KARTET 2025ರ ಹಾಲ್‌ ಟಿಕೆಟ್‌ ಬಿಡುಗಡೆ

Published on:

Updated On:

2025ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರವನ್ನು ಡಿ.1 ರಿಂದ ಡೌನ್ಲೋಡ್‌ ಮಾಡಿಕೊಳ್ಳಬಹುದು ಎಂದು ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಡಿ.7 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 12ರವೆರೆಗೆ ಪತ್ರಿಕೆ-1 ಹಾಗೂ ಪತ್ರಿಕೆ-2 ಮಧ್ಯಾಹ್ನ 2 ರಿಂದ 4ರವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಲಿಂಕ್‌ https://sts.karnataka.gov.in/TET/Loginpage.aspx ಮೂಲಕ ತಮ್ಮ ಲಾಗಿನ್‌ ವಿಳಾಸಗಳನ್ನು ಬಳಸಿ ಪ್ರವೇಶ ಪತ್ರ ಪಡೆದುಕೊಳ್ಳಬಹುದು.

KARTET 2025 ಹಾಲ್‌ ಟಿಕೆಟ್‌ ಡೌನ್ಲೋಡ್‌ ಮಾಡುವುದು ಹೇಗೆ?

ಹಂತ-1 ಅಧಿಕೃತ ಜಾಲತಾಣ https://sts.karnataka.gov.in/TET/Loginpage.aspxಕ್ಕೆ ಭೇಟಿ ನೀಡಿ

ಹಂತ-2 ನಿಮ್ಮ ಲಾಗಿನ್‌ ವಿಳಾಸಗಳಾದ “ಯೂಜರ್‌ ನೇಮ್‌” ಮತ್ತು “ಪಾಸ್ವರ್ಡ್‌” ನಮೂದಿಸಿ, ನಂತರ “ಲಾಗಿನ್‌” ಗುಂಡಿ ಮೇಲೆ ಒತ್ತಿ.

ಹಂತ-3 ಮತ್ತೊಂದು ಪರದೆ ತೆರೆಯುತ್ತದೆ, ಅಲ್ಲಿ ನೀಡಲಾದ ಹಾಲ್‌ ಟಿಕೆಟ್‌ ಲಿಂಕ್‌ ಮೂಲಕ ಡೌನ್ಲೋಡ್‌ ಮಾಡಿಕೊಳ್ಳಬಹುದು.

Important Direct Links:

KARTET Hall Ticket 2025 LinkLogin
Official Websiteschooleducation.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

3 thoughts on “KARTET 2025ರ ಹಾಲ್‌ ಟಿಕೆಟ್‌ ಬಿಡುಗಡೆ”

Leave a Comment