2025ರ ಡಿಸೆಂಬರ್ ಮಾಹೆಯ ಜಂಟಿ CSIR UGC NET ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಅಧಿಕೃತವಾಗಿ ಮಂಗಳವಾರ ಪ್ರಕಟಿಸಿದೆ.
ಪರೀಕ್ಷೆಯನ್ನು ಡಿ.18ರಂದು ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.ಒಟ್ಟು 2,12,552 ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಸಂಸ್ಥೆ ತಿಳಿಸಿದೆ. ಇದೀಗ ಸದರಿ ಪರೀಕ್ಷೆಯ ಕೀ ಉತ್ತರವನ್ನು CISR ಅಧಿಕೃತ ಜಾಲತಾಣ https://csirnet.nta.nic.in/ದಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ಬಳಸಿಕೊಂಡು ಕೀ ಉತ್ತರಗಳನ್ನು ಪರಿಶೀಲನೆ ಮಾಡಬಹುದು.
ಸದರಿ CBT ಪರೀಕ್ಷೆಯ ಕಿ ಉತ್ತರವನ್ನು ಬಿಡುಗಡೆ ಮಾಡಲಾಗಿದ್ದು, ತಾತ್ಕಾಲಿಕ ಕೀ ಉತ್ತರಗಳ ಮೇಲೆ ಆಕ್ಷೇಪಣೆಯಿದ್ದಲ್ಲಿ ಪ್ರತಿ ಪ್ರಶ್ನೆಗೆ 200ರೂ. ಸಂಸ್ಕರಣ ಶುಲ್ಕವನ್ನು ಪಾವತಿಸುವ ಮೂಲಕ ಅದನ್ನು ಪ್ರಶ್ನಿಸಲು ಡಿಸೆಂಬರ್ 2025ರ ಡಿಸೆಂಬರ್ 30 ರಿಂದ 2026ರ ಜನವರಿ 01ರ ರಾತ್ರಿ 11 ಗಂಟೆಯವರೆಗೆ ಕಾಲಾವಕಾಶವನ್ನು ನೀಡಲಾಗಿದೆ.
ಕೀ ಉತ್ತರ ಸವಾಲನ್ನು ಸಲ್ಲಿಸುವ ವೀಕ್ಷಿಸುವ ವಿಧಾನ
• ಅಭ್ಯರ್ಥಿಗಳು ಮೊದಲಿಗೆ CISR ಅಧಿಕೃತ ಜಾಲತಾಣ https://csirnet.nta.nic.in/ಕ್ಕೆ ಭೇಟಿ ನೀಡಿ.
• ನಂತರ ಇತ್ತೀಚಿನ ಸುದ್ದಿ ವಿಭಾಗದಲ್ಲಿ ನೀಡಲಾಗಿರುವ “Answer Key Challenge for Joint CSIR UGC-NET DEC 2025 is LIVE!” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಮುಂದೆ ಮತ್ತೊಮ್ಮೆ”Answer Key Challenger for JOINT CSIR UGC-NET DEC 2025″ ಆಯ್ಕೆ ಮೇಲೆ ಟ್ಯಾಪ್ ಮಾಡಿ.
• ಬಳಿಕ ಅಭ್ಯರ್ಥಿಗಳು ಅರ್ಜಿ ಸಂಖ್ಯೆ, ಪಾಸ್ವರ್ಡ್ ಮತ್ತು ಭದ್ರತಾ ಪಿನ್ನೊಂದಿಗೆ ಲಾಗಿನ್ ಮಾಡಿ.
• ನಂತರ ಅಭ್ಯರ್ಥಿಗಳು ಗುರುತಿಸಲಾದ ಪ್ರಶ್ನೆ ಪತ್ರಿಕೆಯನ್ನು ವೀಕ್ಷಿಸಿ” ಮತ್ತು ಉತ್ತರಗಳ ಕೀಲಿಗಳನ್ನು ವೀಕ್ಷಿಸಲು/ಸವಾಲು ಮಾಡಲು “ಸವಾಲು” ಮೇಲೆ ಕ್ಲಿಕ್ ಮಾಡಿ.
• ತಾತ್ಕಾಲಿಕ ಉತ್ತರ ಕೀಲಿಯಿಂದ ತೃಪ್ತರಾಗದ ಅಭ್ಯರ್ಥಿಗಳು ನಿಗದಿತ ಸಂಸ್ಕರಣಾ ಶುಲ್ಕ ಪಾವತಿಸಿ ಕೀ ಉತ್ತರ ಸವಾಲನ್ನು ಪ್ರಶ್ನಿಸಬಹುದು.