ಪ್ರಸ್ತುತ ಸಾಲಿನ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಕ್ರೀಡಾ ಮೀಸಲಾತಿ ಅಡಿಯಲ್ಲಿ ಸೀಟು ಪಡೆಯಲು ಅರ್ಹತೆಯುಳ್ಳ ಅಭ್ಯರ್ಥಿಗಳಿಗೆ ಮೂಲ ಕ್ರೀಡಾ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
2025ನೇ ಸಾಲಿನ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಸಂಭಂದಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆಯನ್ನು ಹೊರಡಿಸಿದ್ದು, ಸದರಿ ಪ್ರಕಟಣೆಯ Annexure-1 ನಲ್ಲಿ ನೀಡಿರುವ ಕ್ರೀಡೆಗಳು ಮತ್ತು ಕ್ರೀಡಾಕೂಟಗಳ ಪಟ್ಟಿಯಲ್ಲಿರುವಂತೆ ಕ್ರೀಡಾ ಅರ್ಹತೆ ಮತ್ತು ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು, ಮೂಲ ಕ್ರೀಡಾ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಸೂಚಿಸಲಾಗಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುವ ಅಭ್ಯರ್ಥಿಗಳ ಕ್ರೀಡಾ ವಿಶಿಷ್ಟತೆ/ಭಾಗವಹಿಸುವಿಕೆ ಮತ್ತು ಪ್ರಮಾಣಪತ್ರ ನೀಡಿರುವ ಪ್ರಾಧಿಕಾರದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಅಂಕಗಳನ್ನು ನಿಗದಿಪಡಿಸಿದ್ದು, ಇದರ ಸಂಪೂರ್ಣ ಪಿಡಿಎಫ್ ಅನ್ನು KEA ಅಧಿಕೃತ ವೆಬ್ಸೈಟ್ ನಲ್ಲಿcetonline.karnataka.gov.in/kea ಇತ್ತೀಚಿನ ಪ್ರಕಟಣೆಗಳು ವಿಭಾಗದಲ್ಲಿ ಕ್ರೀಡಾ ದಾಖಲೆಗಳ ಸಲ್ಲಿಕೆಗೆ ಪ್ರಕಟಣೆ (ವಿಶೇಷ ವರ್ಗ) ಲಿಂಕ್ ಮೇಲೆ ಟ್ಯಾಪ್ ಮಾಡಿ ಸಂಪೂರ್ಣ ವಿವರವನ್ನು ವೀಕ್ಷಿಸಬಹುದು.
ಕ್ರೀಡಾ ಪ್ರಮಾಣ ಪತ್ರಗಳನ್ನು ಸಲ್ಲಿಸುವ ವಿಧಾನ
ಪ್ರಾಧಿಕಾರದ ವೆಬ್ ಸೈಟಿನ https://cetonline.karnataka.gov.in/kea/ ನಿಗದಿತ ಲಿಂಕ್ ನಲ್ಲಿ Slot book ಮಾಡಿ, ನಂತರ ಆಯಾ ದಿನಾಂಕದಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ಖುದ್ದಾಗಿ ಹಾಜರಾಗಲು ಸೂಚಿಸಿದೆ. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪರಿಣಿತರು ಹಾಜರಿದ್ದು ದಾಖಲೆ ಪರಿಶೀಲಿಸುವರು.
ಮೆರಿಟ್ ಪಟ್ಟಿ:
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುವ ಅಭ್ಯರ್ಥಿಗಳ ಕ್ರೀಡಾ ವಿಶಿಷ್ಟತೆ/ಭಾಗವಹಿಸುವಿಕೆ ಮತ್ತು ಪ್ರಮಾಣಪತ್ರ ನೀಡಿರುವ ಪ್ರಾಧಿಕಾರದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಅಂಕಗಳನ್ನು ನೀಡಲಾಗುತ್ತದೆ.
- ಪರಿಗಣನೆಯಲ್ಲಿರುವ ಎರಡು ಅತ್ಯಧಿಕ ಸಾಧನೆಗಳ ಆಧಾರದ ಮೇಲೆ ಅಭ್ಯರ್ಥಿಗಳು ಪಡೆದ ಒಟ್ಟು ಅಂಕಗಳನ್ನು ಪರಿಗಣಿಸಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಕ್ರೀಡಾ ಪ್ರಮಾಣ ಪತ್ರ ಕ್ಲೇಮ್ ಮಾಡಲು ಬೇಕಾಗುವ ಅರ್ಹತೆ:
ಕ್ರೀಡಾ ವರ್ಗದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅಭ್ಯರ್ಥಿಗಳು ಸಿಇಟಿ-2025 ರ ಅರ್ಜಿಯಲ್ಲಿ ಸಂಬಂಧಿಸಿದ ವಿಶೇಷ ವರ್ಗವನ್ನು ಕ್ಲೇಮ್ ಮಾಡಿರಬೇಕು. ಆನ್ ಲೈನ್ ಮೂಲಕ ಅರ್ಜಿಯಲ್ಲಿ ವಿಶೇಷ ವರ್ಗವನ್ನು ಕ್ಲೇಮ್ ಮಾಡದೇ ಇರುವ ಅಭ್ಯರ್ಥಿಗಳು ವಿಶೇಷ ವರ್ಗದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅರ್ಹತೆ ಪಡೆಯುವುದಿಲ್ಲ.
