BWSSB ಎಂಜಿನಿಯರ್‌, ಸಹಾಯಕ, ಮಾಪನ ಓದುಗ ಹುದ್ದೆಗಳ ಭರ್ತಿ; ಅರ್ಜಿ ಸಲ್ಲಿಕೆಗೆ ಅವಕಾಶ

ಪಿಯುಸಿ, ಪದವೀಧರರು ಅಪ್ಲೈ ಮಾಡಿ | ಅರ್ಜಿ ಸಲ್ಲಿಸಲು ಡಿ.2ರ ಗಡುವು

Published on:

ಫಾಲೋ ಮಾಡಿ
KEA BWSSB Recruitment 2025 Notification
KEA BWSSB Notification 2025

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB)ಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದಲ್ಲಿ ಗ್ರೂಪ್‌ ಬಿ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಅಧಿಸೂಚನೆ ಹೊರಡಿಸಿದೆ.

ಕ.ಕ ವೃಂದದಲ್ಲಿ 59 ಹುದ್ದೆ, ಉಳಿಕೆ ವೃಂದದಲ್ಲಿ 165 ಹುದ್ದೆಗಳ ಭರ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ. ಪಿಯುಸಿ, ಕಲಾ/ವಾಣಿಜ್ಯ/ವಿಜ್ಞಾನ, ಎಂಜಿನಿಯರಿಂಗ್, ಡಿಪ್ಲೊಮಾ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ನ.17 ರಿಂದ ನ.25ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು, ಸದರಿ ಅರ್ಜಿ ಸಲ್ಲಿಕೆ ಕೊನೆ ದಿನಾಂಕವನ್ನು ಡಿ.01ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು https://cetonline.karnataka.gov.in/VAOResult/DigilockerReg.aspxನ ಮೂಲಕ ಅರ್ಜಿ ಸಲ್ಲಿಸಬಹುದು.

About the Author

ನಾನು 2021 ರಿಂದ ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ತೊಡಗಿಕೊಂಡಿರುವೆ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

Leave a Comment