ಅಸಂಘಟಿತ ಗಿಗ್ ಕಾರ್ಮಿಕರಿಗೆ 4 ಲಕ್ಷರೂ.ವರೆಗೆ ವಿಮಾ ಸೌಲಭ್ಯ
ಕಾರ್ಮಿಕ ಇಲಾಖೆಯ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ ವಿತರಣಾ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಗಿಗ್ ಕಾರ್ಮಿಕರಿಗೆ 4 ಲಕ್ಷ ವಿಮಾ ಸೌಲಭ್ಯ ನೀಡುತ್ತಿದೆ.
ಯಾವುದೇ ಇತರ ಸರಕು ಮತ್ತು ಸೇವೆ ಒದಗಿಸುವವರ ವೇದಿಕೆ, ಇ-ಮಾರುಕಟ್ಟೆ, ಆಹಾರ ಮತ್ತು ದಿನಸಿ ವಿತರಣಾ ಸೇವೆಗಳು, ಆರೋಗ್ಯ ರಕ್ಷಣೆ, ಲಾಜಿಸ್ಟಿಕ್ಸ್ ಸೇವೆಗಳು, ಸವಾರಿ ಹಂಚಿಕೆ ಸೇವೆಯನ್ನು ಒದಗಿಸುವ ಸಂಸ್ಥೆಗಳಲ್ಲಿ ವಿತರಣಾ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಗಿಗ್ ಕಾರ್ಮಿಕರಿಗೆ ಯಾವುದೇ ರೀತಿಯ ಪ್ರೀಮಿಯಂ ಪಾವತಿ ಇಲ್ಲದೆ, ಸಂಪೂರ್ಣ ಉಚಿತವಾಗಿ ವಿಮಾ ಸೌಲಭ್ಯ ಒದಗಿಸಲಾಗುತ್ತದೆ. ಆಸಕ್ತ ಅರ್ಜಿದಾರರು KSUWSSB ಅಧಿಕೃತ ಜಾಲತಾಣ https://ksuwssb.karnataka.gov.in/ಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.
ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ ನೀಡಲಾಗುವ ಸೌಲಭ್ಯಗಳ ವಿವರ:
• ಅಸಂಘಟಿತ ಗಿಗ್ ಕಾರ್ಮಿಕರು (ಸ್ವತಂತ್ರ ಉದ್ಯೋಗಿಗಳು) ಆಕಸ್ಮಿಕ ಮರಣ ಹೊಂದಿದ ಸಂದರ್ಭದಲ್ಲಿ ₹2 ಲಕ್ಷ ಅಪಘಾತ ವಿಮೆ ಮತ್ತು ₹2 ಲಕ್ಷ ಜೀವ ವಿಮೆ ಸೇರಿದಂತೆ ₹4 ಲಕ್ಷವರೆಗೆ ವಿಮಾ ಸೌಲಭ್ಯ ನೀಡಲಾಗುತ್ತದೆ.
• ಅಪಘಾತದಿಂದಾಗಿ ಕಾರ್ಮಿಕರಿಗೆ ಶಾಶ್ವತ ಅಂಗವೈಕಲ್ಯ ಉಂಟಾದರೆ – ₹2 ಲಕ್ಷವರೆಗೆ ವಿಮಾ ಸೌಲಭ್ಯ ನೀಡಲಾಗುತ್ತದೆ.
• ಅಪಘಾತ ಪ್ರಕರಣಗಳಲ್ಲಿ ಕಾರ್ಮಿಕರಿಗೆ ಆಸ್ಪತ್ರೆ ವೆಚ್ಚದ ಮರುಪಾವತಿಗಾಗಿ ₹1 ಲಕ್ಷವರೆಗೆ ವಿಮಾ ಸೌಲಭ್ಯ ನೀಡಲಾಗುತ್ತದೆ.
• ಕಾರ್ಮಿಕರ ಜೀವ ವಿಮೆ ಮೊತ್ತ ₹2 ಲಕ್ಷ ಆಗಿರುತ್ತದೆ.
