KCCDC Subsidy Loan Schemes Online Application Form 2025
ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ(KCCDCL)ದ ವತಿಯಿಂದ 2025-26ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಹಾಯಧನ ಮತ್ತು ಸಾಲ ಸೌಲಭ್ಯ ಒದಗಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರವು ಕ್ರಿಶ್ಚಿಯನ್ ಸಮುದಾಯದ ಅಭ್ಯರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಿ, ಸ್ವಾವಲಂಬಿಗಳನ್ನಾಗಿ ಮಾಡುವ ಸದುದ್ದೇಶದಿಂದ ಗಂಗಾಕಲ್ಯಾಣ ಯೋಜನೆ, ಸ್ವಾವಲಂಬಿ ಸಾರಥಿಯೋಜನೆ, ಅರಿವು ವಿದ್ಯಾಭ್ಯಾಸ ಸಾಲ ಯೋಜನೆ ಸೇರಿ ವಿವಿಧ ಯೋಜನೆಗಳ ಅಡಿಯಲ್ಲಿ ಸಹಾಯಧನ ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸಲಿದೆ. ಆಸಕ್ತ ಮತ್ತು ಅರ್ಹ ಅರ್ಜಿದಾರರು ಡಿ.15ರೊಳಗೆ KCCDC ಅಧಿಕೃತ ಜಾಲತಾಣ https://kccdclonline.karnataka.gov.in/Portal/SchemeList ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 15, 2025
ಯೋಜನೆಗಳ ವಿವರ:
• ಅರಿವು ವಿದ್ಯಾಭ್ಯಾಸ ಸಾಲ ಯೋಜನೆ – ಸದರಿ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಕೋರ್ಸ್ ವ್ಯಾಸಂಗಕ್ಕೆ ಪ್ರತಿ ವರ್ಷ 50 ಸಾವಿರ ರೂ. ಗಳಿಂದ 5 ಲಕ್ಷರೂ.ವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
• ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ – ಸದರಿ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪದವಿ/ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು 20ಲಕ್ಷರೂ.ವರೆಗೆ ಬಡ್ಡಿ ರಹಿತ ಸಾಲವನ್ನುನೀಡಲಾಗುತ್ತದೆ.
• ಸ್ವಾವಲಂಬಿ ಸಾರಥಿ ಯೋಜನೆ – ಸದರಿ ಯೋಜನೆಯಡಿಯಲ್ಲಿ ಅಭ್ಯರ್ಥಿಗಳಿಗೆ ಟ್ಯಾಕ್ಸಿಗಳು/ಸರಕು ವಾಹನಗಳು/ಆಟೋರಿಕ್ಷಾ ಖರೀದಿಗೆ ವಾಹನದ ಬೆಲೆಯ ಶೇ.50ರಷ್ಟು ಸಬ್ಸಿಡಿ ಹಾಗೂ ಬ್ಯಾಂಕುಗಳ ಸಹಯೋಗದೊಂದಿಗೆ ಸಾಲವನ್ನು ನೀಡಲಾಗುತ್ತದೆ.
• ಶ್ರಮಶಕ್ತಿ ಯೋಜನೆ – ಸದರಿ ಯೋಜನೆಯಡಿಯಲ್ಲಿ ಕುಲಕಸಬುದಾರ ಅಭ್ಯರ್ಥಿಗಳಿಗೆ ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಲು ಅಥವಾ ಸಣ್ಣ ವ್ಯಾಪಾರವನ್ನು ಶುರುಮಾಡಲು 50 ಸಾವಿರರೂ. ವರೆಗೆ ಸಾಲ ಹಾಗೂ ಸಹಾಯಧನವನ್ನು ನೀಡಲಾಗುತ್ತದೆ.
• ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ – ಸದರಿ ಯೋಜನೆಯಡಿಯಲ್ಲಿ ವಿಧವೆಯರು/ ವಿಚ್ಛೇಧಿತರು/ಅವಿವಾಹಿತ ಕ್ರೈಸ್ತ ಮಹಿಳೆಯರಿಗೆ 50 ಸಾವಿರರೂ. ವರೆಗೆ ಸಾಲ ಹಾಗೂ ಸಹಾಯಧನವನ್ನು ನೀಡಲಾಗುತ್ತದೆ.
