ “Application No” ಮತ್ತು “Password” ಹಾಕಿ, ಅಲ್ಲಿ ನೀಡಲಾದ ಕ್ಯಾಪ್ಚಾ(CAPTCHA) ಸರಿಯಾಗಿ ನಮೂದಿಸಿ, ಲಾಗಿನ್(Login) ಮಾಡಿಕೊಳ್ಳಿ
ಹಂತ-3 ಲಾಗಿನ್ ಆದ ನಂತರ ಹೊಸಪುಟ ತೆರೆಯುತ್ತದೆ, ಮುಂದೆ ಮುಖಪುಟದಲ್ಲಿ “Register Bank Details for Refund” ಎಂಬ ಶಿರ್ಷೀಕೆಯಡಿ ನೀಡಲಾದ “Bank Details” ಬಟನ್ ಮೇಲೆ ಒತ್ತಿ.(ಕೆಳಗೆ ಚಿತ್ರದಲ್ಲಿ ತೋರಿಸಲಾಗಿದೆ)
ಹಂತ-04 ತದನಂತರ “Please Provide Your Bank Details” ಎಂಬ ವಿಂಡೋ ತೆರೆಯುತ್ತದೆ. ಮುಂದೆ ನೀವು ಯಾವ ಬ್ಯಾಂಕ್ ಖಾತೆಗೆ ಹಣ ಮರುಪಾವತಿಸಲು ಬಯಸುವಿರಿ ಆ ಬ್ಯಾಂಕ್ ಖಾತೆಯ ಎಲ್ಲಾ ವಿವರವನ್ನು(Account holder’s Name, IFSC code, and account number)ಸರಿಯಾಗಿ ತುಂಬಿ. ನಂತರ ಸ್ವಯಂ ಘೋಷಣೆ ಮೇಲೆ ಟಿಕ್ ಮಾಡಿ, “Submit” ಬಟನ್ ಮೇಲೆ ಕ್ಲಿಕ್ಕಿಸಿ.
ಹಂತ-05 ನಂತರ ಮತ್ತೊಮ್ಮೆ “ದೃಢೀಕರಿಸಿ/Confirm” ಮಾಡಿ ಎಂದು ಸೂಚನೆ ಬರುತ್ತದೆ. ಅಲ್ಲಿ ಹೌದು(Yes) ಅಥವಾ ಇಲ್ಲ(No) ಎಂದು ತೋರಿಸಲಾಗಿರುತ್ತದೆ. ಒಂದು ವೇಳೆ ಸರಿಯಾಗಿ ನಮೂದಿಸಿದ್ದಲ್ಲಿ ಹೌದು ಎಂದೂ, ತಪ್ಪಾಗಿ ನಮೂದಿಸಿದ್ದಲ್ಲಿ ಇಲ್ಲ ಎಂಬ ಬಟನ್ ಕ್ಲಿಕ್ಕಿಸಿ ತಿದ್ದುಪಡಿ ಮಾಡಬಹುದು. ಇಲ್ಲಿ ನಾನು ಹೌದೂ ಎಂದು ಕ್ಲಿಕ್ಕಿಸಿದ್ದೇನೆ.
ಹಂತ-06 ಮುಂದೆ “Bank Detail Submitted Successfully.” ಎಂಬ ಸಂದೇಶ(Message) ಬರುತ್ತದೆ.
ಹಂತ-07 ಕೊನೆಗೆ ನೀವು ಸಲ್ಲಿಕೆ ಮಾಡಿರುವ ಬ್ಯಾಂಕ್ ಖಾತೆಯ ವಿವರಗಳು(Submitted Bank Details) ಪರದೆಯಾಗುತ್ತವೆ.
ವಿಡಿಯೋ ನೋಡಿ, ನೋಂದಣಿ ಮಾಡಿ…
ಪ್ರಿಯ ಓದುಗ ವಿದ್ಯಾರ್ಥಿ ಬಂಧುಗಳೇ, ಈ ಮಾಹಿತಿ ಸಹಾಯವಾಗಿದ್ದಲ್ಲಿ ಇತರರಿಗೂ ತಪ್ಪದೇ ಹಂಚಿಕೊಳ್ಳಿ. ಅವರಿಗೂ ಈ ಮಾಹಿತಿ ಸ್ವಲ್ಪವಾದರೂ ಸಹಾಯವಾದೀತು ಎಂಬುದು ನಮ್ಮ ಆಶಯ.
Important Direct Links:
| NEET UG Fee Refund 2026 Registration Portal Link | Login Now |
| Official Website | neet.nta.nic.in |
| More Updates | Karnatakahelp.in |