ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ(KCET 2025 Registration) ಆಹ್ವಾನಿಸಿದೆ. ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ವಿವಿಧ ಕಾಲೇಜುಗಳು/ಸಂಸ್ಥೆಗಳಲ್ಲಿ ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮಾ-ಡಿ, ಕೃಷಿ ವಿಜ್ಞಾನ ಕೋರ್ಸುಗಳಿಗೆ, ವೆಟರಿನರಿ ಹಾಗೂ ಬಿ.ಎಸ್.ಸಿ. (ನರ್ಸಿಂಗ್) ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲು ನಡೆಸುವ ರಾಜ್ಯ ಮಟ್ಟದ ಪರೀಕ್ಷೆಯಾಗಿದೆ.
ಸಿಇಟಿ-2025(UGCET 2025)ಯ ಆನ್‌ಲೈನ್ ಮೂಲಕ ಅರ್ಜಿಕೆ ಪ್ರಮುಖ ದಿನಾಂಕಗಳು ಹಾಗೂ ಪರೀಕ್ಷಾ ದಿನಾಂಕಗಳು ಸಂಬಂಧಿತ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ, ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ (Start Date)
23-01-2025
ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ (Last Date)
24-02-2025
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ
25-02-2025
KCET 2025 Admi Card Date
25-03-2025
Eligibility criteria for KCET 2025
ಕರ್ನಾಟಕದ ಎರಡನೇ ಪಿಯುಸಿ / 12ನೇ ತರಗತಿ / ತತ್ಸಮಾನ ಪರೀಕ್ಷೆಯಲ್ಲಿ ಭೌತಶಾಸ್ತ್ರ, ಗಣಿತ ವಿಷಯಗಳ ಜೊತೆಗೆ ರಸಾಯನಶಾಸ್ತ್ರ / ಬಯೋ-ಟೆಕ್ನಾಲಜಿ / ಜೀವಶಾಸ್ತ್ರ / ಎಲೆಕ್ಟ್ರಾನಿಕ್ಸ್ / ಕಂಪ್ಯೂಟರ್ ಸೈನ್ಸ್‌ಗಳಲ್ಲಿ ಯಾವುದಾದರೂ ಒಂದನ್ನು ಐಚ್ಛಿಕ ವಿಷಯವನ್ನಾಗಿ ಹಾಗೂ ಇಂಗ್ಲೀಷನ್ನು ಒಂದು ಭಾಷಾ ವಿಷಯವನ್ನಾಗಿ ತೆಗೆದುಕೊಂಡು, ಅರ್ಹತಾ ಪರೀಕ್ಷೆಯ ಐಚ್ಛಿಕ ವಿಷಯಗಳಲ್ಲಿ ಒಟ್ಟಾರೆ ಕನಿಷ್ಠ ಶೇಕಡ 45ರಷ್ಟು ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರಬೇಕು.
UGCET 2025 Exam Dates
Exam Date
ದಿನಾಂಕ
ಪರೀಕ್ಷಾ ಸಮಯ
16-04-2025
ಬುಧುವಾರ
ಬೆಳಿಗ್ಗೆ 10.30 ರಿಂದ 11.50ರ ವರೆಗೆ
ಮಧ್ಯಾಹ್ನ 02.30 ರಿಂದ 03.50ರ ವರೆಗೆ
17-04-2025
ಗುರುವಾರ
ಬೆಳಿಗ್ಗೆ 10.30 ರಿಂದ 11.50ರ ವರೆಗೆ
ಮಧ್ಯಾಹ್ನ 02.30 ರಿಂದ 03.50ರ ವರೆಗೆ
ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ (ಬೆಂಗಳೂರು, ಬೆಳಗಾವಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ)
Exam Date
ದಿನಾಂಕ
ಪರೀಕ್ಷಾ ಸಮಯ
ವಿಷಯ
18-04-2025
ಶುಕ್ರವಾರ
ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 11.30ರ ವರೆಗೆ
4ನೇ ತರಗತಿಯ ಮಟ್ಟದ(50 Marks)
KCET Exam Pattern 2025
ವಿಷಯಗಳು
ಅಂಕಗಳು
ಜೀವಶಾಸ್ತ್ರ(Biology)
60 Marks
ಗಣಿತಶಾಸ್ತ್ರ(Mathematics)
60 Marks
ಭೌತಶಾಸ್ತ್ರ(Physics)
60 Marks
ರಸಾಯನ ಶಾಸ್ತ್ರ(Chemistry)
60 Marks
Step by Step Process of KCET 2025 Application Form
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಿರಿ;
ಕರ್ನಾಟಕ CET 2025 ಅಧಿಕೃತ ವೆಬ್‌ಸೈಟ್ cetonline.karnataka.gov.inಗೆ ಭೇಟಿ ನೀಡಿ.
ನಂತರ ಮೆನುನಲ್ಲಿ “ಪ್ರವೇಶ” ಮೇಲೆ ಕ್ಲಿಕ್ ಮಾಡಿ ಅಲ್ಲಿ “ಸಿಇಟಿ 2025 ಅರ್ಜಿ ಸಲ್ಲಿಕೆ” ಲಿಂಕ್ ಮೇಲೆ ಕ್ಲಿಕ್ ಮಾಡಿ
ಈಗಾಗಲೇ ನೀವು ʼನೋಂದಣಿ/ಲಾಗಿನ್ʼ ಮಾಡಿಕೊಳ್ಳಿ.
ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
ಕೊನೆಗೆ ಎಲ್ಲಾ ಮಾಹಿತಿಯನ್ನ ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸಿ.
karnatka state councling registration