• ವೃತ್ತಿ ಪ್ರೋತ್ಸಾಹ ಸಾಲ ಯೋಜನೆ – ಸದರಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಸಣ್ಣ ಪ್ರಮಾಣದ ವ್ಯಾಪಾರ/ಚಿಲ್ಲರೆ ಮಾರಾಟ/ರಿಪೇರಿ ಸೇವೆಗಳಿಗಾಗಿ 50ಸಾವಿರರೂ. ವರೆಗೆ ಸಾಲ ಹಾಗೂ 50ಸಾವಿರರೂ. ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
• ಗಂಗಾ ಕಲ್ಯಾಣ ಯೋಜನೆ – ಸದರಿ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಕೊಳವೆ ಬಾವಿಯನ್ನು ಕೊರೆಸುವ ಉದ್ದೇಶದಿಂದ 3 ಲಕ್ಷರೂ. ಗಳಿಂದ 4ಲಕ್ಷರೂ. ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
• ವ್ಯಾಪಾರ/ಉದ್ಯಮಗಳಿಗೆ ನೇರ ಸಾಲ ಯೋಜನೆ – ಸದರಿ ಯೋಜನೆಯಡಿಯಲ್ಲಿ ವ್ಯಾಪಾರ/ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ ಫಲಾನುಭವಿಗಳಿಗೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಸಾಲವನ್ನು ನೀಡಲಾಗುತ್ತದೆ.
• ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ – ಸದರಿ ಯೋಜನೆಯಡಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ವ-ಸಹಾಯ ಗುಂಪುಗಳಿಗೆ ಸಾಲದೊಂದಿಗೆ ಗರಿಷ್ಠ 2ಲಕ್ಷರೂ. ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಸಾಮಾನ್ಯ ಅರ್ಹತೆಗಳು:
ಅರ್ಜಿದಾರರು (ಅಲ್ಪಸಂಖ್ಯಾತ) ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿರಬೇಕು.
ಅರ್ಜಿದಾರರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳಾಗಿರಬೇಕು.
ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರಿಯಲ್ಲಿರಬಾರದು.
ಅರ್ಜಿದಾರ ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು.
ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು 6ಲಕ್ಷರೂ. ಮಿತಿಯಲ್ಲಿರಬೇಕು.
ವಾಹನಗಳ ಸೌಲಭ್ಯ ಪಡೆಯಲು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ವಯೋಮಿತಿ:
✓ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಗೆ;
ಕನಿಷ್ಠ ವಯಸ್ಸಿನ ಮಿತಿ – 40 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 55 ವರ್ಷಗಳು
✓ ಉಳಿದ ಎಲ್ಲಾ ಯೋಜನೆಗಳಿಗೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 55 ವರ್ಷಗಳು
ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲಾತಿಗಳು:
• ವಿದ್ಯಾಭ್ಯಾಸ ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಎಲ್ಲಾ ಶೈಕ್ಷಣಿಕ ದಾಖಲಾತಿಗಳನ್ನು ಹೊಂದಿರಬೇಕು. • ಅರ್ಜಿದಾರರ ಭಾವಚಿತ್ರ • ಆಧಾರ್ ಕಾರ್ಡ್ • ಬ್ಯಾಂಕ್ ಪಾಸ್ಬುಕ್ • ಜಮೀನಿಗೆ ಸಂಬಂಧಿಸಿದ ಇತ್ತೀಚಿನ (ಆರ್.ಟಿ.ಸಿ) ಪ್ರತಿ • ಯೋಜನಾ ವರದಿ (ಅನ್ವಯಿಸಿದರೆ) • ಜಾಮೀನುದಾರರ ಭಾವಚಿತ್ರ (ಅನ್ವಯಿಸಿದರೆ) • ವಾಹನ ಚಾಲನಾ ಪರವಾನಗಿ ಪತ್ರ
ಯೋಜನೆಗಳಿಗೆ ಅನುಗುಣವಾಗಿ ಕೇಳಲಾದ ದಾಖಲೆಗಳನ್ನು ಹೊಂದಿರಬೇಕು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
• KCCDC ಅಧಿಕೃತ ಜಾಲತಾಣ https://kccdclonline.karnataka.gov.in/Portal/SchemeList ಕ್ಕೆ ಭೇಟಿ ನೀಡಿ.
• ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ನಂತರ ನೀವು ಅರ್ಜಿ ಸಲ್ಲಿಸ ಬಯಸುವ ಯೋಜನೆಯನ್ನು ಆಯ್ಕೆ ಮಾಡಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಸಹಿ, ಭಾವಚಿತ್ರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.