– ಕೆಎಚ್ ಚಿತ್ರ, ಕೆಇಎ ಕನ್ನಡ ಭಾಷಾ ಪರೀಕ್ಷೆ ಹಾಲ್ ಟಿಕೆಟ್ ಬಿಡುಗಡೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಡಿ.28ರಂದು ನಡೆಸಲಿರುವ ಕನ್ನಡ ಭಾಷಾ ಪರೀಕ್ಷೆಯ ಪ್ರವೇಶ ಪತ್ರವನ್ನು ಮಂಗಳವಾರ ಬಿಡುಗಡೆಗೊಳಿಸಿದೆ.
ಕಲ್ಯಾಣ ಕರ್ನಾಟಕ ಮತ್ತು ಮೂಲ ಉಳಿಕೆ ವೃಂದದ ಹುದ್ದೆಗಳ ಭರ್ತಿಗಾಗಿ ಅಕ್ಟೋಬರ್ 08, 31 ಮತ್ತು ನ.15 ರಂದು ಅಧಿಸೂಚಿತ ಹುದ್ದೆಗಳಿಗೆ ಸಂಬಂಧಿಸಿದಂತೆ ಡಿ.28ರಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ಅರ್ಹತಾ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಪ್ರಾಧಿಕಾರ ಅಧಿಕೃತ ಜಾಲತಾಣ https://cetonline.karnataka.gov.in/ಕ್ಕೆ ಭೇಟಿ ನೀಡಿ ತಮ್ಮ ಪ್ರವೇಶ ಪತ್ರ ಪಡೆದುಕೊಳ್ಳಬಹುದು.
ಕೆಇಎ ಕನ್ನಡ ಭಾಷಾ ಪರೀಕ್ಷೆ ಹಾಲ್ ಟಿಕೆಟ್ ಡೌನ್ಲೋಡ್ ಮಾಡುವುದು ಹೇಗೆ.?
ಹಂತ-1 ಕೆಇಎ ಅಧಿಕೃತ ಜಾಲತಾಣದ ಲಿಂಕ್ https://cetonline.karnataka.gov.in/KEA_EXAM_PORTAL/Forms/Candidates/Loginಗೆ ಭೇಟಿ ನೀಡಿ.
ಹಂತ-2 ಮುಖ ಪುಟದಲ್ಲಿ ನೀಡಲಾಗಿರುವ “ಪರೀಕ್ಷೆ” ವಿಭಾಗದಲ್ಲಿ “Various Departments Recruitment Exam (KANNADA) -2025” ಅನ್ನು ಆಯ್ಕೆ ಮಾಡಿಕೊಳ್ಳಿ. ಮುಂದೆ ಅರ್ಜಿ ಸಂಖ್ಯೆ, ಅಭ್ಯರ್ಥಿಯ ಹೆಸರು, ಕ್ಯಾಪ್ಚಾ ನಮೂದಿಸಿ “ಸಲ್ಲಿಸು” ಬಟನ್ ಮೇಲೆ ಒತ್ತುವ ಮೂಲಕ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.