ಕ್ರೀಡಾ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಕೊಂಡೊಯ್ಯಬೇಕಾದ ದಾಖಲೆಗಳು:
ಅಭ್ಯರ್ಥಿಗಳು Slot book ಮಾಡಿದ ದಿನಾಂಕದಂದು ಕಚೇರಿ ವೇಳೆಯಲ್ಲಿ ಎರಡು ಸೆಟ್ಟು ಜೆರಾಕ್ಸ್ ಪ್ರತಿಗಳ ಜೊತೆ ಸಿಐಟಿ-2025’ರ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕು. ವಿಶೇಷ ಪ್ರವರ್ಗದ ಪ್ರಮಾಣಪತ್ರಗಳನ್ನು ಸ್ವೀಕರಿಸಿದ್ದಕ್ಕೆ ಸಂಬಂಧಿಸಿದಂತೆ ಸ್ವೀಕೃತಿ ಚೀಟಿಯನ್ನು ನೀಡಲಾಗುವುದು.
ಅಭ್ಯರ್ಥಿಗಳ ಅರ್ಹತಾ ಹಾಗೂ ಅನರ್ಹತ ಪಟ್ಟಿ ಪ್ರಕಟಣೆ:
ಸಿಇಟಿ-2006 ರ ನಿಯಮದ ಅನ್ವಯ, ಅಭ್ಯರ್ಥಿಗಳು ಸಲ್ಲಿಸುವ ವಿಶೇಷ ವರ್ಗದ ಪ್ರಮಾಣ ಪತ್ರಗಳು / ದಾಖಲೆಗಳನ್ನು ಪರಿಶೀಲನೆಗಾಗಿ ಸಂಬಂಧಿಸಿದ ಆಯಾ ಇಲಾಖೆಗಳಿಗೆ ಕಳುಹಿಸಿಕೊಡಲಾಗುವುದು. ಪರಿಶೀಲನೆಯ ನಂತರ ಸಂಬಂಧಿಸಿದ ಇಲಾಖೆಗಳು ನೀಡುವ ಅರ್ಹತಾ ಪಟ್ಟಿ ಮತ್ತು ಅನರ್ಹತಾ ಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗುವುದು.
ಸಲ್ಲಿಸಬೇಕಾದ ಪ್ರಮಾಣ ಪತ್ರಗಳು:
- ಸಿಇಟಿ -2025 ರ ಪ್ರವೇಶ ಪತ್ರ ಮತ್ತು ಆನ್‌ಲೈನ್ ಮೂಲಕ ಸಲ್ಲಿಸಿರುವ ಅಂತಿಮ ಅರ್ಜಿ
- Annexure-1 ರಂತೆ ಮೂಲ ಕ್ರೀಡಾ ಪ್ರಮಾಣ ಪತ್ರಗಳು
- ವ್ಯಾಸಂಗ ಪ್ರಮಾಣ ಪತ್ರ

ಕ್ರೀಡಾ ಕೋಟಗಳ ಅಡಿಯಲ್ಲಿ ಅರ್ಹತೆಯನ್ನು ಕೋರುವ ಅಭ್ಯರ್ಥಿಗಳು, ಭಾಗವಹಿಸುವ ಶಾಲೆಯಿಂದ ಸಂಬಂಧಿಸಿದ ವರ್ಷಕ್ಕೆ ಕರ್ನಾಟಕದಲ್ಲಿ ಅಭ್ಯಸಿಸಿ, ಉತ್ತೀರ್ಣರಾಗಿರುವುದಕ್ಕೆ ಕಾಲೇಜಿನ ಪ್ರಾಂಶುಪಾಲರು ಈ ಮಾಹಿತಿ ಪುಸ್ತಕಕ್ಕೆ ಅನುಬಂಧಿಸಿರುವ (Proforma of the Certificate) ವ್ಯಾಸಂಗ ಪ್ರಮಾಣಪತ್ರದ ಮಾದರಿ ನಮೂನೆಯಲ್ಲಿ ನೀಡಿರುವಂತೆ ಕ್ರೀಡೆಗೆ ಸಂಬಂಧಿಸಿದ ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಸಹ ಸಲ್ಲಿಸಬೇಕೆಂದು ಕೆಇಎ ತಿಳಿಸಿದೆ.
ವಿಶೇಷ ಸೂಚನೆ: ಕ್ರೀಡಾ ಪ್ರವರ್ಗದ ಅಡಿಯಲ್ಲಿ ವಿದ್ಯಾರ್ಥಿಗಳ ಅರ್ಹತೆಯನ್ನು ನಿರ್ಣಯಿಸುವುದಕ್ಕೆ ಸಂಬಂಧಿಸಿದಂತೆ. ಯುವ ಸಬಲೀಕರಣ ಮತ್ತು ಮತ್ತು ಕ್ರೀಡಾ ಇಲಾಖೆಯ, ಆಯುಕ್ತರು ಅಥವಾ ಅವರ ಅಧಿಕೃತ ನಾಮನಿರ್ದೇಶಿತರು ಅಂತಿಮ ಪ್ರಾಧಿಕಾರಿಯಾಗಿರುತ್ತಾರೆ. ಆದ್ದರಿಂದ, ಈ ವಿಷಯದಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯಾವುದೇ ಹೊಣೆಯನ್ನು ಹೊಂದಿರುವುದಿಲ್ಲ ಎಂದು ಕೆಇಎ ತಿಳಿಸಿದೆ.
Important Direct Links:
KCET 2025 Sports Documents Submission Notice PDF | Download |
Official Website | kea.kar.nic.in |
More Updates | Karnataka Help.in |