Karnataka Central University Professor Notification 2025
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ವಿವಿಧ ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಪ್ರಾರಂಭಿಸಿದೆ.
ಸಹಾಯಕ ಪ್ರಾಧ್ಯಾಪಕ(25), ಸಹ ಪ್ರಾಧ್ಯಾಪಕರು (8) ಮತ್ತು ಪ್ರಾಧ್ಯಾಪಕರು (2) ಸೇರಿ ಒಟ್ಟು 35 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಶಿಕ್ಷಣ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣವಕಾಶವಾಗಿದ್ದು, ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CUK ಅಧಿಕೃತ ವೆಬ್ ಸೈಟ್https://curec.samarth.ac.in/ಗೆ ಭೇಟಿ ನೀಡಿ. ಅ.30ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಅರ್ಜಿಗಳ ಹಾರ್ಡ್ಕಾಪಿ ಮತ್ತು ಎಲ್ಲಾ ಸ್ವಯಂ ದೃಢೀಕರಿಸಿದ ಲಗತ್ತುಗಳನ್ನು ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 10, 2025
ಹುದ್ದೆಗಳ ವಿವರ:
ಸಹಾಯಕ ಪ್ರಾಧ್ಯಾಪಕರು – 25 ಹುದ್ದೆಗಳು ಸಹ ಪ್ರಾಧ್ಯಾಪಕರು – 8 ಹುದ್ದೆಗಳು ಪ್ರಾಧ್ಯಾಪಕರು – 2 ಹುದ್ದೆಗಳು
ಒಟ್ಟು 35 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
✓ ಸಹಾಯಕ ಪ್ರಾಧ್ಯಾಪಕ(Assistant Professor) ಹುದ್ದೆಗಳಿಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ 55% ಅಂಕಗಳೊಂದಿಗೆ (ಅಥವಾ ಸಮಾನ ದರ್ಜೆ) ಸ್ನಾತಕೋತ್ತರ ಪದವಿ ಉತ್ತೀರ್ಣ ಹಾಗೂ ಯುಜಿಸಿ/ಸಿಎಸ್ಐಆರ್ ನಡೆಸುವ ನೆಟ್/ಸೆಟ್/ಎನ್ಎಲ್ಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
✓ ಸಹ ಪ್ರಾಧ್ಯಾಪಕ(Associate Professor) ಹುದ್ದೆಗಳಿಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಪಿಎಚ್ಡಿ ಪದವಿ ಹಾಗೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
✓ ಪ್ರಾಧ್ಯಾಪಕ ಹುದ್ದೆಗಳಿಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಪಿಎಚ್ಡಿ ಪದವಿ ಹಾಗೂ ಬೋಧನಾ ಅನುಭವ/ಉತ್ತಮ ಗುಣಮಟ್ಟದ ಸಂಶೋಧನೆಯಿಂದ ಬೆಂಬಲಿತವಾದ ಬಲವಾದ ಶೈಕ್ಷಣಿಕ ದಾಖಲೆ ಹೊಂದಿರಬೇಕು.
ವಯೋಮಿತಿ:
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ನಿಯಮಗಳ ಪ್ರಕಾರ ವಯಸ್ಸಿನ ಮಿತಿ ಹೊಂದಿರಬೇಕು.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ CPC ಪ್ರಕಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಶೈಕ್ಷಣಿಕ ಹಾಗೂ ಸಂಶೋಧನಾ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
ವೈಯಕ್ತಿಕ ಸಂದರ್ಶನ
ದಾಖಲೆ ಪರಿಶೀಲನೆ
ಅಂತಿಮ ಆಯ್ಕೆ
ಅರ್ಜಿ ಶುಲ್ಕ:
ಕಾಯ್ದಿರಿಸದ ವರ್ಗ(UR), ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 2,500ರೂ. ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 1,000ರೂ. ಅಂಗವಿಕಲ(PWD) ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ;
• CUK ಅಧಿಕೃತ ವೆಬ್ ಸೈಟ್https://www.cuk.ac.in/#/homeಗೆ ಭೇಟಿ ನೀಡಿ.
• ನೇಮಕಾತಿ ವಿಭಾಗವನ್ನು ಆಯ್ಕೆ ಮಾಡಿ.
• ನಂತರ CU ಚಾಯನ್ ಪೋರ್ಟಲ್ https://curec.samarth.ac.in/index.php/search/site/search ಲಿಂಕ್ ಮೇಲೆ ಕ್ಲಿಕ್ ಮಾಡಿ.
Karnataka Central University Professor Vacancy Online Form 2025
• ನಂತರ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಬಳಿಕ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
• ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ, ಶೈಕ್ಷಣಿಕ ದಾಖಲೆ, ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.• ಕೊನೆದಾಗಿ ಅರ್ಜಿಯನ್ನು ಪರೀಶೀಲನೆ ಮಾಡಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಅಂತಿಮವಾಗಿ ಆನ್ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ಪ್ರಶಂಸಾಪತ್ರಗಳು/ಪ್ರಮಾಣಪತ್ರಗಳು/ಪ್ರಕಟಣೆಗಳು ಮುಂತಾದ ಎಲ್ಲಾ ಲಗತ್ತುಗಳ ಸ್ವಯಂ-ದೃಢೀಕರಿಸಿದ ಪ್ರತಿಗಳೊಂದಿಗೆ “ಇಲಾಖೆಯ ಹುದ್ದೆಗೆ ಅರ್ಜಿ” ಎಂದು ಬರೆದು ಲಕೋಟೆಯಲ್ಲಿ ಈ ಕೆಳಗಿನ ವಿಳಾಸಕ್ಕೆ ನವೆಂಬರ್ 10ರೊಳಗೆ ತಲುಪುವಂತೆ ಕಳುಹಿಸಬೇಕು.
✓ ವಿಳಾಸ: ಉಪ ನೋಂದಣಾಧಿಕಾರಿ, ನೇಮಕಾತಿ ಕೋಶ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಆಳಂದ ರಸ್ತೆ, ಕಲಬುರಗಿ ಜಿಲ್ಲೆ-585367
ಹೆಚ್ಚಿನ ಮಾಹಿತಿಗಾಗಿ: ಇಮೇಲ್ – recruitment@cuk.ac.in ಅಥವಾ ದೂರವಾಣಿ ಸಂಖ್ಯೆ – 08477-226705 ಅನ್ನು ಸಂಪರ್ಕಿಸಬಹುದು.