ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜ.21 ರಿಂದ 24ರವೆರೆಗೆ ನಡೆಸಲಿಸರುವ ಜಂಟಿ ಪ್ರವೇಶ ಪರೀಕ್ಷೆ (ಮುಖ್ಯ)–2026 ಸೆಷನ್-1ರ ಪ್ರವೇಶ ಪತ್ರವನ್ನು ಶನಿವಾರ(ಜ.17) ಬಿಡುಗಡೆಗೊಳಿಸಿದೆ.
ಬಿ.ಇ, ಬಿ.ಟೆಕ್ ವಿಷಯಕ್ಕೆ ಸಂಬಂಧಿಸಿದ ಪತ್ರಿಕೆ-1 ಇದಾಗಿದ್ದು, ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವೆರೆಗೆ ಒಂದು ಪಾಳಿಗೆ ಹಾಗೂ ಎರಡನೇ ಪಾಳಿಗೆ ಮಧ್ಯಾಹ್ನ 3 ರಿಂದ ಸಂಜೆ 6ರವೆರೆಗೆ ಇರಲಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://jeemain.nta.nic.in/ಮೂಲಕ ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರ ಪಡೆದುಕೊಳ್ಳಬಹುದು.
ಪ್ರವೇಶ ಪತ್ರ ಡೌನ್ಲೋಡ್ ಮಾಡುವಾಗ ತೊಂದರೆ ಎದುರಾದಲ್ಲಿ ದೂರವಾಣಿ ಸಂಖ್ಯೆ: 011-40759000 ಅಥವಾ ಇ-ಮೇಲ್ ವಿಳಾಸ jeemain@nta.ac.inಕ್ಕೆ ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಜೆಇಇ ಮುಖ್ಯ ಪರೀಕ್ಷೆ 2026ರ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ.?
ಹಂತ-1 ಅಧಿಕೃತ ವೆಬ್‌ಸೈಟ್ https://jeemain.nta.nic.in/ಗೆ ಭೇಟಿ
ಹಂತ-2 ಮುಖಪುಟದಲ್ಲಿ ನೀಡಲಾದ “Candidate Activity” ವಿಭಾಗದಡಿ ಇರುವ “Admit Card for JEE(Main)-2026 [Session-I]” ಅಥವಾ “Admit Card for JEE(Main)-2026 [Session-I] (Alternate Link)” ಶೀರ್ಷಿಕೆಯ ಲಿಂಕ್ ಮೇಲೆ ಒತ್ತಿ.
ಹಂತ-3 ಮುಂದೆ ಅಲ್ಲಿ ನಿಮ್ಮ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್ ಹಾಗೂ ಸೆಕ್ಯೂರಿಟಿ ಪಿನ್ ಹಾಕುವ ಮೂಲಕ ಲಾಗಿನ್ ಮಾಡಿ, ಪ್ರವೇಶ ಪತ್ರ ಪಡೆಸುಕೊಳ್ಳಿ.