KCC Loan Apply 2024: ಭಾರತ ಸರ್ಕಾರವು ರೈತರಿಗೆ ಹಲವಾರು ಯೋಜನೆಗಳ ಮೂಲಕ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಅದರಂತೆ ಇತ್ತೀಚಿನ ದಿನಗಳಲ್ಲಿ ರೈತನು ಬರಗಾಲ, ಬೆಳೆಗಳಿಗೆ ಸಿಗದ ಬೆಂಬಲ ಬೆಲೆ ಇನ್ನಿತರ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲ ಯೋಜನೆ ರೈತರಿಗೆ ಕೃಷಿ ಅಗತ್ಯಗಳಿಗಾಗಿ ಸುಲಭವಾಗಿ ಸಾಲ ಪಡೆಯಲು ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮೂಲಕ ಹಣ ಒದಗಿಸುತ್ತದೆ. ಈ ಯೋಜನೆಯಡಿ ರೈತರು 1.6 ಲಕ್ಷ ರೂಪಾಯಿವರೆಗೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ. ಅಂದರೆ, ತಿಂಗಳಿಗೆ ಶೇ.0.5ಕ್ಕಿಂತಲೂ ಕಡಿಮೆ ಬಡ್ಡಿಗೆ ಸಾಲ ಲಭ್ಯವಾಗಲಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮೂಲಕ ರೈತರಿಗೆ ‘ಕ್ರೆಡಿಟ್ ಕಾರ್ಡ್’ ನೀಡಲಾಗುತ್ತದೆ. ಈ ಕಾರ್ಡ್ ಮೂಲಕ ಅವರು ತಮ್ಮ ಅಗತ್ಯಕ್ಕೆ ಅನುಗುಣವಾಗಿ 1.6 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಹಾಗದರೆ ಕಿಸಾನ್ ಕ್ರೆಡಿಟ್ ಯೋಜನೆಯ ಮೂಲಕ ಸಾಲ ಪಡೆಯುವುದು ಹೇಗೆ ಎಂಬುದರ ಕುರಿತು ಈ ಕೆಳಗೆ ನೀಡಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲವನ್ನು ಪಡೆಯುವುದು ಹೇಗೆ ಎಂಬುದರ ಕುರಿತು ಈ ಕೆಳಗೆ ವಿವರಿಸಲಾಗಿದೆ.
ಆಫ್‌ಲೈನ್ ಪ್ರಕ್ರಿಯೆ:
ಕೆಸಿಸಿ ಯೋಜನೆಗಳನ್ನು ನೀಡುವ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಬೇಟಿ ನೀಡಿ. SBI ಮತ್ತು INDIAN BANK ಸೇರಿದಂತೆ ಹಲವಾರು ಬ್ಯಾಂಕ್ ಗಳಲ್ಲಿ ಕೆಸಿಸಿ ಕಾರ್ಡ್ ಮೂಲಕ ಸಾಲ ನೀಡಲಾಗುತ್ತದೆ.
ಬ್ಯಾಂಕ್ ನಿಂದ ಅರ್ಜಿ ನಮೂನೆಯನ್ನು ನಿಮಗೆ ನೀಡಲಾಗುತ್ತದೆ. ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ಅರ್ಜಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
ಪೂರ್ಣಗೊಳಿಸಿದ ಅರ್ಜಿಯನ್ನು ಅಗತ್ಯ ದಾಖಾಲೆಗಳನ್ನು ಸಲ್ಲಿಸಿ.
ಆನ್‌ಲೈನ್ ಪ್ರಕ್ರಿಯೆ:
ಕೆಸಿಸಿ(KCC) ಯೋಜನೆಗೆ ಒಳಗೊಂಡಿರುವ ಆನ್‌ಲೈನ್ ಅರ್ಜಿಗಳನ್ನು ಅನುಮತಿಸುತ್ತವೆ. ಈ ಪ್ರಕ್ರಿಯೆಯು ಸಾಮಾನ್ಯವಾಗಿ ಬ್ಯಾಂಕಿನ ವೆಬ್‌ಸೈಟ್‌ನಿಂದ ಅರ್ಜಿಪತ್ರವನ್ನು ಡೌನ್‌ಲೋಡ್ ಮಾಡುವುದು, ಅದನ್ನು ಭರ್ತಿ ಮಾಡುವುದು ಮತ್ತು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳೊಂದಿಗೆ ಆನ್‌ಲೈನ್‌ನಲ್ಲಿ ಸಲ್ಲಿಸುವುದನ್ನು ಒಳಗೊಳ್ಳುತ್ತದೆ
ಸಲ್ಲಿಸಿದ ನಂತರ:
ಬ್ಯಾಂಕ್ ನಿಮ್ಮ ಅರ್ಜಿ ಮತ್ತು ಸಾಲದ ಮನವಿಗಳನ್ನು ಪ್ರಕ್ರಿಯೆಗೊಳಿಸುತ್ತದೆ.
ಅನುಮೋದನೆಯ ಮೇಲೆ, ಬ್ಯಾಂಕ್ ನಿಮ್ಮ ಕೆಸಿಸಿ ಮೇಲೆ ಕ್ರೆಡಿಟ್ ಮಿತಿಯನ್ನು ಮಂಜೂರು ಮಾಡುತ್ತದೆ.
Top Banks Offering Kisan Credit Card
ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತಿರುವ ಟಾಪ್ ಬ್ಯಾಂಕ್‌ಗಳು ಈ ಕೆಳಗಿನಂತಿವೆ;