ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆ/ಮಂಡಳಿಯ ಮೂಲ ಉಳಿಕೆ ವೃಂದದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಜ.10 ಮತ್ತು ಜ.11ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಕೀ ಉತ್ತರ ಹಾಗೂ ತಾತ್ಕಾಲಿಕ ಫಲಿತಾಂಶವನ್ನು ಸೋಮವಾರ(ಜ.19) ಪ್ರಕಟಿಸಿದೆ.
ಪ್ರಕಟಿತ ಅಂತಿಮ ಕೀ ಉತ್ತರ, ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶಕ್ಕೆ ಜ.21ರ ಬೆಳಗ್ಗೆ 9 ರೊಳಗೆ ಪ್ರಾಧಿಕಾರ ವೆಬ್‌ಸೈಟ್ https://cetonline.karnataka.gov.in/kea/vdptrecnhk2025ನಲ್ಲಿ ಲಭ್ಯವಿರುವ ಲಿಂಕ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಇಎ ಜ.10, 11ರ ಪರೀಕ್ಷೆ ತಾತ್ಕಾಲಿಕ ಫಲಿತಾಂಶ ಹೇಗೆ ಪರಿಶೀಲನೆ ಮಾಡುವುದು?
ಹಂತ-1 ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/ಕ್ಕೆ ಭೇಟಿ.
ಹಂತ-2 ಮುಖಪುಟದ → ನೇಮಕಾತಿ ವಿಭಾಗ → ವಿವಿಧ ಇಲಾಖೆಗಳ ನೇಮಕಾತಿ(NON-HK)-2025 → “ವಿವಿಧ ಇಲಾಖೆ ನೇಮಕಾತಿ (NHK)- 2025 ತಾತ್ಕಾಲಿಕ ಫಲಿತಾಂಶಗಳ ಲಿಂಕ್ (10/01/2026 ಮತ್ತು 11/01/2026 ರಂದು ನಡೆದ ಪರೀಕ್ಷೆಗೆ). 19/01/2026” ಲಿಂಕ್ ಮೇಲೆ ಒತ್ತಿ, ತಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಭರ್ತಿ ಮಾಡಿ, “ಸಲ್ಲಿಸು” ಬಟನ್ ಒತ್ತುವ ಮೂಲಕ ತಾತ್ಕಾಲಿಕ ಫಲಿತಾಂಶ ಪರಿಶೀಲನೆ ಮಾಡಬಹುದು.
Important Direct Links:
KEA January 10, 11 Provisional Examination Result 2026 Link