• ಕಾರ್ಮಿಕರು ಕರ್ತವ್ಯದಲ್ಲಿರುವಾಗ ಮತ್ತು ಕರ್ತವ್ಯದಲ್ಲಿ ಇಲ್ಲದಿರುವಾಗ ಸಂಭವಿಸುವ ಅಪಘಾತಗಳಿಗೂ ವಿಮಾ ಸೌಲಭ್ಯವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಸಾಮಾನ್ಯ ಅರ್ಹತೆಗಳು:
ಕರ್ನಾಟಕ ರಾಜ್ಯದಲ್ಲಿ ಡೆಲಿವರಿ ಕೆಲಸ ಮಾಡುತ್ತಿರುವ (ಸ್ವಿಗ್ಗಿ, ಜೊಮಾಟೊ ಇತ್ಯಾದಿಗಳ ಆಹಾರ ವಿತರಣಾ ಹುಡುಗರು ಮತ್ತು ಅಮೆಜಾನ್, ಫ್ಲಿಪ್ ಕಾರ್ಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಫ್ಟೋ, ಬಿಗ್ ಬಾಸ್ಕೆಟ್, ಡೊಮಿನೊಸ್ ಮುಂತಾದ ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ವಿತರಣಾ ವೃತ್ತಿಯಲ್ಲಿ ತೊಡಗಿರುವ) ಅಸಂಘಟಿತ ಗಿಗ್ ಕಾರ್ಮಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
• ಕಾರ್ಮಿಕರು ಆದಾಯ ತೆರಿಗೆ ಪಾವತಿದಾರರಾಗಿರಬಾರದು.
• ಇಪಿಎಫ್ ಮತ್ತು ಇಎಸ್ಐ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
• ಗಿಗ್ ಕಾರ್ಮಿಕರು ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿಯಾಗಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 60 ವರ್ಷಗಳು
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
• ಆಧಾರ್ ಸಂಖ್ಯೆ, ಬ್ಯಾಂಕ್ ಪಾಸ್ಬುಕ್ • 30 ದಿನಗಳವರೆಗೆ ಕಡ್ಡಾಯವಾಗಿ ಗಿಗ್ ಕೆಲಸಗಾರರಾಗಿ ಕೆಲಸ ಮಾಡಿರಬೇಕು. • ಗಿಗ್ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಗಳು ನೀಡಿದ ಗುರುತಿನ ಚೀಟಿ/ಪೇ ಸ್ಲಿಪ್/ಬ್ಯಾಂಕ್ ಸ್ಟೇಟ್ಮೆಂಟ್ • ಇ-ಶ್ರಮ್ ಕಾರ್ಡ್ ನೋಂದಣಿ ಸಂಖ್ಯೆ • ಇ-ಶ್ರಮ್ ನೋಂದಣಿ ಸಂಖ್ಯೆ ಇಲ್ಲದಿದ್ದರೆ, eshram.gov.inನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ನೋಂದಣಿ ಕಾರ್ಡ್ ಪಡೆಯಬೇಕು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
• ಸದರಿ ಯೋಜನೆಯ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಲಿಂಕ್ https://sevasindhuservices.karnataka.gov.in/directApply.do?serviceId=2076ಗೆ ಭೇಟಿ ನೀಡಿ.
• ಇ-ಮೇಲ್ ಐಡಿ/ಮೊಬೈಲ್ ಸಂಖ್ಯೆ ಹಾಗೂ ಓಟಿಪಿ/ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ ವಿವರ, ಸಹಿ, ಭಾವಚಿತ್ರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
ಹೆಚ್ಚಿನ ವಿವರಗಳಿಗಾಗಿ: ಕಾರ್ಮಿಕ ಸಹಾಯವಾಣಿ 155214 (24X7) ಅಥವಾ ಕಾರ್ಮಿಕ ಅಧಿಕಾರಿ, ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರ ಕಚೇರಿಗಳು, ಕಾರ್ಮಿಕ ಇಲಾಖೆ ಇವರನ್ನು ಸಂಪರ್ಕಿಸಬಹುದು.
Important Direct Links:
Karnataka State Gig Workers Insurance Scheme Application Link